ತಿರುವನಂತಪುರಂ (ಕೇರಳ) – ಮಲಪ್ಪುರಂನಲ್ಲಿ 2 ವರ್ಷಗಳ ಕಾಲ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಉನೈಸ (ವಯಸ್ಸು 29) ಎಂಬಾತನಿಗೆ ನ್ಯಾಯಾಲಯ 87 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಹಾಗೆಯೇ 4 ಲಕ್ಷದ 60 ಸಾವಿರ ದಂಡವನ್ನೂ ವಿಧಿಸಿದೆ. ಈ ದಂಡದ ಮೊತ್ತವನ್ನು ಅಪ್ರಾಪ್ತ ಸಂತ್ರಸ್ಥೆಗೆ ನೀಡಲಾಗುವುದು. ಉನೈಸ್ ದಂಡವನ್ನು ಪಾವತಿಸದಿದ್ದರೆ, ಅವನ ಶಿಕ್ಷೆಯ ಪ್ರಮಾಣ ಹೆಚ್ಚಾಗುತ್ತದೆ. ಪೋಕ್ಸೊ ಮತ್ತು ಇತರ ಅಪರಾಧಗಳಿಗಾಗಿ ನ್ಯಾಯಾಲಯವು ಅವನಿಗೆ ಶಿಕ್ಷೆ ವಿಧಿಸಿದೆ. 2020 ರಿಂದ 2022 ರ ನಡುವೆ, ಉನೈಸ್ ಸಂತ್ರಸ್ತೆಯ ಮನೆಗೆ ಬಲವಂತವಾಗಿ ಪ್ರವೇಶಿಸಿ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆಗೆ ಬೆದರಿಕೆ ಹಾಕಿ ಬಳಿಕ ಆಕೆಯ ನಗ್ನ ಚಿತ್ರವನ್ನೂ ತೆಗೆದುಕೊಂಡಿದ್ದಾನೆ ಮತ್ತು ಅದನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಸಂಪಾದಕೀಯ ನಿಲುವುಇಂತಹವರನ್ನು ಜೀವಮಾನವಿಡೀ ಪೋಷಿಸುವ ಬದಲು ಗಲ್ಲು ಶಿಕ್ಷೆ ವಿಧಿಸುವುದು ಆವಶ್ಯಕವೆಂದು ಜನರು ಭಾವಿಸುತ್ತಾರೆ ! |