|
ರಾಜಕೋಟ (ಗುಜರಾತ) – ವಕ್ಫ್ ಬೋರ್ಡ್‌ನ ಆಸ್ತಿ ಎಂದು ಹೇಳಿ ಮತಾಂಧ ಮುಸ್ಲಿಮರು ಹಿಂದೂಗಳ ಅಂಗಡಿಗಳನ್ನು ಬಲವಂತವಾಗಿ ವಶಪಡಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಆ ನಂತರ, ಹಿಂದೂ ಅಂಗಡಿಗಳಿಂದ ವಸ್ತುಗಳನ್ನು ಬೀದಿಗೆ ಎಸೆದ ಫಾರೂಕ್ ಮುಸಾನಿ ಸೇರಿದಂತೆ 8 ಮತಾಂಧ ಮುಸ್ಲಿಮರನ್ನು ಪೊಲೀಸರು ಬಂಧಿಸಿದ್ದಾರೆ.
1. ಡಿಸೆಂಬರ್ 31, 2024 ರ ರಾತ್ರಿ, ಫಾರೂಕ್ ಮುಸಾನಿ ನೇತೃತ್ವದಲ್ಲಿ ಸುಮಾರು 20-25 ಮುಸ್ಲಿಮರ ಗುಂಪೊಂದು ಹಳೆಯ ದಾನಪೀಠ ಪ್ರದೇಶದಲ್ಲಿ ಎರಡು ಅಂಗಡಿಗಳ ಬೀಗಗಳನ್ನು ಮುರಿದು ಸರಕುಗಳನ್ನು ರಸ್ತೆಗೆ ಎಸೆದಿದೆ.
2. ಆ ಸಮಯದಲ್ಲಿ ಅವರು `ಈ ಅಂಗಡಿಗಳು ವಕ್ಫ್ ಬೋರ್ಡ್‌ನ ಆಸ್ತಿಯಾಗಿದ್ದು, ತೆರವು ಮಾಡಬೇಕು’, ಎಂದು ದಾವೆ ಮಾಡಿದ್ದರು. ‘ಈ ಅಂಗಡಿಗಳನ್ನು ಹಲವು ದಶಕಗಳಿಂದ ಬಾಡಿಗೆಯ ಆಧಾರದಲ್ಲಿ ತೆಗೆದುಕೊಳ್ಳಲಾಗಿದ್ದು, ಈ ಜಮೀನು ವಕ್ಫ್ ಬೋರ್ಡ್‌ಗೆ ಸೇರಿಲ್ಲ, ಬದಲಾಗಿ ಲೋಕೋಪಯೋಗಿ ಇಲಾಖೆಗೆ ಸೇರಿದೆ’, ಎಂದು ಹಿಂದೂ ಅಂಗಡಿಕಾರರು ಸ್ಪಷ್ಟಪಡಿಸಿದರು.
3. ವಕ್ಫ್ ಬೋರ್ಡ್ ಹೆಸರಿನಲ್ಲಿ ನಡೆಯುತ್ತಿರುವ ಈ ಗೂಂಡಾಗಿರಿಯಿಂದ ರಕ್ಷಣೆ ಮತ್ತು ನ್ಯಾಯ ಒದಗಿಸಬೇಕೆಂದು ಹಿಂದೂ ಅಂಗಡಿಕಾರರು ಆಗ್ರಹಿಸಿದ್ದಾರೆ.
4. ಈ ಪ್ರಕರಣದಲ್ಲಿ ಪೊಲೀಸರು ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡಿದ ಗುಜರಾತ ಗೃಹ ಸಚಿವ ಹರ್ಷ ಸಾಂಘ್ವಿ ಇವರು, ಎಲ್ಲಾ ಅಂಗಡಿಗಳನ್ನು ಮತ್ತೆ ತೆರೆಯಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ’, ಎಂದು ಹೇಳಿದ್ದಾರೆ.
5. ಪೊಲೀಸರು ಈ ಪ್ರಕರಣದ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದು, ವಕ್ಫ್ ಬೋರ್ಡ್‌ನ ಆದೇಶದ ಸಿಂಧುತ್ವವನ್ನೂ ಪರಿಶೀಲಿಸಲಾಗುತ್ತಿದೆ.
ಸಂಪಾದಕೀಯ ನಿಲುವು
|