ದೇವಸ್ಥಾನ ಸಂಸ್ಕೃತಿ ರಕ್ಷಣೆಗಾಗಿ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನದ ಪ್ರಾರಂಭ !
ಬೆಂಗಳೂರು : ಬಹುತ್ ಸಹಲಿಯಾ, ಅಬ್ ನಹೀ ಸಹೇಂಗೆ; ಹಿಂದೂ ಹಕ್ ಲೇಕರ್ ರಹೇಂಗೆ ! ‘ಸಮಯ ಕೀ ಮಜ್ಬೂರೀ ಹೆ’. ಸನಾತನ ಬೋರ್ಡ್ ಝರೂರೀ ಹೆ ! ಈ ಪ್ರಭಾವಶಾಲಿ ಘೋಷಣೆಯೊಂದಿಗೆ ಪೂ. ದೇವಕಿನಂದನ ಠಾಕೂರ ಇವರು ಉಪಸ್ಥಿತ ಹಿಂದುಗಳನ್ನು ಜಾಗೃತ ಗೊಳಿಸಿದರು. ಸನಾತನ ಎಂದಿಗೂ ಸ್ವತಂತ್ರವಾಗಿರಬೇಕೆಂದು ಕರ್ನಾಟಕದಲ್ಲಿ ಸನಾತನ ಬೋರ್ಡ್ ಸ್ಥಾಪನೆ ಆಗಲು ಕರ್ನಾಟಕ ಸರ್ಕಾರಕ್ಕೆ ಆಗ್ರಹಿಸಲಾಯಿತು. ಸಂಸ್ಕೃತಿ ರಕ್ಷಣೆಯಾಗಬೇಕಾದರೆ ದೇವಸ್ಥಾನಗಾಳ ರಕ್ಷಣೆ ಆಗಬೇಕು ಮತ್ತು ಇದು ಹಿಂದೂಗಳು ಒಂದಾದರೆ ಮಾತ್ರ ಸಾಧ್ಯ ಎಂದು ಉಪಸ್ಥಿತ ಹಿಂದೂ ಬಾಂಧವರಿಗೆ ದೇವಸ್ಥಾನ ರಕ್ಷಣೆಗಾಗಿ ಹೋರಾಡಲು ಕರೆ ನೀಡಿದರು.
ದೇವಸ್ಥಾನಗಳ ಸಂಸ್ಕೃತಿಯ ರಕ್ಷಣೆಗಾಗಿ ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಆಯೋಜನೆಯಲ್ಲಿ ‘ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ’ವು ಗಂಗಮ್ಮ ತಿಮ್ಮಯ್ಯ ಕನ್ವೆಂಷನ್ ಹಾಲ್, ಬಸವೇಶ್ವರ ನಗರ, ಬೆಂಗಳೂರಿನಲ್ಲಿ ಶಂಖನಾದದೊಂದಿಗೆ ಪ್ರಾರಂಭಿಸಲಾಯಿತು. ಪೂ. ದೇವಕಿನಂದನ ಠಾಕೂರ, ಸಂಸ್ಥಾಪಕರು, ವಿಶ್ವ ಶಾಂತಿ ಸೇವಾ ಟ್ರಸ್ಟ್ ಮತ್ತು ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ, ನ್ಯಾಯವಾದಿ ಪ್ರಮಿಳಾ ನೇಸರ್ಗಿ, ಹಿರಿಯ ವಕೀಲರು, ಕರ್ನಾಟಕ ಉಚ್ಚ ನ್ಯಾಯಾಲಯ, ಶ್ರೀ. ನಂದಕುಮಾರ್ ಐಎಎಸ್, ನಿವೃತ್ತ ಆಯುಕ್ತರು, ಮುಜರಾಯಿ ಇಲಾಖೆ, ಕರ್ನಾಟಕ ಸರಕಾರ, ಪದ್ಮಶ್ರೀ ಶ್ರೀ. ಆರ್. ವಿ. ಗೌರಿಶಂಕರ್, ನಿಕಟಪೂರ್ವ ಆಡಳಿತಾಧಿಕಾರಿಗಳು, ಶೃಂಗೇರಿ ಮಹಾಸಂಸ್ಥಾನ, ಗೋವಿಂದ ಬಾಬು ಪೂಜಾರಿ, ವ್ಯವಸ್ಥಾಪಕೀಯ ನಿರ್ದೇಶಕರು, ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್, ಶ್ರೀ. ಸುನಿಲ್ ಘನವಟ, ರಾಷ್ಟ್ರೀಯ ಸಂಘಟಕರು, ಮಂದಿರ ಮಹಾಸಂಘ ಇವರು ದೀಪಪ್ರಜ್ವಲನೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಈ ಅಧಿವೇಶನದಲ್ಲಿ ರಾಜ್ಯದಾದ್ಯಂತದ ದೇವಸ್ಥಾನ ವಿಶ್ವಸ್ಥರು, ಪ್ರತಿನಿಧಿಗಳು, ಪುರೋಹಿತರು, ದೇವಸ್ಥಾನದ ರಕ್ಷಣೆಗಾಗಿ ಹೋರಾಡುವ ನ್ಯಾಯವಾದಿಗಳು ಮುಂತಾದವರಿಂದ ಸಭಾಂಗಣವು ತುಂಬಿ ಸಜ್ಜುಗೊಂಡಿತು.
ಭಾರತಾದ್ಯಂತ ಮಂದಿರ ಮಹಾಸಂಘದ ಕಾರ್ಯಕ್ಕೆ ಹಿಂದೂಗಳ ಅತ್ಯುತ್ತಮ ಬೆಂಬಲದಿಂದ ಸಿಕ್ಕಿದ ಯಶಸನ್ನು ಹೇಳಿದರು. ಕರ್ನಾಟಕ ರಾಜ್ಯದ ದೇವಸ್ಥಾನಗಳ ಅಭಿವೃದ್ಧಿಗಾಗಿ ಹಿಂದೂಗಳು ತಮ್ಮ ಕೈ ಜೋಡಿಸಬೇಕೆಂದು ಕರ್ನಾಟಕ ಮಂದಿರ ಮಹಾಸಂಘದ ಸಂಯೋಜಕರಾದ ಶ್ರೀ ಮೋಹನ್ ಗೌಡ ಇವರು ಕರೆ ನೀಡಿದರು.
‘ರೋಗಿಗಳ ಸೇವೆ – ಶುಶ್ರೂಷೆಯನ್ನು ‘ಸಾಧನೆ’ ಎಂದು ಹೇಗೆ ಮಾಡಬೇಕು ?’ ಸನಾತನ ಸಂಸ್ಥೆ ನಿರ್ಮಿತ ಕಿರು ಗ್ರಂಥವನ್ನು ಬಿಡುಗಡೆ ಮಾಡಲಾಯಿತು.