ಮುರ್ಶಿರಾಬಾದ (ಬಂಗಾಳ)ನಲ್ಲಿ ಶ್ರೀ ಮಹಾಕಾಳಿ ದೇವಿಯ ಮೆರವಣಿಗೆಯ ಮೇಲೆ ಗುಂಡಿನ ದಾಳಿ : ಓರ್ವನಿಗೆ ಗಾಯ

ಮುರ್ಶಿದಾಬಾದ (ಬಂಗಾಳ) – ಇಲ್ಲಿನ ಸರಬಂಗಪುರದಲ್ಲಿ ಶ್ರೀ ಮಹಾಕಾಳಿ ದೇವಿಯ ಮೆರವಣಿಗೆಯ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ ನಡೆದಿದೆ. ಇದರಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಗುಂಡಿನ ದಾಳಿಯನ್ನು ಚಲಿಸುತ್ತಿದ್ದ ಬಸ್ಸಿನಿಂದ ಮಾಡಲಾಗಿದೆ. ಸ್ಥಳೀಯರು ಬಸ್ ತಡೆದು ನಿಯಂತ್ರಿಸಿದರು. ನಂತರ ಅವರು ರಸ್ತೆ ತಡೆ ಚಳವಳಿ ಆರಂಭಿಸಿದರು. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಆಗಮಿಸಿದರು.

ಮುರ್ಶಿದಾಬಾದನಲ್ಲಿ ಮುಸಲ್ಮಾನನ ಮನೆಯಲ್ಲಿ ಬಾಂಬ್ ಸ್ಫೋಟ

ಮುರ್ಶಿದಾಬಾದ್‌ನ ರಾಮಕೃಷ್ಣ ಪಲ್ಲಿ ಪ್ರದೇಶದಲ್ಲಿ ಓರ್ವ ಮುಸಲ್ಮಾನನ ಮನೆಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಫರೀದ ಶೇಖ್ ಹೆಸರಿನ ವ್ಯಕ್ತಿ ಗಾಯಗೊಂಡಿದ್ದಾನೆ. ಫರೀದ ಶೇಖ್ ತೃಣಮೂಲ ಕಾಂಗ್ರೆಸ್ ನಾಯಕ ಎಂದು ಭಾಜಪ ಶಾಸಕ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ ಹಾಗೂ ಈ ಘಟನೆಯ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಸ್ಫೋಟದ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲಿಸರು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಘಟನೆಗಳೇ ಬಂಗಾಳದಲ್ಲೂ ನಡೆಯುತ್ತಿರುವುದು ಹಿಂದೂಗಳಿಗೆ ನಾಚಿಕೆಗೇಡು ! ಬಂಗಾಳದಲ್ಲಿ ಹಿಂದೂಗಳು ಇನ್ನೂ ಎಷ್ಟು ವರ್ಷ ತೃಣಮೂಲ ಕಾಂಗ್ರೆಸ್ ಅನ್ನು ಅಧಿಕಾರದಲ್ಲಿ ಇಡುತ್ತಾರೆ ?