ಅತ್ಯಾಚಾರದ ಆರೋಪಿಯು ಪರಾರಿಯಾಗುತ್ತಿರುವಾಗ ಪೊಲೀಸರು ಗುಂಡುಹಾರಾಟ ಮಾಡಲೇ ಬೇಕಾಗುತ್ತದೆ ! – ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಗೌಹಾಟಿ (ಅಸ್ಸಾಂ) – ಅತ್ಯಾಚಾರ ಅಪರಾಧವಿರುವ ಆರೋಪಿಯು ಪರಾರಿಯಾಗುತ್ತಿದ್ದರೆ ಮತ್ತು ಆತ ಪೊಲೀಸರಿಂದ ಶಸ್ತ್ರವನ್ನು ಕಸಿಯಲು ಪ್ರಯತ್ನಿಸುತ್ತಿದ್ದರೆ, ಪೊಲೀಸರು ಗುಂಡು ಹಾರಾಟ ಮಾಡಲೇ ಬೇಕಾಗುತ್ತದೆ; ಆದರೆ ಎದೆಯ ಮೇಲೆ ಅಲ್ಲ. ಕಾನೂನಿನ ಪ್ರಕಾರ ‘ನೀವು ಕಾಲಿಗೆ ಗುಂಡು ಹೊಡೆಯಬಹುದು’, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಪೊಲೀಸರ ಸಭೆಯಲ್ಲಿ ಹೇಳಿದರು. ‘ನಮಗೆ ಅಸ್ಸಾಂ ಪೊಲೀಸರು ದೇಶದ ಅತ್ಯುತ್ತಮ ಪೊಲೀಸರಾಗಬೇಕಿದೆ’, ಎಂದು ಸಹ ಅವರು ಹೇಳಿದರು.

ಮುಖ್ಯಮಂತ್ರಿ ಸರಮಾ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ಕೆಲವು ಜನರು ನನಗೆ ಹೇಳಿದರೇನೆಂದರೆ ಇತ್ತಿಚೆಗೆ ಅಪರಾಧಿಗಳು ಪೊಲೀಸರ ಹಿಡಿತದಿಂದ ತಪ್ಪಿಸಿಕೊಂಡು ಪರಾರಿಯಾಗುತ್ತಾರೆ ಮತ್ತು ಚಕಮಕಿಯಂತಹ ಘಟನೆಗಳು ದೊಡ್ಡ ಪ್ರಮಾಣದಲ್ಲಿ ಆಗುತ್ತಿದೆ ಎಂದರು. ಇದೊಂದು ‘ಪ್ಯಾಟರ್ನ್'(ಪ್ರಕಾರ) ವಾಗುತ್ತಿದೆಯೇ ? ನಾನು ಅವರಿಗೆ ‘ಅಪರಾಧಿಗಳು ಪರಾರಿಯಾಗುತ್ತಿದ್ದರೆ, ಈ ರೀತಿಯ (ಗುಂಡು ಹಾರಿಸುವ) ‘ಪ್ಯಾಟರ್ನ್’ ಇರಲೇ ಬೇಕು’, ಎಂದು ಹೇಳಿದೆ ಎಂದರು.

ಗೋಕಳ್ಳ ಸಾಗಾಟಗಾರರನ್ನು ಸುಮ್ಮನೆ ಬಿಡುವುದಿಲ್ಲ !

ಮುಖ್ಯಮಂತ್ರಿ ಸರಮಾ ಅವರು ಮಾತನಾಡುತ್ತಾ, ಗೋವು ನಮ್ಮ ತಾಯಿಯಾಗಿದೆ. ಅದು ನಮಗೆ ಹಾಲು ಕೊಡುತ್ತದೆ, ಸಗಣಿ ಕೊಡುತ್ತದೆ. ಟ್ರ್ಯಾಕ್ಟರ್ ಬರುವ ಮೊದಲು ನಾವು ಇದರ ಸಹಾಯದಿಂದ ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದೆವು ಹಾಗೂ ಈಗಲೂ ಗೋವಿನ ಮೂಲಕ ಅನೇಕ ರಾಜ್ಯಗಳಲ್ಲಿ ಕೃಷಿ ಮಾಡಲಾಗುತ್ತಿದೆ. ಈಗ ಜನರು ಪ್ರಾಣಿಗಳ ಕಳ್ಳಸಾಗಣೆ, ಮಾದಕ ಪದಾರ್ಥಗಳ ಕಳ್ಳ ಸಾಗಣೆಯಲ್ಲಿ ಸಹಭಾಗ ಆಗಿದ್ದಾರೆ. ಅವರ ಪೈಕಿ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದರು.