ಮಾಕಪ್‌ನ ಮಾಜಿ ಶಾಸಕ ಸೇರಿ 4 ಜನರಿಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 10 ಜನರಿಗೆ ಜೀವಾವಧಿ ಶಿಕ್ಷೆ

ಕೇರಳದಲ್ಲಿ ಇಬ್ಬರು ಕಾಂಗ್ರೆಸ್ ನಾಯಕರ ಕೊಲೆ ಪ್ರಕರಣ

ಕೊಚ್ಚಿ (ಕೇರಳ) – ಇಬ್ಬರು ಕಾಂಗ್ರೆಸ್ ನಾಯಕರ ಹತ್ಯೆ ಪ್ರಕರಣದಲ್ಲಿ ಕೊಚ್ಚಿಯ ಸಿಬಿಐ ನ್ಯಾಯಾಲಯವು ಮಾರ್ಕ್ಸಿಸ್ಟ್ ಕಮ್ಯುನಿಸ್ಟ್ ಪಕ್ಷದ ಮಾಜಿ ಶಾಸಕ ಕೆ.ವಿ. ಕುಂಞಿರಾಮನ್ ಹಾಗೂ ಇತರ ಮೂವರಿಗೆ ದೋಷಿ ಎಂದು ಪರಿಗಣಿಸಿ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಕ್ಟೋಬರ್ 2019 ರಲ್ಲಿ, ಕೇರಳದ ಕಾಸರಗೋಡು ಜಿಲ್ಲೆಯ ಪೆರಿಯಾದಲ್ಲಿ ಕಾಂಗ್ರೆಸ್ಸಿನ ನಾಯಕರಾದ ಕೃಪೇಶ್ ಮತ್ತು ಸರತಲಾಲ್ ಅವರನ್ನು ಹತ್ಯೆ ಮಾಡಲಾಗಿತ್ತು.

ಕೆ.ವಿ. ಕುಂಞಿರಾಮನ್ ಹಂತಕರಿಗೆ ಸಹಾಯ ಮಾಡಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಆರೋಪಿಗಳ ಪೈಕಿ 14 ಆರೋಪಿಗಳನ್ನು ದೋಷಿ ಎಂದು ನ್ಯಾಯಾಲಯವು ತೀರ್ಪು ನೀಡಿದ್ದು, 10 ಜನರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ. ಈ ಹಿಂದೆ ಕೇರಳ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದರು; ಆದರೆ ಹೈಕೋರ್ಟ್ ನ ಆದೇಶದಂತೆ ಅದನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. (ಸಿಬಿಐ ತನಿಖೆಯಿಂದಾಗಿಯೇ ಆಡಳಿತಾರೂಢ ಸಿಪಿಐ(ಎಂ) ಕಾರ್ಯಕರ್ತರನ್ನು ಹಿಡಿದು ಅವರಿಗೆ ಶಿಕ್ಷಿಸಲಾಯಿತು. ಕೇರಳ ಪೊಲೀಸರು ಈ ಪ್ರಕರಣವನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ, ಇದು ಇದರಿಂದ ಸ್ಪಷ್ಟವಾಗುತ್ತದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಸುಳ್ಳು ಆರೋಪ ಹೊರಿಸಿ ಆ ಸಂಘಟನೆಗಳನ್ನು ನಿಷೇಧಿಸಲು ಆಗ್ರಹಿಸುತ್ತಿರುವವರು ಈಗ ಸಿಪಿಐ(ಎಂ) ಅನ್ನು ನಿಷೇಧಿಸಲು ಏಕೆ ಒತ್ತಾಯಿಸುತ್ತಿಲ್ಲ ? ರಾಜಕೀಯ ಪಕ್ಷಗಳು, ತಥಾಕಥಿತ ಪ್ರಗತಿ(ಅಧೋ)ಪರರು ಮತ್ತು ಜಾತ್ಯತೀತವಾದಿಗಳು ಈಗ ಏಕೆ ಮೌನವಾಗಿದ್ದಾರೆ ?