ದೆಹಲಿಯಲ್ಲಿ 140 ಕೋಟಿ ರೂಪಾಯಿ ವೆಚ್ಚದಲ್ಲಿ ವೀರ್ ಸಾವರ್ಕರ್ ಮಹಾವಿದ್ಯಾಲಯ ನಿರ್ಮಾಣ !

ಪ್ರಧಾನಿ ನರೇಂದ್ರ ಮೋದಿ ಇವರಿಂದ ಶಂಕುಸ್ಥಾಪನೆ

ನವದೆಹಲಿ – ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 3 ರಂದು ವೀರ್ ಸಾವರ್ಕರ್ ಮಹಾವಿದ್ಯಾಲಯದ ಶಂಕುಸ್ಥಾಪನೆ ನೆರವೇರಿಸಿದರು. ದೆಹಲಿಯ ನಜಫ್‌ಗಡದಲ್ಲಿ ಈ ಮಹಾವಿದ್ಯಾಲಯ ನಿರ್ಮಾಣ ಆಗುತ್ತಿದೆ. ಇದು ದೆಹಲಿ ವಿಶ್ವವಿದ್ಯಾಲಯದ ಸಂಯೋಜಿತವಾಗಿರುತ್ತದೆ. 30 ವರ್ಷಗಳ ನಂತರ ದೆಹಲಿ ವಿಶ್ವವಿದ್ಯಾಲಯಕ್ಕೆ ಹೊಸ ಮಹಾವಿದ್ಯಾಲಯ ಸಿಗಲಿದೆ. 140 ಕೋಟಿ ವೆಚ್ಚದಲ್ಲಿ ವೀರ ಸಾವರ್ಕರ್ ಮಹಾವಿದ್ಯಾಲಯ ನಿರ್ಮಾಣವಾಗಲಿದೆ. ಈ ಮಹಾವಿದ್ಯಾಲಯ 18 ಸಾವಿರ ಚದರ ಮೀಟರ್‌ಗಿಂತಲೂ ಅಧಿಕ ಪ್ರದೇಶದಲ್ಲಿ ಹರಡಿಕೊಂಡಿದ್ದು, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುತ್ತದೆ. ಕಾಲೇಜಿನಲ್ಲಿ 24 ತರಗತಿ ಕೊಠಡಿಗಳು ಮತ್ತು 8 ಟ್ಯುಟೋರಿಯಲ್ ಕೊಠಡಿಗಳನ್ನು((ಇಂತಹ ಕೊಠಡಿಗಳಲ್ಲಿ ಸಣ್ಣ ಗುಂಪು ಮಾಡಿ ಒಂದೇ ವಿಷಯದ ಬಗ್ಗೆ ಚರ್ಚೆ ನಡೆಸಲಾಗುವುದು) ಹೊಂದಿರುತ್ತದೆ. ಈ ಮಹಾವಿದ್ಯಾಲಯದಲ್ಲಿ ಗ್ರಂಥಾಲಯ, ಕ್ಯಾಂಟೀನ್ ಮತ್ತು ಶಿಕ್ಷಕರಿಗಾಗಿ 40 ಕೊಠಡಿಗಳು ಇರುತ್ತವೆ.

ಸಂಪಾದಕೀಯ ನಿಲುವು

ಕೇಂದ್ರ ಸರಕಾರದ ಶ್ಲಾಘನೀಯ ನಿರ್ಧಾರ ! ಅಂತಹ ಮಹಾವಿದ್ಯಾಲಯಗಳಲ್ಲಿ ರಾಷ್ಟ್ರ ಮತ್ತು ಹಿಂದೂ ಧರ್ಮದ ಶಿಕ್ಷಣವೂ ಸಿಗಬೇಕು, ಎಂದು ಹಿಂದೂಗಳು ಅಪೇಕ್ಷಿಸುತ್ತಾರೆ !