ಮಹಾಕುಂಭ ಮೇಳದ ಭೂಮಿ ವಕ್ಫ್ ಬೋರ್ಡ್‌ ಗೆ ಸೇರಿದೆಯಂತೆ !

  • ‘ಆಲ್ ಇಂಡಿಯಾ ಮುಸ್ಲಿಂ ಜಮಾತ್’ ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಬುದ್ದೀನ್ ರಝವಿ ಇವರ ಖೇದಕರ ಮಾಹಿತಿ

  • ಮುಸಲ್ಮಾನರು ದೊಡ್ಡ ಮನಸ್ಸು ಮಾಡಿ ಮಹಾಕುಂಭಕ್ಕೆ ಭೂಮಿ ಕೊಟ್ಟರು ಎಂದು ಖೇದಕರ ಹೇಳಿಕೆ

  • ಅಖಾಡಾ ಪರಿಷತ್ ಸಹಿತ ಹಿಂದೂಗಳಲ್ಲಿ ಆಕ್ರೋಶ

ಬರೇಲಿ (ಉತ್ತರಪ್ರದೇಶ) – ಪ್ರಯಾಗರಾಜ ಇಲ್ಲಿ ಮಹಾಕುಂಭಮೇಳದ ಸಿದ್ಧತೆ ನಡೆಯುತ್ತಿದೆ; ಆದರೆ ಎಲ್ಲಿ ಈ ಸಿದ್ಧತೆ ನಡೆಯುತ್ತಿದೆ ಆ ಭೂಮಿ ವಕ್ಫ್ ಬೋರ್ಡ್ ನದ್ದಾಗಿದೆ. ಮುಸಲ್ಮಾನರು ದೊಡ್ಡ ಮನಸ್ಸಿನಿಂದ ಇದರ ಕುರಿತು ಆಕ್ಷೇಪ ವ್ಯಕ್ತಪಡಿಸಿಲ್ಲ. ಬಾಬಾ ಜನರು (ಹಿಂದುಗಳ ಸಾಧು ಸಂತರು) ಮುಸಲ್ಮಾನರ ವಿರುದ್ಧವಾಗಿದ್ದಾರೆ. ಇಂತಹ ಸಂಕುಚಿತ ದೃಷ್ಟಿಕೋನ ಬಿಡಬೇಕಾಗುವುದು. ಮುಸಲ್ಮಾನರು ದೊಡ್ಡ ಧೈರ್ಯ ತೋರಿದ್ದಾರೆ ಮತ್ತು ಅವರು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಇದರ ಕುರಿತು ಸಾಧು ಸಂತರು ಯೋಚಿಸಬೇಕು, ಎಂದು ‘ಆಲ್ ಇಂಡಿಯಾ ಮುಸ್ಲಿಂ ಜಮಾತ್’ ದ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಶಹಬುದ್ದೀನ್ ರಝವಿ ಇವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ರಝವಿ ಇವರು ಕುಂಭಮೇಳದ ಸ್ಥಳದಲ್ಲಿ ಮುಸಲ್ಮಾನರ ಮತಾಂತರ ಆಗುವುದು ಎಂದು ಆರೋಪಿಸಿದ್ದರು.

ಸಂಪಾದಕೀಯ ನಿಲುವು

  • ಇದರಿಂದ ಮತಾಂಧ ಮುಸಲ್ಮಾನರು ಹಿಂದುಗಳ ಮೇಲೆ ಉಪಕಾರ ಮಾಡುತ್ತಿದ್ದಾರೆ, ಎಂದು ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಷ್ಟಾದರೂ ಕೂಡ ವಕ್ಫ್ ಬೋರ್ಡ್ ರದ್ದು ಪಡಿಸದೇ ಇರುವುದು, ಇದು ಹಿಂದುಗಳಿಗೆ ಲಜ್ಜಾಸ್ಪದವೇ ಆಗಿದೆ !
  • ಇಂತಹ ಉದ್ಧಟ ಮುಸಲ್ಮಾನ ನಾಯಕರ ಮೇಲೆ ಸರಕಾರ ಈಗಲೇ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಭವಿಷ್ಯದಲ್ಲಿ ಸಂಪೂರ್ಣ ಭಾರತವೇ ವಕ್ಫ್ ಭೂಮಿ ಆಗಿದೆ ಎಂದು ಹೇಳಲು ಕೂಡ ಅವರು ಹಿಂದೆ ಮುಂದೆ ನೋಡಲಾರರು !