ಸಂಭಲ್ (ಉತ್ತರ ಪ್ರದೇಶ) ಇಲ್ಲಿನ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯ ವರದಿ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಕೆ

ಮಸೀದಿಯು ಈ ಹಿಂದೆ ದೇವಸ್ಥಾನವಾಗಿತ್ತು ಎಂಬುದಕ್ಕೆ ಸಾಕ್ಷಿಗಳು ಲಭ್ಯ ! – ಮೂಲಗಳ ಮಾಹಿತಿ

ಸಂಭಲ್ (ಉತ್ತರ ಪ್ರದೇಶ) – ಸಂಭಲ್ ನ್ಯಾಯಾಲಯದ ಆಯುಕ್ತ ರಮೇಶ ಸಿಂಗ್ ರಾಘವ ಅವರು ಇಲ್ಲಿನ ಶಾಹಿ ಜಾಮಾ ಮಸೀದಿಯ ರಚನೆಯ ಸಮೀಕ್ಷೆಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಚಂದೌಸಿ ನ್ಯಾಯಾಲಯದಲ್ಲಿ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಆದಿತ್ಯ ಸಿಂಗ ಅವರಿಗೆ ಸಲ್ಲಿಸಿದರು. ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ಈ ಲಕೋಟೆಯನ್ನು ತೆರೆಯಲಾಗುವುದು. ಈ ವರದಿಯು 45 ಪುಟಗಳನ್ನು ಹೊಂದಿದೆ. ಮೂಲಗಳ ಪ್ರಕಾರ, ಈ ವರದಿಯು ಈ ವಾಸ್ತುವಿನ ಸ್ಥಳದಲ್ಲಿ ಹಿಂದೂ ದೇವಸ್ಥಾನವಿರುವ ಬಗ್ಗೆ ಬಲವಾದ ಪುರಾವೆಗಳನ್ನು ಹೊಂದಿದೆ.

ಸಮೀಕ್ಷೆಯ ವರದಿಯು ಸರಿಸುಮಾರು ನಾಲ್ಕೂವರೆ ಗಂಟೆಗಳ ಚಿತ್ರೀಕರಣದ, ಹಾಗೆಯೇ ಛಾಯಾಚಿತ್ರಗಳನ್ನು ಒಳಗೊಂಡಿದೆ. ಇದರಲ್ಲಿ ಸುಮಾರು 1 ಸಾವಿರದ 200 ಛಾಯಾಚಿತ್ರಗಳನ್ನು ತೆಗೆಯಲಾಗಿದೆ. ಸಮೀಕ್ಷೆಯ ಮೊದಲ ದಿನ, ನವೆಂಬರ್ 19, 2024 ರಂದು, ಸುಮಾರು ಒಂದೂವರೆ ಗಂಟೆಗಳ ಚಿತ್ರೀಕರಣ ಮತ್ತು ಛಾಯಾಚಿತ್ರಗಳನ್ನು ತೆಗೆಯಲಾಗಿದೆ.

ಮಸೀದಿಯಲ್ಲಿ ಏನು ಪತ್ತೆಯಾಗಿದೆ?

1. ಮಾಹಿತಿಯನುಸಾರ ಈ ವರದಿಯಲ್ಲಿ, ಮಸೀದಿಯ ಪರಿಸರದಲ್ಲಿ 2 ಆಲದ ಮರಗಳಿವೆ, ಅವುಗಳು ಸಾಮಾನ್ಯವಾಗಿ ಹಿಂದೂ ದೇವಸ್ಥಾನಗಳಿಗೆ ಸಂಬಂಧಿಸಿರುತ್ತದೆ ಮತ್ತು ಅಲ್ಲಿ ಪೂಜಿಸಲಾಗುತ್ತದೆ.

2. ಇಲ್ಲಿ ಒಂದು ಬಾವಿಯೂ ಇದೆ, ಅದರ ಒಂದು ಭಾಗವು ಮಸೀದಿಯ ಪರಿಸರದ ಒಳಗೆ ಇದೆ ಮತ್ತು ಇನ್ನೊಂದು ಭಾಗವು ಹೊರಗೆ ಇದೆ. ಬಾವಿಯ ಹೊರಭಾಗವನ್ನು ಮುಚ್ಚಲಾಗಿತ್ತು.

3. ಜಾಮಾ ಮಸೀದಿಯ ಒಳಗೆ 500 ಕ್ಕೂ ಹೆಚ್ಚು ಹೂವಿನ ರೇಖಾಚಿತ್ರಗಳು ಮತ್ತು ಶಿಲ್ಪಗಳು ಕಂಡುಬಂದಿವೆ. ಅಲ್ಲದೆ, ಮೂಲ ರಚನೆಯಲ್ಲಿ ಹೊಸ ನಿರ್ಮಾಣ ಮಾಡಿರುವುದು ಕಂಡುಬಂದಿದೆ.

4. ದೇವಸ್ಥಾನದ ಗೋಡೆಗಳು, ಕಿಟಕಿಗಳು ಮತ್ತು ವಿವಿಧ ರೀತಿಯಲ್ಲಿ ಅಲಂಕರಿಸಲಾದ ಗೋಡೆಗಳ ಮೇಲೆ ಸುಮಾರು 50 ಕಲಾಕೃತಿಗಳು ಕಂಡುಬಂದಿವೆ. ಈ ಕಲಾಕೃತಿಗಳನ್ನು ಮುಚ್ಚಲು ಅವುಗಳ ಮೇಲೆ ಪ್ಲಾಸ್ಟರ್ ಮತ್ತು ಬಣ್ಣವನ್ನು ಹಚ್ಚುವ ಮೂಲಕ ದೇವಸ್ಥಾನದ ಮೂಲ ವಾಸ್ತುಶಿಲ್ಪವನ್ನು ಮರೆಮಾಡಲಾಗಿದೆ.

5. ಗುಮ್ಮಟದ ಮಧ್ಯಭಾಗದಲ್ಲಿ ಗಂಟೆ ನೇತು ಹಾಕಲು ಬಳಸಲಾದ ಕಬ್ಬಿಣದ ಸರಪಳಿಯೂ ಪತ್ತೆಯಾಗಿದೆ. ಪ್ರಸ್ತುತ, ಅದರ ಮೇಲೆ ಗೊಂಚಲು ನೇತುಹಾಕಲಾಗಿದೆ. ಈ ರೀತಿಯ ಸರಪಳಿಯನ್ನು ಸಾಮಾನ್ಯವಾಗಿ ದೇವಾಲಯದಲ್ಲಿ ಗಂಟೆಯನ್ನು ನೇತುಹಾಕಲು ಅಥವಾ ಶಿವಲಿಂಗದ ಮೇಲೆ 24 ಗಂಟೆಗಳ ಜಲಾಭಿಷೇಕಕ್ಕಾಗಿ ಕಲಶವನ್ನು ನೇತುಹಾಕಲು ಬಳಸಲಾಗುತ್ತದೆ.

6. ಗುಮ್ಮಟದ ಒಂದು ಭಾಗವನ್ನು ಸಮತಟ್ಟು ಮಾಡಲಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಸಂಭಲ್‌ನ ಶಾಹಿ ಜಾಮಾ ಮಸೀದಿ ಎಂದರೆ ಹಿಂದಿನ ಶ್ರೀ ಹರಿಹರ ದೇವಾಲಯ

ಸಂಭಲ್‌ನ ಕೋಟ್ ಗರವಿಯಲ್ಲಿರುವ ಶಾಹಿ ಜಾಮಾ ಮಸೀದಿಯು ಮೊಘಲರ ಕಾಲದ್ದಾಗಿದೆ. ಅದು ಸಂಭಲ್ ಜಿಲ್ಲೆಯ ಅತ್ಯಂತ ಹಳೆಯ ವಾಸ್ತುವಿನಲ್ಲಿ ಒಂದಾಗಿದೆ. ಇದನ್ನು ಬಾಬರನ ಆದೇಶದ ಮೇರೆಗೆ ಮೀರ್ ಬೇಗ್ ಎಂಬ ಸರದಾರನು 1529 ರಲ್ಲಿ ನಿರ್ಮಿಸಿದ್ದನು. ಹಿಂದೂಗಳ ಶ್ರೀ ಹರಿಹರ ದೇವಸ್ಥಾನವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹಿಂದೂ ಪಕ್ಷದ ದಾವೆಯಾಗಿದೆ. ಈ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಇಲ್ಲಿ ಸಮೀಕ್ಷೆ ನಡೆಸಲಾಗಿದೆ.

ಸಮೀಕ್ಷೆಯ ವೇಳೆ ಮತಾಂಧ ಮುಸ್ಲಿಮರು ಹಿಂಸಾಚಾರ ನಡೆಸಿದ್ದರು

ನ್ಯಾಯಾಲಯದ ಆದೇಶದ ನಂತರ, ನವೆಂಬರ್19, 2024 ರಂದು, ಸಮೀಕ್ಷಾ ತಂಡವು ಮಸೀದಿಗೆ ಹೋದಾಗ, ಹೊರಗೆ ಸಮೂಹವು ವಿರೋಧಿಸಲು ಪ್ರಾರಂಭಿಸಿದರು. ಹಾಗಾಗಿ ಒಂದು ಗಂಟೆಯೊಳಗೆ ತಂಡ ಅಲ್ಲಿಂದ ಹೊರಡಬೇಕಾಯಿತು. ನಂತರ ನವೆಂಬರ್ 24 ರಂದು ಬೆಳಿಗ್ಗೆಯೇ ಈ ತಂಡವು ಸಮೀಕ್ಷೆಗಾಗಿ ಮಸೀದಿ ಬಳಿ ತಲುಪಿತು. ಆ ಸಮಯದಲ್ಲಿ ಮತಾಂಧ ಮುಸ್ಲಿಮರು ಹೊರಗೆ ಹಿಂಸಾಚಾರವನ್ನು ಮಾಡಿದರು. ಇದರಲ್ಲಿ 5 ಮಂದಿ ಮುಸ್ಲಿಮರು ಸಾವನ್ನಪ್ಪಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 50 ಜನರನ್ನು ಬಂಧಿಸಿದ್ದಾರೆ. ಅಲ್ಲದೆ, ಇನ್ನೂ 90 ಮಂದಿಗಾಗಿ ಶೋಧ ನಡೆಸಲಾಗುತ್ತಿದೆ.