ಆಲ್ ಇಂಡಿಯಾ ಮುಸ್ಲಿಮ್ ಜಮಾತ್’ ನ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಶಹಬುದ್ದೀನ್ ರಝವಿ ಬರೆಲವಿ ಕೆಂಡಾಮಂಡಲ
ಲಖನೌ (ಉತ್ತರ ಪ್ರದೇಶ) – ಪ್ರಯಾಗರಾಜದಲ್ಲಿ ನಡೆಯುವ ಮಹಾಕುಂಭ ದಿವ್ಯ ಮತ್ತು ಭವ್ಯ ಮಾಡುವುದಕ್ಕಾಗಿ ಉತ್ತರಪ್ರದೇಶದ ಯೋಗಿ ಸರಕಾರ ಸಮರೋಪಾದಿಯಲ್ಲಿ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ‘ಆಲ್ ಇಂಡಿಯಾ ಮುಸ್ಲಿಮ್ ಜಮಾತ್’ ದ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಬುದ್ದೀನ್ ರಝವಿ ಬರೆಲವಿ ಇವರು ಮಹಾ ಕುಂಭಮೇಳದಲ್ಲಿ ಮುಸಲ್ಮಾನರ ಮತಾಂತರದ ಕಾರ್ಯಕ್ರಮ ಆಯೋಜನೆಯ ಕುರಿತು ನಿಷೇಧ ಹೇರಲು ಆಗ್ರಹಿಸಿದ್ದಾರೆ. ಈ ಬಗ್ಗೆ ಮೌಲಾನ ಶಹಬುದ್ದೀನ್ ಇವರು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರಿಗೆ ಪತ್ರ ಬರೆದಿದ್ದಾರೆ. ಮೌಲಾನ ಈ ಪತ್ರದಲ್ಲಿ, ಮಹಾ ಕುಂಭಮೇಳದ ಸಮಯದಲ್ಲಿ ಮುಸಲ್ಮಾನರ ಮತಾಂತರವಾದರೆ, ದೇಶ ಮತ್ತು ರಾಜ್ಯದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ’, ಎಂದು ಬರೆದಿದ್ದಾರೆ. (ಭಾರತದಲ್ಲಿ ಬಿಗುವಿನ ವಾತಾವರಣ ಯಾರು ನಿರ್ಮಾಣ ಮಾಡುತ್ತಾರೆ, ಇದು ಎಲ್ಲರಿಗೂ ತಿಳಿದಿದೆ ! – ಸಂಪಾದಕರು)
मुझे सूत्रों से पता चला है कि महाकुंभ मेला प्रयागराज में कई सौ मुसलमानो का धर्मांतरण कराया जायेगा ?
धर्मांतरण कार्यक्रम कराये जाने पर प्रतिबंध लगाएं!@myogiadityanath @narendramodi @RahulGandhi @priyankagandhi @BJP4India @BJP4UP @rajnathsingh @AmitShah @DM_PRAYAGRAJ pic.twitter.com/zBA3nEp8m5— Maulana Shahabuddin Razvi Bareilvi (@Shahabuddinbrly) January 3, 2025
ಮೌಲಾನ ಶಹಬುದ್ದೀನ್ ರಝವಿ ಬರೆಲವಿ ಇವರು,
೧. ಮೂಲಗಳಿಂದ ನನಗೆ ತಿಳಿದಿರುವುದು ಏನೆಂದರೆ, ಪ್ರಯಾಗರಾಜ ಮಹಾಕುಂಭಮೇಳದಲ್ಲಿ ನೂರಾರು ಮುಸಲ್ಮಾನರು ಮತಾಂತರಗೊಳ್ಳುವರು. ನಿಮ್ಮ (ಮುಖ್ಯಮಂತ್ರಿ ಯೋಗಿ) ನೇತೃತ್ವದಲ್ಲಿ ರಾಜ್ಯ ಸರಕಾರವು ಮತಾಂತರ ವಿರೋಧಿ ಕಾನೂನು ರೂಪಿಸಿದೆ. ಈಗ ಇಂತಹ ಪರಿಸ್ಥಿತಿಯಲ್ಲಿ ಕುಂಭಮೇಳದಲ್ಲಿ ಮುಸಲ್ಮಾನರ ಮತಾಂತರವಾದರೆ, ಅದು ಮತಾಂತರ ಕಾನೂನಿನ ವ್ಯಾಪ್ತಿಗೆ ಬರುವುದು. ಆದ್ದರಿಂದ ಮತಾಂತರದ ಕಾರ್ಯಕ್ರಮವನ್ನು ನಿಷೇಧಿಸಬೇಕು.
೨. ಕುಂಭಮೇಳ ಇದು ಒಂದು ಧಾರ್ಮಿಕ ಕಾರ್ಯಕ್ರಮವಾಗಿದೆ. ಇಲ್ಲಿಂದ ಯಾವ ಸಂದೇಶ ಹೋಗುತ್ತದೆ ಅದು ಸಮಾಜವನ್ನು ಜೋಡಿಸುವುದಾಗಿರಬೇಕು, ವಿಭಾಜಿಸುವುದು ಆಗಿರಬಾರದು. (ಹಿಂದೂಗಳ ಹಬ್ಬವು ಸಮಾಜವನ್ನು ಜೋಡಿಸಲಿಕ್ಕೆ ಇರುತ್ತದೆ, ಆದ್ದರಿಂದ ಈ ಬಗ್ಗೆ ಇತರ ಧರ್ಮದವರು ಹಿಂದೂಗಳಿಗೆ ತಿಳುವಳಿಕೆ ನೀಡಬಾರದು – ಸಂಪಾದಕರು) ನೂರಾರು ಮುಸಲ್ಮಾನರು ಮತಾಂತರವಾದರೆ, ಕಟ್ಟರತಾವಾದಿ ವಿಚಾರಧಾರೆ ಇರುವ ಮುಸಲ್ಮಾನ ಸಂಘಟನೆಗಳಿಗೆ ಮತ್ತು ಕ್ರೈಸ್ತ ಮಿಷಿನರಿಗಳಿಗೆ ಇದರ ದೊಡ್ಡ ಲಾಭವಾಗುವುದು. (ಮುಸಲ್ಮಾನರ ಮತಾಂತರ ಇದು ಮತಾಂತರ ಇರುವುದಿಲ್ಲ, ಅದು ‘ಘರ ವಾಪಸಿ’ ಆಗಿರುತ್ತದೆ. ಇದರ ತದ್ವಿರುದ್ಧ ಕಟ್ಟಡವಾದಿ ಮುಸಲ್ಮಾನ ಸಂಘಟನೆಗಳು ಮತ್ತು ಕ್ರೈಸ್ತ ಮಷೀನರಿ ಸುಳ್ಳು ಆಮೀಷಗಳನ್ನು ತೋರಿಸಿ ಹಿಂದುಗಳನ್ನು ಬಲವಂತವಾಗಿ ಮತಾಂತರ ಮಾಡುತ್ತಾರೆ. ಇದರ ಕಡೆಗೆ ಮೌಲಾನ ಶಹಬುದ್ದೀನ ರಝವಿ ನಿರ್ಲಕ್ಷ ಮಾಡುತ್ತಿದ್ದಾರೆ ಇದು ಗಮನಕ್ಕೆ ಬರುತ್ತದೆ ! – ಸಂಪಾದಕರು)
ಸಂಪಾದಕೀಯ ನಿಲುವು
|