ಹಿಂದುಗಳನ್ನು ನಾವು ಜಾಗೃತಗೊಳಿಸದಿದ್ದರೆ, ಯಾರು ಗೊಳಿಸುವರು ? – ಜಗದ್ಗುರು ರಾಮಾನಂದಚಾರ್ಯ ನರೇಂದ್ರಾಚಾರ್ಯಜಿ ಮಹಾರಾಜ

ಕುಂಭ ಕ್ಷೇತ್ರದಲ್ಲಿ ಹಾಕಿರುವ ‘ಡರೇಂಗೆ ತೋ ಮರೆಂಗೆ’ ಈ ಫಲಕದ ಕುರಿತು ನಡೆಯುತ್ತಿರುವ ವಿವಾದದ ಪ್ರಕರಣ

ಪತ್ರಕರ್ತರ ಸಭೆಯಲ್ಲಿ ಮಾತನಾಡುವಾಗ (೧) ಜಗದ್ಗುರು ರಾಮಾನಂದಚಾರ್ಯ ನರೇಂದ್ರಾಚಾರ್ಯಜಿ ಮಹಾರಾಜ

ಪ್ರಯಾಗರಾಜ – ಕುಂಭ ಕ್ಷೇತ್ರದಲ್ಲಿ ನಾವು ಹಾಕಿರುವ ಫಲಕ ಜಾಗೃತಿಗಾಗಿ ಇದ್ದೂ ಇದು ಯೋಗ್ಯವೇ ಆಗಿದೆ. ಹಿಂದೂಗಳನ್ನು ನಾವು ಜಾಗೃತಗೊಳಿಸದಿದ್ದರೆ, ಅವರನ್ನು ಯಾರು ಜಾಗೃತಗೊಳಿಸುವರು ? ಎಂದು ಮಹಾರಾಷ್ಟ್ರದಲ್ಲಿನ ರತ್ನಗಿರಿ ಜಿಲ್ಲೆಯಲ್ಲಿನ ನಾಣಿಜಧಾಮ ಇಲ್ಲಿಯ ಜಗದ್ಗುರು ರಾಮಚಂದ್ರಾಚಾರ್ಯ ನರೇಂದ್ರಾಚಾರ್ಯಜಿ ಮಹಾರಾಜ ಇವರು ಪ್ರಶ್ನಿಸಿದರು. ಅಖಿಲ ಭಾರತೀಯ ಶ್ರೀ ಪಂಚ ನಿರ್ವಾಣಿ ಅಖಾಡಾದ ಛಾವಣಿಯಲ್ಲಿ ಆಯೋಜಿಸಿರುವ ಪತ್ರಕರ್ತರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಈ ಪ್ರಸಂಗದಲ್ಲಿ ಅಖಿಲ ಭಾರತೀಯ ಶ್ರೀ ಪಂಚ ನಿರ್ಮೂಹಿ ಅಖಾಡಾ, ನಿರ್ವಾಣಿ ಆಖಾಡಾ ಹಾಗೂ ದಿಗಂಬರ ಆಖಾಡಾ, ಈ ಮೂರು ವೈಷ್ಣವ ಅಖಾಡಾದ ಶ್ರೀಮಹಂತ, ಮಹಂತರು ಮುಂತಾದವರು ಉಪಸ್ಥಿತರಿದ್ದರು.
ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ ಮಹಾರಾಜ ಇವರು ಕುಂಭ ಕ್ಷೇತ್ರದಲ್ಲಿ ‘ಡರೇಂಗೆ ತೋ ಮರೆಂಗೆ’ (ಹೆದರಿದರೆ ಸಾಯುವೆವು), ಸನಾತನ ಸಾತ್ವೀಕ ಹೆ, ಕಾಯರ್ ನಹೀ’ (ಸನಾತನ ಸಾತ್ವಿಕವಾಗಿದೆ, ಹೇಡಿ ಅಲ್ಲ), ಮತ್ತು ‘ವಕ್ಫ್ ಕೆ ನಾಮ ಪರ ಸಂಪತ್ತಿ ಕೀ ಲೂಟ ಹೆ’, ಧರ್ಮನಿರಪೇಕ್ಷ ಭಾರತ ಮೆ ಯೆ ಕೈಸಿ ಛೂಟ ಹೆ’ (ವಕ್ಫ ಹೆಸರಿನಲ್ಲಿ ಆಸ್ತಿಯ ಲೂಟಿ ಇದೆ. ಜಾತ್ಯತೀತ ದೇಶದಲ್ಲಿ ಇದೆಂತಹ ಸವಲತ್ತು) ಹಾಗೂ ‘ಹಿಂದೂಗಳು ಒಗ್ಗಟ್ಟಾಗಬೇಕು’, ಹೀಗೆ ೪ ಫಲಕಗಳು ಹಾಕಲಾಗಿವೆ. ಇದು ಪ್ರಯಾಗರಾಜ ಅಷ್ಟೇ ಅಲ್ಲದೆ, ಸಂಪೂರ್ಣ ಉತ್ತರಪ್ರದೇಶದಲ್ಲಿ ಚರ್ಚೆಯ ವಿಷಯವಾಗಿದೆ. ಕೆಲವರು ಅದರ ಕುರಿತು ಟೀಕಿಸುತ್ತ ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯ ಮಹಾರಾಜರು ತಮ್ಮ ನಿಲುವನ್ನು ಸ್ಪಷ್ಟ ಗೊಳಿಸಲು ಆಗ್ರಹಿಸಿದ್ದಾರೆ. ಅದರ ಪ್ರಕಾರ ಮಹಾರಾಜರು ಅವರ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ ಮಹಾರಾಜರು ಮಾತು ಮುಂದುವರೆಸಿ,

೧. ವಿಭಜನೆಯ ನಂತರ ಪಾಕಿಸ್ತಾನದಲ್ಲಿನ ಹಿಂದುಗಳ ಜನಸಂಖ್ಯೆ ನಿರಂತರ ಕಡಿಮೆ ಆಗುತ್ತಿದೆ. ಪ್ರಸ್ತುತ ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಸಂಪೂರ್ಣ ಜಗತ್ತು ನೋಡುತ್ತಿದೆ. ನಿಜವೆಂದರೆ ಬಾಂಗ್ಲಾದೇಶದ ವಿವಾದ ರಾಜಕೀಯವಾಗಿದೆ; ಆದರೆ ಅಲ್ಲಿ ಉದ್ದೇಶಪೂರ್ವಕವಾಗಿ ಹಿಂದುಗಳನ್ನು ಗುರಿ ಮಾಡಲಾಗುತ್ತಿದೆ.

೨. ಕಾಶ್ಮೀರದಲ್ಲಿನ ಕಾಶ್ಮೀರಿ ಹಿಂದುಗಳು ನಿರಾಶ್ರಿತರಾದರು. ಅವರು ಇಂದಿಗೂ ನಿರಾಶ್ರಿತರಾಗಿಯೇ ಉಳಿದ್ಧಿದ್ದಾರೆ.

೩. ಇನ್ನೊಂದು ಕಡೆ ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಿರುವುದು ನಿರಂತರ ಬೆಳಕಿಗೆ ಬರುತ್ತಿದೆ. ಇಂತಹ ಭಯಾನಕ ಪರಿಸ್ಥಿತಿಯಲ್ಲಿ ನಾವು ಜಗದ್ಗುರು ಎಂದು ಹಿಂದುಗಳನ್ನು ಜಾಗೃತಗೊಳಿಸುವುದು ಮತ್ತು ಸಂಘಟಿತಗೊಳಿಸುವುದು ಇದು ನಮ್ಮ ಆದ್ಯ ಕರ್ತವ್ಯವಾಗಿದೆ. ಅದನ್ನೇ ನಾವು ಈ ಫಲಕಗಳ ಮಾಧ್ಯಮದಿಂದ ಮಾಡಿದ್ದೇವೆ.

೪. ಹಿಂದುಗಳನ್ನು ನಾವು ಜಾಗೃತಗೊಳಿಸದಿದ್ದರೆ ಯಾರು ಗೊಳಿಸುವರು ? ಈ ಭೂಮಿಯಲ್ಲಿ ಮುಸಲ್ಮಾನರು, ಕ್ರೈಸ್ತರು ಮುಂತಾದವರಿಗೆ ಸ್ವತಂತ್ರ ರಾಷ್ಟ್ರಗಳು ಇವೆ; ಆದರೆ ನೂರು ಕೋಟಿ ಜನಸಂಖ್ಯೆ ಇರುವ ಹಿಂದುಗಳಿಗೆ ಒಂದೇ ಒಂದು ರಾಷ್ಟ್ರಕೂಡ ಇಲ್ಲ. ಆದ್ದರಿಂದ ಭಾರತ ಹಿಂದೂ ರಾಷ್ಟ್ರ ಆಗಬೇಕು.

ದೇವಸ್ಥಾನಗಳು ಭಕ್ತರ ವಶದಲ್ಲಿರಬೇಕು !

ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ ಮಹಾರಾಜರು ಮಾತು ಮುಂದುವರೆಸಿ, ”ದೇವಸ್ಥಾನದ ಸರಕಾರಿಕರಣ ಎಂದಿಗೂ ಆಗಬಾರದು; ಕಾರಣ ಯಾವ ವಿಚಾರದಿಂದ ಸರಕಾರ ಅಧಿಕಾರಕ್ಕೆ ಬರುತ್ತದೆ, ಅದರಂತೆ ದೇವಸ್ಥಾನದ ಮೇಲ್ವಿಚಾರಣೆ ನಡೆಸಲಾಗುತ್ತದೆ. ಇದು ಹಿಂದೂಗಳ ಶ್ರದ್ಧೆಯ ಜೊತೆಗೆ ಆಟವಾಗಿದೆ. ಆದ್ದರಿಂದ ದೇವಸ್ಥಾನಗಳು ಭಕ್ತರ ಆಧೀನದಲ್ಲಿ ಇರಬೇಕು.” ”ಸನಾತನ ಬೋರ್ಡ್’ ನ ಸ್ಥಾಪನೆಯ ಬಗ್ಗೆ ಮಾತನಾಡುತ್ತಾ, ವಕ್ಫ್ ಬೋರ್ಡ್ ದಂತೆ ‘ಸನಾತನ ಬೋರ್ಡ್’ ಸ್ಥಾಪನೆ ಮಾಡಿ ಅದರಿಂದ ಬಹಳ ಏನು ಸಾಧಿಸಲಾಗುವುದಿಲ್ಲ. ಹಿಂದುಗಳ ಸಮಸ್ಯೆಗಳು ಪರಿಹರಿಸಲು ಅನೇಕ ಮಾರ್ಗಗಳು ಇವೆ. ಅವುಗಳನ್ನು ಅವಲಂಬಿಸಬೇಕು. ಆದರೂ ಕುಂಭ ಕ್ಷೇತ್ರದಲ್ಲಿ ನಡೆಯುವ ಧರ್ಮಸಂಸತ್ತಿನಲ್ಲಿ ಈ ವಿಷಯದ ಕುರಿತು ಕೂಲಂಕುಶವಾಗಿ ಚರ್ಚೆ ನಡೆಸಿ ಅಂತಿಮ ನಿರ್ಣಯ ಆಗುವುದು ಎಂದು ಹೇಳಿದರು.

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರ ಉಪಸ್ಥಿತಿ !

ಈ ಪತ್ರಕರ್ತರ ಸಭೆಯಲ್ಲಿ ವಿವಿಧ ಅಖಾಡಾದಲ್ಲಿನ ಸಾಧು ಸಂತರ ಸಹಿತ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ಕೂಡ ಉಪಸ್ಥಿತರಿದ್ದರು.