ಭಾರತೀಯ ನಕಾಶೆಯಿಂದ ಜಮ್ಮು-ಕಾಶ್ಮೀರ ಮತ್ತು ಲಡಾಖಅನ್ನು ಬೇರ್ಪಡಿಸಿದ ಟ್ವಿಟರ್‌ ವಿರುದ್ಧ ದೂರು ದಾಖಲು

ಪೊಲೀಸರು ಕೇವಲ ದೂರನ್ನು ದಾಖಲಿಸಿ ಸುಮ್ಮನಾಗಬಾರದು, ಬದಲಾಗಿ ಸಂಬಂಧಪಟ್ಟವರನ್ನು ಬಂಧಿಸಿ ಸೆರೆಮನೆಗೆ ಅಟ್ಟಬೇಕು ! ಬುಲಂದಶಹರ

ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಷ ಮಾಹೇಶ್ವರಿ

(ಉತ್ತರಪ್ರದೇಶ) – ಭಾರತದ ನಕಾಶೆಯಿಂದ ಜಮ್ಮು-ಕಾಶ್ಮೀರ ಮತ್ತು ಲಡಾಖನ್ನು ಬೇರ್ಪಡಿಸಿದ ಟ್ವಿಟರ್‌ ವಿರುದ್ಧ ಸ್ಥಳೀಯ ಬಜರಂಗ ದಳದ ನಾಯಕರು ಪೊಲೀಸರಲ್ಲಿ ದೂರನ್ನು ನೀಡಿದ ನಂತರ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಷ ಮಾಹೇಶ್ವರಿಯವರ ಮೇಲೆ ದೂರು ದಾಖಲಿಸಲಾಗಿದೆ. ಭಾ.ಡಂ.ಸ. ಕಲಂ ೫೦೫(೨) ಹಾಗೂ ಮಾಹಿತಿ ತಂತ್ರಜ್ಞಾನ(ಸಂಶೋಧನೆ) ಅಧಿನಿಯಮ ೨೦೦೮ರ ಕಲಂ ೭೪ ರ ಅಡಿಯಲ್ಲಿ ಈ ಅಪರಾಧವನ್ನು ದಾಖಲಿಸಲಾಗಿದೆ. ಭಾರತಿಯರ ವಿರೋಧದ ನಂತರ ಸದ್ಯಕ್ಕೆ ಟ್ವಿಟರ್ ಈ ನಕಾಶೆಯನ್ನು ತೆಹೆದುಹಾಕಿದೆ.