ಬಸ್ತರ್ (ಛತ್ತೀಸ್‌ಗಢ) – ಇಲ್ಲಿ ನಡೆದ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವಿನ ಚಕಮಕಿಯಲ್ಲಿ 4 ನಕ್ಸಲೀಯರು ಹತರಾಗಿದ್ದಾರೆ, ಒಬ್ಬ ಯೋಧ ವೀರಗತಿ ಪ್ರಾಪ್ತವಾಯಿತು. ಅಲ್ಲದೆ 3 ಯೋಧರು ಗಾಯಗೊಂಡಿದ್ದಾರೆ. ಈ ನಕ್ಸಲೀಯರಿಂದ ಅತ್ಯಾಧುನಿಕ ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ‘ಛತ್ತೀಸ್‌ಗಢದ ನಾರಾಯಣಪುರ-ದಂತೇವಾಡ ಜಿಲ್ಲೆಯ ಗಡಿಯಲ್ಲಿರುವ ದಕ್ಷಿಣ ಅಬುಜ್ಮರ್ ಅರಣ್ಯದಲ್ಲಿ ಈ ಚಕಮಕಿ ನಡೆದಿದೆ. ಇದರಲ್ಲಿ ಯೋಧ ಸಾನ್ನು ಕರಾಮ್ ವೀರಮರಣವನ್ನಪ್ಪಿದ್ದಾರೆ’, ಎಂದು ಬಸ್ತರ್ ನ ಪೊಲೀಸ್ ಮಹಾನಿರೀಕ್ಷಕ ಪಿ. ಸುಂದರರಾಜ್ ಹೇಳಿದ್ದಾರೆ. “ಈ ನಕ್ಸಲೀಯ ವಿರೋಧಿ ಕಾರ್ಯಾಚರಣೆಯನ್ನು ಸೈನಿಕರ ವಿಶೇಷ ಕಾರ್ಯ ಪಡೆ ಹಾಗೆಯೇ ನಾರಾಯಣಪುರ, ದಾಂತೇವಾಡ, ಜಗದಲ್ಪುರ ಮತ್ತು ಕೊಂಡಗಾಂವ್ ಜಿಲ್ಲೆಗಳ ಜಿಲ್ಲಾ ಮೀಸಲು ಪಡೆಯ ಪೊಲೀಸರ ಜಂಟಿ ಉಪಸ್ಥಿತಿಯಲ್ಲಿ ನಡೆಸಲಾಯಿತು,” ಎಂದು ಪಿ. ಸುಂದರರಾಜ್ ಹೇಳಿದರು.