೨ ಹಿಂದೂಗಳಿಗೆ ಗಾಯ
ಸಾಗರ (ಮಧ್ಯಪ್ರದೇಶ) – ಇಲ್ಲಿಯ ದೊಡ್ಡ ಮಾರುಕಟ್ಟೆಯಲ್ಲಿ ಜನವರಿ ೪ ರಂದು ಮಧ್ಯಾಹ್ನ ಮುಸುಕುಧಾರಿ ಕೆಲವು ವ್ಯಕ್ತಿಗಳು ದೇವಸ್ಥಾನವನ್ನು ಧ್ವಂಸಗೊಳಿಸಿದ್ದಾರೆ. ಆ ಸಮಯದಲ್ಲಿ ದೇವಸ್ಥಾನದ ರಕ್ಷಣೆಗಾಗಿ ಮುಂದೆ ಬಂದವರ ಮೇಲೆ ದಾಳಿ ನಡೆಸಲಾಗಿದೆ. ಇದರಲ್ಲಿ ಅನುಜ ಜಡಿಯ ಮತ್ತು ಬಾಬು ಜಡಿಯ ಇವರಿಬ್ಬರೂ ಗಾಯಗೊಂಡಿದ್ದಾರೆ. ದೇವಸ್ಥಾನದ ಧ್ವಂಸದ ಮಾಹಿತಿ ದೊರೆಯುತ್ತದೆ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಜನರು ಅಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಅವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಹಿಂದುಗಳು ಪೊಲೀಸ ಠಾಣೆಯ ಹೊರಗೆ ಕೂಡ ಪ್ರತಿಭಟನೆ ನಡೆಸಿದ್ದಾರೆ. ಪ್ರಸ್ತುತ ದೇವಸ್ಥಾನದ ಹತ್ತಿರ ಬಿಗಿ ಬಂದೋಬಸ್ತು ಮಾಡಲಾಗಿದೆ. ಗಾಯಗೊಂಡಿರುವ ಬಾಬು ಜಡಿಯ ಇವರು, ಪಾರಸ್ ದೇವಸ್ಥಾನದ ಹತ್ತಿರ ನಮ್ಮ ಕುಲದೇವರ ದೇವಸ್ಥಾನವಿದೆ. ಮಧ್ಯಾಹ್ನ ೨೦ ರಿಂದ ೨೫ ಜನರು ದೇವಸ್ಥಾನದ ಮುಖ್ಯದ್ವಾರ ಮುಚ್ಚಿ ಒಳಗೆ ಧ್ವಂಸ ಮಾಡುತ್ತಿದ್ದರು. ನಾವು ವಿರೋಧಿಸಿದಾಗ ಅವರು ನಮಗೆ ಥಳಿಸಿ ಓಡಿ ಹೋದರು’, ಎಂದು ಆರೋಪಿಸಿದ್ದಾರೆ.
ಸಂಪಾದಕೀಯ ನಿಲುವುಮಧ್ಯಪ್ರದೇಶದಲ್ಲಿ ಅನೇಕ ವರ್ಷಗಳಿಂದ ಭಾಜಪದ ಸರಕಾರ ಇರುವಾಗಲೂ ಅಲ್ಲಿ ಹಿಂದುಗಳ ದೇವಸ್ಥಾನ ದ್ವಂಸವಾಗುತ್ತದೆ, ಇದು ಹಿಂದುಗಳಿಗೆ ಅಪೇಕ್ಷಿತವಲ್ಲ ! |