ಕೇಂದ್ರದಲ್ಲಿನ ೭೮ ಸಚಿವರ ಪೈಕಿ ೩೩ ಸಚಿವರ ಮೇಲೆ ಗಂಭೀರ ಅಪರಾಧಗಳ ಆರೋಪ !

ಕೇಂದ್ರ ಮಂತ್ರಿಮಂಡಳಿಯ ವಿಸ್ತಾರದ ನಂತರ ಈಗ ಸಚಿವರ ಒಟ್ಟು ಸಂಖ್ಯೆ ೭೮ ಆಗಿದೆ; ಆದರೆ ಅದರಲ್ಲಿ ಶೇ. ೪೨ ರಷ್ಟು ಅಂದರೆ ೩೩ ಸಚಿವರ ವಿರುದ್ಧ ವಿವಿಧ ಅಪರಾಧಗಳ ಆರೋಪವಿದೆ. ಅದರಲ್ಲಿ ೨೪ ಜನರ ವಿರುದ್ಧ ಹತ್ಯೆ, ಹತ್ಯೆಯ ಪ್ರಯತ್ನ, ಲೂಟಿಯಂತಹ ಗಂಭಿರವಾದ ಅಪರಾಧದ ಆರೋಪಗಳಿವೆ.

ನಮ್ಮ ಪೂರ್ವಜರು ಹಿಂದೂ ರಜಪೂತರಾಗಿದ್ದರು ! – ಬಿಹಾರದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮಾ ಖಾನ್

ಹಿಂದೂ ಸಂಬಂಧಿಕರೊಂದಿಗೆ ಇನ್ನೂ ಅನ್ಯೋನ್ಯವಾಗಿದ್ದೇವೆ. ಯಾರನ್ನೂ ಬಲವಂತವಾಗಿ ಮತಾಂರಿಸಲು ಸಾಧ್ಯವಿಲ್ಲ. ನನಗೆ ಬಂದೂಕಿನಿಂದ ಹೆದರಿಸಿದರೂ ನಾನು ನನ್ನ ಧರ್ಮವನ್ನು ಬದಲಾಯಿಸುವುದಿಲ್ಲ. ಯಾರಾದರು ಸ್ವೇಚ್ಛೆಯಿಂದ ಮತಾಂತರಗೊಂಡರೆ ಅದು ಬೇರೆಯೇ ಆಗಿದೆ; ಆದರೆ ಯಾರನ್ನೂ ಬಲವಂತದಿಂದ ಮತಾಂತರವಾಗಲು ರಾಜ್ಯಾಡಳಿತವು ಬಿಡುವುದಿಲ್ಲ ಎಂದು ಹೇಳಿದರು.

ಸಂಭಲ(ಉತ್ತರಪ್ರದೇಶ)ನಲ್ಲಿ ಓರ್ವ ಸಾಧುವಿನ ಅಮಾನುಷ ಹತ್ಯೆ !

ಜಾರಖಂಡಿ ದೇವಾಲಯದ ಓರ್ವ ಮಹಂತರನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಭರತ ಎಂದು ಅವರ ಹೆಸರಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೋನು ವಾಲ್ಮಿಕಿ ಎಂಬ ಹೆಸರಿನ ಯುವಕನನ್ನು ಬಂಧಿಸಿದ್ದು ಆತನಿಂದ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.

ವಾಟ್ಸ್ ಆಪ್‍ನ ಗೌಪ್ಯತೆಯ ಧೋರಣೆಯ ಮೇಲೆ ಸದ್ಯ ನಾವು ಸ್ವೇಚ್ಛೆಯಿಂದ ನಿಷೇಧ ಹೇರಿದ್ದೇವೆ ! – ವಾಟ್ಸ್ ಆಪ್‍ನಿಂದ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಮಾಹಿತಿ

ವಾಟ್ಸ್ ಆಪ್‍ನ ಗೌಪ್ಯತೆಯ ಧೋರಣೆಯ ಬಗ್ಗೆ(`ಪ್ರೈವಸಿ ಪಾಲಿಸಿ’ಯ) ಸಧ್ಯ ನಾವು ಸ್ವೇಚ್ಛೆಯಿಂದ ನಿಷೇಧ ಹೇರಿದ್ದೇವೆ, ಎಂದು ದೆಹಲಿ ಉಚ್ಚ ನ್ಯಾಯಾಲಯಕ್ಕೆ ವಾಟ್ಸ್ ಆಪ್ ಮಾಹಿತಿ ನೀಡಿದೆ. ಗೌಪ್ಯತೆಯ ಧೋರಣೆಯಿಂದ ವಾಟ್ಸ್ ಆಪ್ ಸಂಸ್ಥೆಯ ವಿರುದ್ಧ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಶ್ರೀರಾಮಜನ್ಮಭೂಮಿ ಆಂದೋಲನದಲ್ಲಿ ಪ್ರಾಣತ್ಯಾಗ ಮಾಡಿದ ಕಾರಸೇವಕರ ಮನೆಯ ತನಕ ರಸ್ತೆಯನ್ನು ನಿರ್ಮಿಸಿ ಅದಕ್ಕೆ ಅವರ ಹೆಸರಿಡಲಾಗುವುದು !

ಶ್ರೀರಾಮಜನ್ಮಭೂಮಿ ಆಂದೋಲನದಲ್ಲಿ ಪ್ರಾಣತ್ಯಾಗ ಮಾಡಿದ ರಾಜ್ಯದ ಕಾರಸೇವಕರ ಮನೆಯ ತನಕ ರಸ್ತೆಯನ್ನು ನಿರ್ಮಿಸಲಾಗುವುದು ಮತ್ತು ಅದಕ್ಕೆ ಈ ಕಾರಸೇವಕರ ಹೆಸರನ್ನೂ ಇಡಲಾಗುವುದು, ಜೊತೆಗೆ ಅವರ ಛಾಯಾಚಿತ್ರವನ್ನೂ ಹಾಕಲಾಗುವುದು, ಎಂದು ರಾಜ್ಯದ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಇವರು ಘೋಷಣೆ ಮಾಡಿದ್ದಾರೆ.

ಕೇರಳದಲ್ಲಿ ಪತ್ತೆಯಾದ ದೇಶದ ಮೊದಲ `ಝಿಕಾ’ ರೋಗಾಣುವಿರುವ ರೋಗಿ !

ಝೀಕಾ ಸೋಂಕಿನ ರೋಗಿ ೮ ದಿನಗಳ ಕಾಲ ಸೋಂಕಿನ ಪ್ರಭಾವದಲ್ಲಿರುತ್ತಾನೆ. ಗರ್ಭಿಣಿಯರಿಗೆ ಝೀಕಾ ರೋಗಾಣುವಿನ ಸೋಂಕಿನ ಅಪಾಯ ಹೆಚ್ಚಿನ ಪ್ರಮಾಣದಲ್ಲಿದೆ. ಇದರಿಂದ ಹುಟ್ಟುವ ಮಗು ವಿಕಸಿತಗೊಳ್ಳದ ಮೆದುಳಿನೊಂದಿಗೆ ಹುಟ್ಟುವ ಅಪಾಯ ಹೆಚ್ಚಿರುತ್ತದೆ.

ಎದ್ದು ಕಾಣಬೇಕಾಗಿರುವುದು ನೀವಲ್ಲ, ನಿಮ್ಮ ಕೆಲಸ – ನೂತನ ಸಚಿವರಿಗೆ ಮೋದಿ ಕಿವಿಮಾತು

ಈ ಸಭೆಯಲ್ಲಿ ಮೋದಿ ನೂತನ ಸಚಿವರಿಗೆ ಹಿಂದಿನ ಖಾತೆಯ ಸಚಿವರನ್ನು ಭೇಟಿಯಾಗಿ ಅವರ ಸಲಹೆಯನ್ನು ಪಡೆಯಲು ತಿಳಿಸಿದರು. ‘ಮಾಜಿ ಸಚಿವರಿಂದ ಹೆಚ್ಚೆಚ್ಚು ಲಾಭವನ್ನು ಪಡೆದುಕೊಳ್ಳಲಿಕ್ಕಾಗಿಯೇ ಭೇಟಿ ನೀಡಿ’, ಎಂದು ಮೋದಿ ಹೇಳಿದರು.

ಭಗವಾನ್ ಜಗನ್ನಾಥನ ೧೪೪ ನೇ ರಥಯಾತ್ರೆಗೆ ಗುಜರಾತ ಸರಕಾರದಿಂದ ಒಪ್ಪಿಗೆ

ಭಗವಾನ್ ಜಗನ್ನಾಥನ ೧೪೪ ನೇಯ ಸಾಂಪ್ರದಾಯಿಕ ರಥಯಾತ್ರೆಗೆ ಸರಕಾರದಿಂದ ಅನುಮತಿ ನೀಡಲಾಗಿದೆ. ಈ ಸಮಯದಲ್ಲಿ ಸಂಚಾರನಿಷೇಧ ಇರಲಿದೆ. ಯಾತ್ರೆಯಲ್ಲಿ ಕೇವಲ ೩ ರಥ ಮತ್ತು ೨ ವಾಹನಗಳಿರುವುದು. ೧೯ ಕಿ.ಮೀ ಮಾರ್ಗದವರೆಗೆ ರಥಯಾತ್ರೆಗೆ ಅನುಮತಿ ನೀಡಲಾಗಿದೆ. ಈ ರಥಯಾತ್ರೆಯಲ್ಲಿ ಪ್ರಸಾದ ವಿತರಣೆ ಇರುವುದಿಲ್ಲ.

ಲಕ್ಷ್ಮಣಪುರಿ (ಉತ್ತರಪ್ರದೇಶ) ಇಲ್ಲಿ ತನ್ನ ಪತಿ ಅಶ್ರಫ್ ಇವನು ಮಹಿಳೆಯರನ್ನು ಮತಾಂತರಿಸುತ್ತಿದ್ದಾನೆ ಎಂಬ ಪತ್ನಿಯ ದೂರಿನ ಮೇರೆಗೆ ಅಪರಾಧ ದಾಖಲು !

ಈ ಮಹಿಳೆಯ ಪ್ರಕಾರ, ಅಶ್ರಫ್ ಈ ದರ್ಗಾದಿಂದ ಮತಾಂತರದ ಕೆಲಸ ಮಾಡುತ್ತಿದ್ದಾನೆ. ಮುಗ್ಧ ಮಹಿಳೆಯರಿಗೆ ಆಮಿಷ ಒಡ್ಡಿ ಅವರನ್ನು ಮತಾಂತರಗೊಳಿಸುತ್ತಿದ್ದಾನೆ. ಅಶ್ರಫ್ ನನ್ನ ತವರಿನಿಂದ ೨೫ ಲಕ್ಷ ಹಣ ತರುವಂತೆ ಒತ್ತಡ ಹೇರಿದ್ದ. ಜೊತೆಗೆ ಹಲ್ಲೆಯೂ ಮಾಡಿದ. ಅತ್ತೆ ಗರ್ಭಾಶಯ ಪರೀಕ್ಷಣೆಯನ್ನು ಮಾಡಿಸಿ ಹೆಣ್ಣು ಮಗು ಹುಟ್ಟುವುದು ಎಂದು ತಿಳಿದಾಕ್ಷಣ ಆಕೆಯನ್ನು ಮನೆಯಿಂದ ಹೊರಗಟ್ಟಿದ್ದಾರೆ.

ಕಾಶ್ಮೀರದಲ್ಲಿ ಕಳೆದ ೨೪ ಗಂಟೆಯಲ್ಲಿ ೫ ಭಯೋತ್ಪಾದಕರ ಸಾವು

ಕಾಶ್ಮೀರದಲ್ಲಿ ನಿರಂತರವಾಗಿ ಭಯೋತ್ಪಾದಕರ ಸಂಹಾರ ಮಾಡಲಾಗುತ್ತಿದ್ದರೂ ಅಲ್ಲಿಯ ಭಯೋತ್ಪಾದನೆ ನಾಶವಾಗುತ್ತಿಲ್ಲ; ಇದಕ್ಕೆ ಭಯೋತ್ಪಾದಕರನ್ನು ತಯಾರಿಸುವ ಕಾರ್ಯವು ಪಾಕ್‍ನಿಂದ ನಿರಂತರವಾಗಿ ನಡೆಯುತ್ತದೆ. ಅದನ್ನು ನಿಲ್ಲಿಸಲು ಪಾಕ್‍ಅನ್ನು ನಾಶ ಮಾಡುವುದು ಅಗತ್ಯವಿದೆ !