ವಾಟ್ಸ್ ಆಪ್‍ನ ಗೌಪ್ಯತೆಯ ಧೋರಣೆಯ ಮೇಲೆ ಸದ್ಯ ನಾವು ಸ್ವೇಚ್ಛೆಯಿಂದ ನಿಷೇಧ ಹೇರಿದ್ದೇವೆ ! – ವಾಟ್ಸ್ ಆಪ್‍ನಿಂದ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಮಾಹಿತಿ

ಇದರಿಂದ ವಾಟ್ಸ್ ಆಪ್‍ನ ಉದ್ಧಟತನ ಕಂಡು ಬರುತ್ತದೆ ! ‘ವಾಟ್ಸ್ ಆಪ್‍ನ ಗೌಪ್ಯತೆಯ ಧೋರಣೆಯ ಮೇಲೆ ಸರಕಾರವು ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದು ಅದನ್ನು ನಾವು ಪರೇಚ್ಛೆಯಿಂದ ತಾತ್ಕಾಲಿಕವಾಗಿ ಒಪ್ಪಿಕೊಳ್ಳುತ್ತೇವೆ’, ಎಂದು ಸಂಸ್ಥೆಗೆ ಈ ಮೂಲಕ ತಿಳಿಸಲಿಕ್ಕೆ ಇದೆಯೇ ? ಸರಕಾರದ ಪಾಲನೆಯನ್ನು ಮಾಡದ ಹಾಗೂ ಭಾರತದ ಕಾನೂನನ್ನು ಒಪ್ಪಿಕೊಳ್ಳದ ಇಂತಹ ವಿದೇಶಿ ಸಂಸ್ಥೆಯನ್ನು ಸರಕಾರವು ಅದರದ್ದೇ ದೇಶಕ್ಕೆ ಅಟ್ಟಬೇಕು !

ನವದೆಹಲಿ – ವಾಟ್ಸ್ ಆಪ್‍ನ ಗೌಪ್ಯತೆಯ ಧೋರಣೆಯ ಬಗ್ಗೆ(`ಪ್ರೈವಸಿ ಪಾಲಿಸಿ’ಯ) ಸಧ್ಯ ನಾವು ಸ್ವೇಚ್ಛೆಯಿಂದ ನಿಷೇಧ ಹೇರಿದ್ದೇವೆ, ಎಂದು ದೆಹಲಿ ಉಚ್ಚ ನ್ಯಾಯಾಲಯಕ್ಕೆ ವಾಟ್ಸ್ ಆಪ್ ಮಾಹಿತಿ ನೀಡಿದೆ. ಗೌಪ್ಯತೆಯ ಧೋರಣೆಯಿಂದ ವಾಟ್ಸ್ ಆಪ್ ಸಂಸ್ಥೆಯ ವಿರುದ್ಧ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅದರ ಬಗ್ಗೆ ಆಲಿಕೆಯ ಸಮಯದಲ್ಲಿ ವಾಟ್ಸ್ ಆಪ್ ಈ ಮಾಹಿತಿಯನ್ನು ನೀಡಿದೆ.

ವಾಟ್ಸ್ ಆಪ್‍ನ ಅಧಿಕಾರಿಯು, ಎಲ್ಲಿಯವರೆಗೆ ಭಾರತಿಯ ಸಂಸತ್ತಿನಲ್ಲಿ ‘ಮಾಹಿತಿ ಸಂರಕ್ಷಣಾ ಕಾನೂನು’ ಜಾರಿಯಾಗುವುದಿಲ್ಲವೋ, ಅಲ್ಲಿಯವರೆಗೆ ನಾವು ವಾಟ್ಸ್ ಆಪ್‍ನ ಬಳಕೆದಾರರಿಗೆ ನಮ್ಮದಷ್ಟೇ ಅಲ್ಲ ಗೌಪ್ಯತೆಯ ಧೋರಣೆಯನ್ನು ಒಪ್ಪಿಕೊಳ್ಳಲು ಒತ್ತಾಯಿಸುವುದಿಲ್ಲ. ಇದರೊಂದಿಗೆ ನಮ್ಮ ಈ ಹೊಸ ಧೋರಣೆ ಸ್ವೀಕರಿಸದಿರುವ ಬಳಕೆದಾರರ ಮೇಲೆಯೂ ನಾವು ಯಾವುದೇ ರೀತಿಯ ನಿಷೇಧವನ್ನು ಹೇರುವುದಿಲ್ಲ, ಹಾಗೂ ಅವರ ಮೇಲೆ ನಿರ್ಬಂಧ ಹೇರುವುದಿಲ್ಲ ಎಂದು ಹೇಳಿದ್ದಾರೆ.