ನಮ್ಮ ಪೂರ್ವಜರು ಹಿಂದೂ ರಜಪೂತರಾಗಿದ್ದರು ! – ಬಿಹಾರದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮಾ ಖಾನ್

ಭಾರತದಲ್ಲಿ ಇಸ್ಲಾಂ ಬರುವ ಮುನ್ನ ಎಲ್ಲರೂ ಹಿಂದೂಗಳೇ ಆಗಿದ್ದರು, ಇದು ಸತ್ಯವಾಗಿದೆ; ಆದರೆ ಮತಾಂಧರು ಅದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ, ಇದೂ ಕೂಡ ಅಷ್ಟೇ ಸತ್ಯ !

ಜಮಾ ಖಾನ್

ಹಾಜಿಪುರ (ಬಿಹಾರ) – ಬಿಹಾರದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮಾ ಖಾನ್ ಇವರು ತಮ್ಮ ಪೂರ್ವಜರು ‘ಹಿಂದೂ ರಜಪುತ’ ಆಗಿದ್ದರು, ಎಂದು ಹೇಳಿದ್ದಾರೆ. ಖಾನ ಇವರನ್ನು ಪತ್ರಕರ್ತರು ಮತಾಂತರದ ಬಗ್ಗೆ ವಿಚಾರಿಸಿದ ಪ್ರಶ್ನೆಗೆ ಅವರು ಈ ಉತ್ತರವನ್ನು ನೀಡಿದರು.

ಖಾನ್ ತಮ್ಮ ಮಾತನ್ನು ಮುಂದುವರೆಸುತ್ತಾ. ಜಯರಾಮ ಸಿಂಗ್ ಮತ್ತು ಭಗವಾನ್ ಸಿಂಗ್ ಈ ಇಬ್ಬರು ಸಹೋದರರು ನಮ್ಮ ಪೂರ್ವಜರಾಗಿದ್ದರು. ಅವರು ಬೈಸವಾಡಾದಿಂದ ಬಂದಿದ್ದರು. ಇಬ್ಬರೂ ಕೈಮೂರ ಪ್ರದೇಶದಲ್ಲಿ ನೆಲೆಸಿದರು. ಯುದ್ಧ ಆರಂಭವಾದಾಗ ಭಗವಾನ್ ಸಿಂಗ್ ಇವರು ಇಸ್ಲಾಂ ಅನ್ನು ಸ್ವೀಕರಿಸಿದರು. ಆದ್ದರಿಂದ ಭಗವಾನ್ ಸಿಂಗ್ ಇವರ ಕುಟುಂಬದಲ್ಲಿನ ಜನರು ಮುಸಲ್ಮಾನರಾದರು; ಆದರೆ ಜಯರಾಮ ಸಿಂಗ್ ಇವರ ವಂಶದ ಜನರು ಇನ್ನೂ ಹಿಂದೂಗಳಾಗಿಯೇ ಇದ್ದಾರೆ. ನಮ್ಮ ಕುಟುಂಬದ ಅನೇಕ ಜನರು ಹಿಂದೂ ರಜಪೂತ ಆಗಿದ್ದಾರೆ. ಹಿಂದೂ ಸಂಬಂಧಿಕರೊಂದಿಗೆ ಇನ್ನೂ ಅನ್ಯೋನ್ಯವಾಗಿದ್ದೇವೆ. ಯಾರನ್ನೂ ಬಲವಂತವಾಗಿ ಮತಾಂರಿಸಲು ಸಾಧ್ಯವಿಲ್ಲ. ನನಗೆ ಬಂದೂಕಿನಿಂದ ಹೆದರಿಸಿದರೂ ನಾನು ನನ್ನ ಧರ್ಮವನ್ನು ಬದಲಾಯಿಸುವುದಿಲ್ಲ. ಯಾರಾದರು ಸ್ವೇಚ್ಛೆಯಿಂದ ಮತಾಂತರಗೊಂಡರೆ ಅದು ಬೇರೆಯೇ ಆಗಿದೆ; ಆದರೆ ಯಾರನ್ನೂ ಬಲವಂತದಿಂದ ಮತಾಂತರವಾಗಲು ರಾಜ್ಯಾಡಳಿತವು ಬಿಡುವುದಿಲ್ಲ ಎಂದು ಹೇಳಿದರು.