ಭಗವಾನ್ ಜಗನ್ನಾಥನ ೧೪೪ ನೇ ರಥಯಾತ್ರೆಗೆ ಗುಜರಾತ ಸರಕಾರದಿಂದ ಒಪ್ಪಿಗೆ

ಕರ್ಣಾವತಿ (ಗುಜರಾತ) – ಇಲ್ಲಿಯ ಭಗವಾನ್ ಜಗನ್ನಾಥನ ೧೪೪ ನೇಯ ಸಾಂಪ್ರದಾಯಿಕ ರಥಯಾತ್ರೆಗೆ ಸರಕಾರದಿಂದ ಅನುಮತಿ ನೀಡಲಾಗಿದೆ. ಈ ಸಮಯದಲ್ಲಿ ಸಂಚಾರನಿಷೇಧ ಇರಲಿದೆ. ಯಾತ್ರೆಯಲ್ಲಿ ಕೇವಲ ೩ ರಥ ಮತ್ತು ೨ ವಾಹನಗಳಿರುವುದು. ೧೯ ಕಿ.ಮೀ ಮಾರ್ಗದವರೆಗೆ ರಥಯಾತ್ರೆಗೆ ಅನುಮತಿ ನೀಡಲಾಗಿದೆ. ಈ ರಥಯಾತ್ರೆಯಲ್ಲಿ ಪ್ರಸಾದ ವಿತರಣೆ ಇರುವುದಿಲ್ಲ. ಗುಜರಾತನ ಗೃಹಸಚಿವ ಪ್ರದಿಪಸಿಂಹ ಜಡೆಜಾ ಅವರು ಮಾತನಾಡುತ್ತಾ, ಕೊರೊನಾದಿಂದ ಕಳೆದ ವರ್ಷ ರಥಯಾತ್ರೆಯನ್ನು ರದ್ದು ಪಡಿಸಲಾಗಿತ್ತು. ಈಗ ರಾಜ್ಯದಲ್ಲಿ ಕೊರೊನಾದ ಎರಡನೇ ಅಲೆಯು ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಆದ್ದರಿಂದ ಕೊರೋನಾ ನಿಯಮಗಳನ್ನು ಪಾಲಿಸುತ್ತಾ ರಥಯಾತ್ರೆಯನ್ನು ಮಾಡಲಾಗುವುದು. ಭಕ್ತರು ದೂರದರ್ಶನ ಮತ್ತು ಇತರ ಸುದ್ದಿ ವಾಹಿನಿಯ ಮೂಲಕ ರಥಯಾತ್ರೆಯ ದರ್ಶನವನ್ನು ಪಡೆಯಬಹುದು ಎಂದು ಹೇಳಿದ್ದಾರೆ.