ಪ್ರಧಾನಿ ಮೋದಿಯಿಂದ ನೂತನ ಸಚಿವರಿಗೆ ಸಲಹೆ !
ಸಮಯಪಾಲಕರಾಗಿ, ಹಿಂದಿನ ಸಚಿವರೊಂದಿಗೆ ಚರ್ಚಿಸಿ, ದಣಿಯದೇ ಕೆಲಸ ಮಾಡಿ !
ನವ ದೆಹಲಿ – ಸಮಯಪಾಲಕರಾಗಿ, ಹಿಂದಿನ ಸಚಿವರೊಂದಿಗೆ ಚರ್ಚಿಸಿ ಮತ್ತು ದಣಿಯದೇ ಕೆಲಸ ಮಾಡಿ, ಎಂಬ ಮೂರು ಸೂತ್ರವನ್ನು ಪ್ರಧಾನಿ ಮೋದಿಯವರು ನೂತನ ನೇಮಕಗೊಂಡ ಸಚಿವರಿಗೆ ಸಭೆಯಲ್ಲಿ ತಿಳಿಸಿದರು. ಈ ಎಲ್ಲಾ ನೂತನ ಸಚಿವರು ಹುದ್ದೆಯನ್ನು ಸ್ವೀಕರಿಸಿದ ನಂತರ ಈ ಸಭೆಯನ್ನು ತೆಗೆದುಕೊಳ್ಳಲಾಯಿತು. ಈ ಸಭೆಯಲ್ಲಿ ಮೋದಿ ನೂತನ ಸಚಿವರಿಗೆ ಹಿಂದಿನ ಖಾತೆಯ ಸಚಿವರನ್ನು ಭೇಟಿಯಾಗಿ ಅವರ ಸಲಹೆಯನ್ನು ಪಡೆಯಲು ತಿಳಿಸಿದರು. ‘ಮಾಜಿ ಸಚಿವರಿಂದ ಹೆಚ್ಚೆಚ್ಚು ಲಾಭವನ್ನು ಪಡೆದುಕೊಳ್ಳಲಿಕ್ಕಾಗಿಯೇ ಭೇಟಿ ನೀಡಿ’, ಎಂದು ಮೋದಿ ಹೇಳಿದರು.
ನೂತನ ಸಂಪುಟದೊಂದಿಗೆ ಮೊದಲ ಸಭೆ: ಹೊಸ ಸಚಿವರಿಗೆ ಕೆಲವು ಸಲಹೆಗಳನ್ನು ನೀಡಿದ ಪ್ರಧಾನಿ ಮೋದಿ
#NarendraModi https://t.co/zUSoZvQ0Rl— vijaykarnataka (@Vijaykarnataka) July 9, 2021
ಮೋದಿ ತಮ್ಮ ಮಾತನ್ನು ಮುಂದುವರೆಸುತ್ತಾ, ನೂತನ ಸಚಿವರು ಹೆಚ್ಚು ಶ್ರಮ ಪಡಬೇಕು ಮತ್ತು ಜನರ ಜೀವನವನ್ನು ಸುಖವಾಗಿಸಲು ಆಡಳಿತದ ಹೆಚ್ಚೆಚ್ಚು ಯೋಜನೆಗಳನ್ನು ಅವರ ತನಕ ತಲುಪಿಸಿ, ಅದಕ್ಕಾಗಿ ಕೃತಶೀಲರಾಗಿ. ಸಂಸತ್ತಿನ ಮಳೆಗಾಲದ ಅಧಿವೇಶನವು ಜುಲೈ ೧೯ ರಂದು ಆರಂಭವಾಗಲಿದೆ. ಆದ್ದರಿಂದ ನೂತನ ಸಚಿವರು ತಮ್ಮ ಸಚಿವಾಲಯಗಳ ಅಡಿಯಲ್ಲಿ ಬರುವ ವಿಷಯಗಳ ಅಭ್ಯಾಸವನ್ನು ಮಾಡಬೇಕು, ಎಂದು ಸೂಚನೆಯನ್ನೂ ಮೋದಿಯವರು ನೀಡಿದರು.