ಸಂಭಲ(ಉತ್ತರಪ್ರದೇಶ)ನಲ್ಲಿ ಓರ್ವ ಸಾಧುವಿನ ಅಮಾನುಷ ಹತ್ಯೆ !

ಪ್ರಖರ ಹಿಂದುತ್ವನಿಷ್ಠ ಯೋಗಿ ಆದಿತ್ಯನಾಥರು ಉತ್ತರಪ್ರದೇಶದಲ್ಲಿ ಅಧಿಕಾರದಲ್ಲಿರುವಾಗ ಅಲ್ಲಿ ಸಂತ-ಮಹಂತರ ಹತ್ಯೆಯಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! ಸಂತ-ಮಹಂತರ ಹತ್ಯೆಯನ್ನು ತಡೆಗಟ್ಟಲು ಯೋಗಿ ಆದಿತ್ಯನಾಥ ಸರಕಾರವು ದಿಟ್ಟ ಹೆಜ್ಜೆಯನ್ನು ಇಡುವುದು ಅಪೇಕ್ಷಿತವಿದೆ !

ಮಹಂತ ಭರತ

ಸಂಭಲ (ಉತ್ತರಪ್ರದೇಶ) – ಇಲ್ಲಿನ ಜಾರಖಂಡಿ ದೇವಾಲಯದ ಓರ್ವ ಮಹಂತರನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಭರತ ಎಂದು ಅವರ ಹೆಸರಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೋನು ವಾಲ್ಮಿಕಿ ಎಂಬ ಹೆಸರಿನ ಯುವಕನನ್ನು ಬಂಧಿಸಿದ್ದು ಆತನಿಂದ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.

(ಸೌಜನ್ಯ: mera sambhal)

ಪೊಲೀಸ್ ಅಧೀಕ್ಷಕ ಚಕ್ರೇಶ ಮಿಶ್ರಾ ಅವರು ಪ್ರಸಂಗದ ಮಾಹಿತಿಯನ್ನು ಮುಂದಿನಂತೆ ನೀಡಿದರು, ‘ಜುಲೈ ೯ ರಂದು ಬೆಳಿಗ್ಗೆ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಪೊಲೀಸರು ಘಟನಾಸ್ಥಳಕ್ಕೆ ಧಾವಿಸಿದರು. ಪೊಲೀಸರು ಮೃತದೇಹವನ್ನು ಶವಪರೀಕ್ಷೆಗೆ ಕಳುಹಿಸಿದರು. ಫಾರೆನ್ಸಿಕ್ ತಜ್ಞ ಹಾಗೂ ಶ್ವಾನದಳವನ್ನೂ ಘಟನಾಸ್ಥಳಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಹೆಚ್ಚಿನ ವಿಚಾರಣೆಯನ್ನು ಮಾಡುತ್ತಿರುವಾಗ ಮಹಂತ ಭರತನೊಂದಿಗೆ ೨ ದಿನಗಳ ಹಿಂದೆ ಓರ್ವ ಯುವಕನೊಂದಿಗೆ ವಿವಾದ ಆಗಿರುವ ಮಾಹಿತಿಯು ಪೊಲೀಸರಿಗೆ ಸಿಕ್ಕಿತ್ತು. ಮಾಹಿತಿ ಸಿಕ್ಕಿದಾಕ್ಷಣ ಪೊಲೀಸರು ಆ ದಿಕ್ಕಿನತ್ತ ತನಿಖೆಯನ್ನು ನಡೆಸಿದಾಗ ಪೊಲೀಸರು ಸೋನುನನ್ನು ಬಂಧಿಸಿದರು. ಪೊಲೀಸರ ತನಿಖೆಯಲ್ಲಿ ಸೋನು ‘ಮಹಂತ ಭರತರು ನನ್ನನ್ನು ಅಪಮಾನಿಸುತ್ತದ್ದರು ಮತ್ತು ಅದರ ಕೋಪವನ್ನು ಮನಸ್ಸಿನಲ್ಲಿಟ್ಟುಕೊಂಡು ಜುಲೈ ೮ ರಂದು ರಾತ್ರಿ ಒಂದು ಕಬ್ಬಿಣದ ರಾಡ್‍ನಿಂದ ನಾನು ಮಹಂತರ ಹತ್ಯೆ ಮಾಡಿದೆ’, ಎಂದು ಒಪ್ಪಿಕೊಂಡಿದ್ದಾನೆ. ಮಹಂತ ಭರತ ಇವರು ಮೂಲತಃ ವಾರಣಾಸಿಯವರಾಗಿದ್ದರು. ಕಳೆದ ೮ ವರ್ಷಗಳಿಂದ ಅವರು ಸಂಭಲ ಜಿಲ್ಲೆಯ ಗುಮಸಾನಿ ಗ್ರಾಮದ ಜಾರಖಡಿ ದೇವಸ್ಥಾನದಲ್ಲಿ ವಾಸಿಸುತ್ತಿದ್ದರು.