ಲಕ್ಷ್ಮಣಪುರಿ (ಉತ್ತರಪ್ರದೇಶ) ಇಲ್ಲಿ ತನ್ನ ಪತಿ ಅಶ್ರಫ್ ಇವನು ಮಹಿಳೆಯರನ್ನು ಮತಾಂತರಿಸುತ್ತಿದ್ದಾನೆ ಎಂಬ ಪತ್ನಿಯ ದೂರಿನ ಮೇರೆಗೆ ಅಪರಾಧ ದಾಖಲು !

ಕೇಂದ್ರ ಸರಕಾರವು ದೇಶದಲ್ಲಿ ಮತಾಂತರ ವಿರೋಧಿ ಕಾನೂನ್ನು ಜಾರಿಗೆ ತಂದಾಗಲೇ ಇದನ್ನು ಹಿಡಿತಕ್ಕೆ ತರಬಹುದು !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಲ್ಲಿನ ಇಂದಿರಾನಗರದಲ್ಲಿ ವಾಸಿಸುವ ಮಹಿಳೆಯು ತನ್ನ ಪತಿ ಅಶ್ರಫ್‍ನ ವಿರುದ್ಧ ಪೊಲೀಸರಲ್ಲಿ ಆತ ಮಹಿಳೆಯರನ್ನು ಮತಾಂತರಿಸುತ್ತಿದ್ದಾನೆ ಎಂಬ ದೂರನ್ನು ದಾಖಲಿಸಿದ್ದಾಳೆ. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗುತ್ತಿದ್ದಾರೆ. ಅಶ್ರಫ್ ಬೆಂಗಳೂರಿನ ‘ಖಾನಖಾ-ಎ-ಅಶರಫಿಯಾ ಹುಸೈನಿಯಾ’ ಈ ದರ್ಗಾದಲ್ಲಿ ಕೆಲಸ ಮಾಡುತ್ತಾನೆ.

೧. ೨೦೧೯ ರಲ್ಲಿ ಆತನನ್ನು ವಿವಾಹವಾದ ನಂತರ ಆಕೆಗೆ ಅಶ್ರಫ್‍ನ ಕೃತ್ಯದ ಬಗ್ಗೆ ಮಾಹಿತಿ ಸಿಕ್ಕಿತು. ಆಕೆ ಆತನನ್ನು ತಿಳುವಳಿಕೆ ನೀಡಲು ಪ್ರಯತ್ನಿಸುತ್ತಿರುವಾಗ ಆತ ಆಕೆಯ ಮೇಲೆ ಹಲ್ಲೆ ಮಾಡಲು ಆರಂಭಿಸಿದನು.

೨. ಈ ಮಹಿಳೆಯ ಪ್ರಕಾರ, ಅಶ್ರಫ್ ಈ ದರ್ಗಾದಿಂದ ಮತಾಂತರದ ಕೆಲಸ ಮಾಡುತ್ತಿದ್ದಾನೆ. ಮುಗ್ಧ ಮಹಿಳೆಯರಿಗೆ ಆಮಿಷ ಒಡ್ಡಿ ಅವರನ್ನು ಮತಾಂತರಗೊಳಿಸುತ್ತಿದ್ದಾನೆ. ಅಶ್ರಫ್ ನನ್ನ ತವರಿನಿಂದ ೨೫ ಲಕ್ಷ ಹಣ ತರುವಂತೆ ಒತ್ತಡ ಹೇರಿದ್ದ. ಜೊತೆಗೆ ಹಲ್ಲೆಯೂ ಮಾಡಿದ. ಅತ್ತೆ ಗರ್ಭಾಶಯ ಪರೀಕ್ಷಣೆಯನ್ನು ಮಾಡಿಸಿ ಹೆಣ್ಣು ಮಗು ಹುಟ್ಟುವುದು ಎಂದು ತಿಳಿದಾಕ್ಷಣ ಆಕೆಯನ್ನು ಮನೆಯಿಂದ ಹೊರಗಟ್ಟಿದ್ದಾರೆ.