ಕೇರಳದಲ್ಲಿ ಪತ್ತೆಯಾದ ದೇಶದ ಮೊದಲ `ಝಿಕಾ’ ರೋಗಾಣುವಿರುವ ರೋಗಿ !

ಗರ್ಭಿಣಿ ಮತ್ತು ನಂತರ ಆಕೆಗೆ ಹುಟ್ಟಿದ ಮಗುವಿಗೂ ಸೋಂಕು !

ನವದೆಹಲಿ – ಕೇರಳದಲ್ಲಿ ಓರ್ವ ೨೪ ವರ್ಷದ ಗರ್ಭಿಣಿಗೆ ಮತ್ತು ನಂತರ ಆಕೆಗೆ ಹುಟ್ಟಿದ ಮಗುವಿಗೆ ‘ಝೀಕಾ’ ರೋಗಾಣುವಿನ ಸೋಂಕು ತಗಲಿರುವುದು ಗಮನಕ್ಕೆ ಬಂದಿದೆ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಇವರು ಈ ಮಾಹಿತಿಯನ್ನು ನೀಡಿದರು. ಸೊಳ್ಳೆಯಿಂದ ಹರಡುವ ‘ಝೀಕಾ’ ರೋಗಾಣುವಿರುವ ರೋಗಿಯು ದೇಶದಲ್ಲಿ ಪತ್ತೆಯಾದ ಮೊದಲ ಪ್ರಕರಣ ಇದಾಗಿದೆ. ತಿರುವನಂತಪುರಮ್‍ನಲ್ಲಿ ‘ಝೀಕಾ’ ರೋಗಾಣುವಿನ ಇನ್ನೂ ೧೩ ಅನುಮಾನಾಸ್ಪದ ರೋಗಿಗಳು ಇರುವುದು ಬೆಳಕಿಗೆ ಬಂದಿದೆ. ಈ ರೋಗಿಗಳ ಪರೀಕ್ಷಣೆಯ ಮಾದರಿಯನ್ನು ತೆಗೆದುಕೊಂಡು ಅದನ್ನು ಪುಣೆಯ ‘ನ್ಯಾಶನಲ್ ಇನ್ಸ್ಟಿಟ್ಯುಟ್ ಆಫ್ ವೈಯರೊಲಾಜಿ’ಗೆ ಕಳುಹಿಸಲಾಗಿದೆ.

‘ಝಿಕಾ’ ರೋಗಾಣುವಿನ ಸೊಂಕಿನ ಲಕ್ಷಣಗಳು !

ಝೀಕಾ ರೋಗಾಣುವಿನ ಸೋಂಕು ತಗಲಿದವರರಿಗೆ ಆಗಾಗ ಜ್ವರ, ಮೈ ಮೇಲೆ ಕೆಂಪು ಬಣ್ಣದ ಕಲೆ, ಸಂಧಿವಾತ, ಜೊತೆಗೆ ಕಣ್ಣು ಕೆಂಪಾಗುವುದು ಇಂತಹ ಅನೇಕ ಲಕ್ಷಣಗಳು ಕಂಡುಬರುತ್ತದೆ. ಝೀಕಾ ಸೋಂಕಿನ ರೋಗಿ ೮ ದಿನಗಳ ಕಾಲ ಸೋಂಕಿನ ಪ್ರಭಾವದಲ್ಲಿರುತ್ತಾನೆ. ಗರ್ಭಿಣಿಯರಿಗೆ ಝೀಕಾ ರೋಗಾಣುವಿನ ಸೋಂಕಿನ ಅಪಾಯ ಹೆಚ್ಚಿನ ಪ್ರಮಾಣದಲ್ಲಿದೆ. ಇದರಿಂದ ಹುಟ್ಟುವ ಮಗು ವಿಕಸಿತಗೊಳ್ಳದ ಮೆದುಳಿನೊಂದಿಗೆ ಹುಟ್ಟುವ ಅಪಾಯ ಹೆಚ್ಚಿರುತ್ತದೆ.