ಕೇಂದ್ರದಲ್ಲಿನ ೭೮ ಸಚಿವರ ಪೈಕಿ ೩೩ ಸಚಿವರ ಮೇಲೆ ಗಂಭೀರ ಅಪರಾಧಗಳ ಆರೋಪ !

೨೪ ಸಚಿವರ ಮೇಲೆ ಹತ್ಯೆ, ಹತ್ಯೆಯ ಪ್ರಯತ್ನ, ಲೂಟಿ ಇತ್ಯಾದಿ ಗಂಭೀರ ಅಪರಾಧ !

ನವದೆಹಲಿ – ಕೇಂದ್ರ ಮಂತ್ರಿಮಂಡಳಿಯ ವಿಸ್ತಾರದ ನಂತರ ಈಗ ಸಚಿವರ ಒಟ್ಟು ಸಂಖ್ಯೆ ೭೮ ಆಗಿದೆ; ಆದರೆ ಅದರಲ್ಲಿ ಶೇ. ೪೨ ರಷ್ಟು ಅಂದರೆ ೩೩ ಸಚಿವರ ವಿರುದ್ಧ ವಿವಿಧ ಅಪರಾಧಗಳ ಆರೋಪವಿದೆ. ಅದರಲ್ಲಿ ೨೪ ಜನರ ವಿರುದ್ಧ ಹತ್ಯೆ, ಹತ್ಯೆಯ ಪ್ರಯತ್ನ, ಲೂಟಿಯಂತಹ ಗಂಭಿರವಾದ ಅಪರಾಧದ ಆರೋಪಗಳಿವೆ. ‘ಅಸೊಸಿಯೇಶನ್ ಫಾರ್ ಡೆಮೊಕ್ರೆಟಿಕ್ ರಿಪಾರ್ಮ'(‘ಎ.ಡಿ.ಆರ್.’ವು) ಈ ಬಗೆಗಿನ ಮಾಹಿತಿಯ ವರದಿಯನ್ನು ಪ್ರಕಟಿಸಿದೆ. ಈ ಎಲ್ಲಾ ಸಚಿವರು ಚುನಾವಣೆಯ ಸಮಯದಲ್ಲಿ ಸಲ್ಲಿಸಿದ ಪ್ರತಿಜ್ಞಾಪತ್ರದಲ್ಲಿ ನೀಡಿದ ಮಾಹಿತಿಯಿಂದ ಈ ಮಾಹಿತಿ ಬೆಳಕಿಗೆ ಬಂದಿದೆ.

ಗೃಹ ರಾಜ್ಯಸಚಿವ ನಿಸಿಥ ಪ್ರಾಮಾಣಿಕ ಇವರ ಮೇಲೆ ಹತ್ಯೆಯ ಆರೋಪ !

ಮಂತ್ರಿಮಂಡಳದಲ್ಲಿ ಅತ್ಯಂತ ಯುವ ಸಚಿವರಾಗಿರುವ ಹಾಗೂ ಕೇಂದ್ರದ ಗೃಹ ರಾಜ್ಯಸಚಿವಾಲಯದ ಹುದ್ದೆಯನ್ನು ಪಡೆದಿರುವ ೩೫ ವರ್ಷದ ನಿಸಿಥ ಪ್ರಾಮಾಣಿಕ ಇವರ ವಿರುದ್ಧ ಭಾದಂಸಂ. ಕಲಂ ೩೦೨ ಕ್ಕನುಸಾರ ಹತ್ಯೆಯ ಅಪರಾಧದ ಆರೋಪವಿದೆ. ವಿಶೇಷವೆಂದರೆ ಅವರು ೮ ನೇ ತರಗತಿಯ ತನಕ ವಿದ್ಯಾಭ್ಯಾಸ ಮಾಡಿದ್ದಾರೆ. ಇವರೊಂದಿಗೆ ಜಾನ್ ಬಾರಲಾ, ಪಂಕಜ ಚೌಧರಿ ಮತ್ತು ವಿ. ಮುರುಲಿಧರನ ಈ ಸಚಿವರ ವಿರುದ್ಧ ಹತ್ಯೆಯ ಪ್ರಯತ್ನಕ್ಕೆ ಸಂಬಂಧಿಸಿದಂತೆ ಕಲಂ ೩೦೭ ಕ್ಕನುಸಾರ ಅಪರಾಧ ದಾಖಲಾಗಿದೆ.

ಶೇ. ೧೫ ರಷ್ಟು ಸಚಿವರ ವಿದ್ಯಾಭ್ಯಾಸವು ೮ ರಿಂದ ೧೨ ತರಗತಿಯವರೆಗೆ ಮಾತ್ರ!

ನೂತನ ಸಚಿವರಲ್ಲಿ ಶೇ. ೧೫ ರಷ್ಟು ಅಂದರೆ ೧೨ ಸಚಿವರು ೮ ರಿಂದ ೧೨ ರ ತನಕ ವಿದ್ಯಾಭ್ಯಾಸ ಮಾಡಿದ್ದಾರೆ. ೬೪ ಸಚಿವರು ಪದವಿ ಪಡೆದವರು ಹಾಗೂ ಅದಕ್ಕಿಂತ ಉಚ್ಚಶಿಕ್ಷಿತರಾಗಿದ್ದಾರೆ. ಇಬ್ಬರು ಸಚಿವರು ಡಿಪ್ಲೊಮಾ ಮಾಡಿದ್ದಾರೆ. ೧೭ ಸಚಿವರು ಪದವಿ, ೨೧ ಸಚಿವರು ಸ್ನಾತಕೋತ್ತರ, ಹಾಗೂ ೯ ಸಚಿವರು ವೈದ್ಯಕೀಯ ಶಿಕ್ಷಣವನ್ನು ಪಡೆದಿದ್ದಾರೆ.