ಶ್ರೀರಾಮಜನ್ಮಭೂಮಿ ಆಂದೋಲನದಲ್ಲಿ ಪ್ರಾಣತ್ಯಾಗ ಮಾಡಿದ ಕಾರಸೇವಕರ ಮನೆಯ ತನಕ ರಸ್ತೆಯನ್ನು ನಿರ್ಮಿಸಿ ಅದಕ್ಕೆ ಅವರ ಹೆಸರಿಡಲಾಗುವುದು !

ಉತ್ತರಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಇವರ ಘೋಷಣೆ !

ಕೇಶವ ಪ್ರಸಾದ ಮೌರ್ಯ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಶ್ರೀರಾಮಜನ್ಮಭೂಮಿ ಆಂದೋಲನದಲ್ಲಿ ಪ್ರಾಣತ್ಯಾಗ ಮಾಡಿದ ರಾಜ್ಯದ ಕಾರಸೇವಕರ ಮನೆಯ ತನಕ ರಸ್ತೆಯನ್ನು ನಿರ್ಮಿಸಲಾಗುವುದು ಮತ್ತು ಅದಕ್ಕೆ ಈ ಕಾರಸೇವಕರ ಹೆಸರನ್ನೂ ಇಡಲಾಗುವುದು, ಜೊತೆಗೆ ಅವರ ಛಾಯಾಚಿತ್ರವನ್ನೂ ಹಾಕಲಾಗುವುದು, ಎಂದು ರಾಜ್ಯದ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಇವರು ಘೋಷಣೆ ಮಾಡಿದ್ದಾರೆ.

ಮೌರ್ಯ ತಮ್ಮ ಮಾತನ್ನು ಮುಂದುವರೆಸುತ್ತಾ, ಗಡಿಯಲ್ಲಿ ಹುತಾತ್ಮರಾಗುವ ಸೈನಿಕರು ಮತ್ತು ದೇಶದ ಆಂತರಿಕದಲ್ಲಿ ಹುತಾತ್ಮರಾಗುವ ಪೊಲೀಸರ ಮನೆಯವರೆಗಿನ ರಸ್ತೆಯನ್ನು ನಿರ್ಮಿಸಲಾಗುವುದು ಮತ್ತು ಅದಕ್ಕೆ ‘ಜೈ ಹಿಂದ ವೀರ ಪಥ’ ಎಂದು ಹೆಸರಿಡಲಾಗುವುದು ಎಂದು ಹೇಳಿದರು.