ಸಂಸ್ಕೃತ ಭಾಷೆಯ ಏಕೈಕ ದಿನಪತ್ರಿಕೆ ‘ಸುಧರ್ಮಾ’ದ ಸಂಪಾದಕ ಕೆ.ವಿ. ಸಂಪತ್ ಕುಮಾರ್ ನಿಧನ

ಭಾರತದ ಏಕೈಕ ಸಂಸ್ಕೃತ ದಿನಪತ್ರಿಕೆ ‘ಸುಧರ್ಮಾ’ದ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಜೂನ್ ೩೦ ರಂದು ಹೃದಯಾಘಾತದಿಂದ ನಿಧನರಾದರು. ೨೦೨೦ ರಲ್ಲಿ ಅವರು ಮತ್ತು ಅವರ ಪತ್ನಿ ಎಸ್. ಜಯಲಕ್ಷ್ಮಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾಹ ಸಂತಾಪ ಸೂಚಿಸಿದ್ದಾರೆ.

ಕೊರೊನಾದ ಮೂರನೇ ಅಲೆಯು ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಬಹುದು ! – ತಜ್ಞರ ಅಂದಾಜು

ಭಾರತೀಯರು ಕೊರೊನಾದ ನಿಯಮಗಳನ್ನು ಪಾಲಿಸದಿದ್ದರೆ ಕೊರೊನಾದ ೩ ನೇ ಅಲೆಯು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಗರಿಷ್ಠ ಮಟ್ಟವನ್ನು ತಲುಪಬಹುದು; ಆದರೆ ಎರಡನೇ ಅಲೆಯಲ್ಲಿ ಪ್ರತಿದಿನ ಎಷ್ಟು ರೋಗಿಗಳ ಸಂಖ್ಯೆ ನಮೂದಾಗಿತ್ತೋ ಅದರ ತುಲನೆಯಲ್ಲಿ ಮೂರನೇ ಅಲೆಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಕೊರೊನಾದ ಕುರಿತು ಸರಕಾರಿ ಗುಂಪಿನ ವಿಜ್ಞಾನಿಯು ಹೇಳಿದ್ದಾರೆ.

ಪಠ್ಯಪುಸ್ತಕದಲ್ಲಿ ತಪ್ಪಾದ ಇತಿಹಾಸವನ್ನು ಬದಲಾಯಿಸುವ ಸಂಸದೀಯ ಸಮಿತಿಯು ಈ ಬಗೆಗಿನ ಸೂಚನೆಯನ್ನು ಕೋರುವ ದಿನಾಂಕವನ್ನು ಜುಲೈ ೧೫ ರ ತನಕ ಮುಂದುವರಿಸಿದೆ !

ಈ ಸಮಿತಿಯ ಅಧ್ಯಕ್ಷ ಮತ್ತು ಶಾಸಕ ವಿನಯ ಸಹಸ್ರಬುದ್ಧೆ ಇವರು ಮಾತನಾಡಿ, ಭಾರತೀಯ ಶಾಲೆಗಳ ಪಠ್ಯಪುಸ್ತಕಗಳಲ್ಲಿ ಮೊದಲು ದೇಶಕ್ಕೆ ಸ್ಥಾನವನ್ನು ನೀಡಬೇಕು. ೧೯೭೫ ರಲ್ಲಿ ತುರ್ತು ಪರಿಸ್ಥಿತಿ ಮತ್ತು ೧೯೯೮ ರಲ್ಲಿಯ ಪೋಖರಣ ಪರಮಾಣು ಪರೀಕ್ಷಣೆಗೂ ಪಠ್ಯ ಪುಸ್ತಕದಲ್ಲಿ ಸ್ಥಾನ ನೀಡಬೇಕು.

೫ ಲಕ್ಷ ರೂಪಾಯಿಗಳ ಲಂಚವನ್ನು ಪಡೆಯುತ್ತಿದ್ದ ಕರ್ಣಾವತಿ(ಗುಜರಾತ)ಯ ಈಡಿಯ ೨ ಅಧಿಕಾರಿಗಳ ಬಂಧನ

ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಾಪಿಸಲಾದ ಈಡಿಯ ಅಧಿಕಾರಿಗಳೇ ಭ್ರಷ್ಟರಾಗಿದ್ದಾರೆ, ಇದರಿಂದ ಎಲ್ಲಾ ತನಿಖಾ ಸಂಸ್ಥೆಗಳು ಭ್ರಷ್ಟಾಚಾರದಿಂದ ಕೂಡಿದೆ, ಎಂಬುದು ಗಮನಕ್ಕೆ ಬರುತ್ತದೆ ! ಈ ಸ್ಥಿತಿಯನ್ನು ಕೇವಲ ಹಿಂದೂ ರಾಷ್ಟ್ರದಲ್ಲೇ ಬದಲಾಯಿಸಬಹುದು !

ಗುಜರಾತಿನಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ, ಇಸ್ಪೀಟು ಆಡುವ ಭಾಜಪದ ಶಾಸಕ ಮತ್ತು ಇತರೆ ೨೫ ಜನರ ಬಂಧನ.

ಇಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಒಂದು ರೆಸಾರ್ಟನಲ್ಲಿ ಇಸ್ಪೀಟು ಆಡುವ ಮತ್ತು ಮದ್ಯ ಸಂಗ್ರಹ ಹೊಂದಿರುವ ಪ್ರಕರಣದಲ್ಲಿ ಭಾಜಪ ಶಾಸಕ ಕೇಸರಿ ಸಿಂಹ ಸೋಲಂಕಿ ಮತ್ತು ಇತರೆ ೨೫ ಜನರನ್ನು ಬಂಧಿಸಲಾಗಿದೆ.

‘ಮೆರಿಟಾಯಿಮ್ ಕಮಾಂಡ್’ ಮತ್ತು ‘ಏಯರ್ ಡಿಫೆನ್ಸ್ ಕಮಾಂಡ್’ ಸ್ಥಾಪಿಸಲಾಗುವುದು!

ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಅಪಾಯವನ್ನು ಗಮನಿಸಿ, ಮೆರಿಟಾಯಿಮ್ ಕಮಾಂಡ್ ಸ್ಥಾಪಿಸಲಾಗುತ್ತಿದೆ. ಈ ಕಮಾಂಡ ಭಾರತೀಯ ಮಹಾಸಾಗರ ಕ್ಷೇತ್ರದ ರಕ್ಷಣಾ ವ್ಯವಸ್ಥೆಯ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲಿದೆ. ಸಧ್ಯಕ್ಕೆ ಸೈನ್ಯ ನೆಲೆ, ನೌಕಾ ನೆಲೆ ಮತ್ತು ಇನ್ನಿತರೆ ಯಂತ್ರಗಳ ರಕ್ಷಣೆಯನ್ನು ಮಾಡಲಿದೆ.

ಜಂಕ್ ಫುಡ್‍ನಿಂದ ಆರೋಗ್ಯದ ಮೇಲಾಗುವ ಪರಿಣಾಮದ ಬಗ್ಗೆ ಟ್ವಿಟರ್ ನಲ್ಲಿ ಆಗಿದ್ದ #NoJunkFood_StayHealthy ಟ್ರೆಂಡ್ ಮೂರನೇ ಸ್ಥಾನದಲ್ಲಿ !

ಇತ್ತೀಚೆಗೆ ‘ಫೈನಾನ್ಶಿಯಲ್ ಟೈಮ್ಸ್’ ಪ್ರಕಟಿಸಲಾದ ವಾರ್ತೆಯಲ್ಲಿ ಜಗತ್ತಿನಾದ್ಯಂತ ಆಹಾರಗಳನ್ನು ತಯಾರಿಸುವ ಸಂಸ್ಥೆ `ನೆಸ್ಲೆ’ಯು, ‘ತನ್ನ ಶೇ. ೬೦ ರಷ್ಟು ಆಹಾರವು ಜಂಕ ಫುಡ್ ಈ ಶ್ರೇಣಿಯಲ್ಲಿ ಬರುತ್ತದೆ ಮತ್ತು ಅದು ಆರೋಗ್ಯಕ್ಕೆ ಹಾನಿಕರ’ ಎಂದು ಹೇಳಿದೆ. ಇಂದು ಜಂಕ ಫುಡ್ ಜನಪ್ರಿಯ ಆಹಾರವಾಗಿದೆ. ಅನೇಕ ವಿದೇಶಿ ಸಂಸ್ಥೆಗಳು ಜಂಕ್ ಫುಡ್‍ಅನ್ನು ಮಾರಾಟ ಮಾಡುತ್ತಿದ್ದು ಅದನ್ನು ತಿಂದು ಭಾರತಿಯರ ಆರೋಗ್ಯದ ಮೇಲೆ ಪರಿಣಾಮವಾಗುತ್ತಿದೆ.

ಬಿಹಾರ-ನೇಪಾಳದ ಗಡಿಯಲ್ಲಿ ಪತ್ತೆಯಾದ ಚೀನಾದ ೮ ಡ್ರೋನ್‍ಗಳು !

ಜಮ್ಮುವಿನ ಸೈನ್ಯ ಮತ್ತು ವಾಯುದಳದ ನೆಲೆಯ ಪರಿಸರದಲ್ಲಿ ಜಿಹಾದಿ ಭಯೋತ್ಪಾದಕರಿಂದ ಡ್ರೋನ್ ಮೂಲಕ ದಾಳಿ ಮಾಡುವ ಪ್ರಯತ್ನವಾಗುತ್ತಿರುವಾಗ ಈಗ ಬಿಹಾರದ ನೇಪಾಳದ ಗಡಿಯಲ್ಲಿಯೂ ಚೀನಾದ ೮ ಡ್ರೋನ್‍ಗಳು ಪತ್ತೆಯಾಗಿವೆ. ಪೂರ್ವ ಚಂಪಾರಣ ಜಿಲ್ಲೆಯ ಗಡಿಯಲ್ಲಿ ಸಶಸ್ತ್ರ ಗಡಿ ಪಡೆಯ ಸೈನಿಕರು ಒಂದು ಚತುಶ್ಚಕ್ರ ವಾಹನದಿಂದ ೮ ಡ್ರೋನ್ ಮತ್ತು ೮ ಕ್ಯಾಮೆರಾಗಳನ್ನು ವಶ ಪಡಿಸಿಕೊಂಡಿದ್ದಾರೆ.

ಅನುಕಂಪದ ತತ್ತ್ವದ ಆಧಾರದ ಮೇಲೆ ನೌಕರಿ ನೀಡಲು ಸಂಬಂಧಪಟ್ಟ ವ್ಯಕ್ತಿ ಅಪ್ರಾಪ್ತನಾಗಿದ್ದರೆ ಆತ ದೊಡ್ಡವನಾಗುವ ತನಕ ಕಾಯುವ ಅವಶ್ಯಕತೆ ಇಲ್ಲ !

ನೌಕರರು ತೀರಿಕೊಂಡಾಗ ಅವರ ಕುಟುಂಬವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಮತ್ತು ಅದೇ ಅನುಕಂಪದ ಏಕೈಕ ಆಧಾರವಾಗಿದೆ, ಎಂದು ಅಲಾಹಾಬಾದ ಉಚ್ಚ ನ್ಯಾಯಾಲಯದ ಲಖನೌ ಖಂಡಪೀಠವು ಒಂದು ಅರ್ಜಿಯ ಆಲಿಕೆಯನ್ನು ನಡೆಸುತ್ತಿರುವಾಗ ಈ ತೀರ್ಪನ್ನು ನೀಡಿದೆ.

ದರಭಂಗಾ ರೈಲು ನಿಲ್ದಾಣದಲ್ಲಿ ಆಗಿದ್ದ ಬಾಂಬ್ ಸ್ಪೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಷ್ಕರ-ಎ-ತೊಯ್ಬಾದ ಇಬ್ಬರು ಭಯೋತ್ಪಾದಕರ ಬಂಧನ

ಬಿಹಾರದ ದರಭಂಗಾ ರೈಲು ನಿಲ್ದಾಣದಲ್ಲಿ ಜೂನ್ ೧೭ ರಂದು ಪಾರ್ಸಲ್ ಬಾಂಬ್ ಸ್ಪೋಟಗೊಳಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು ಲಷ್ಕರ-ಎ-ತೊಯ್ಬಾದ ಇಮ್ರಾನ್ ಮಲ್ಲಿಕ್ ಮತ್ತು ಮಹಮದ್ ನಾಸೀರ್ ಈ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದೆ.