ಬಿಹಾರ-ನೇಪಾಳದ ಗಡಿಯಲ್ಲಿ ಪತ್ತೆಯಾದ ಚೀನಾದ ೮ ಡ್ರೋನ್‍ಗಳು !

೩ ಕಳ್ಳರ ಬಂಧನ !

ಚೀನಾದ ೮ ಡ್ರೋನ್‌ಗಳೊಂದಿಗೆ ೩ ಕಳ್ಳರ ಬಂಧನ

ಮೊತಿಹಾರಿ (ಬಿಹಾರ) – ಜಮ್ಮುವಿನ ಸೈನ್ಯ ಮತ್ತು ವಾಯುದಳದ ನೆಲೆಯ ಪರಿಸರದಲ್ಲಿ ಜಿಹಾದಿ ಭಯೋತ್ಪಾದಕರಿಂದ ಡ್ರೋನ್ ಮೂಲಕ ದಾಳಿ ಮಾಡುವ ಪ್ರಯತ್ನವಾಗುತ್ತಿರುವಾಗ ಈಗ ಬಿಹಾರದ ನೇಪಾಳದ ಗಡಿಯಲ್ಲಿಯೂ ಚೀನಾದ ೮ ಡ್ರೋನ್‍ಗಳು ಪತ್ತೆಯಾಗಿವೆ. ಪೂರ್ವ ಚಂಪಾರಣ ಜಿಲ್ಲೆಯ ಗಡಿಯಲ್ಲಿ ಸಶಸ್ತ್ರ ಗಡಿ ಪಡೆಯ ಸೈನಿಕರು ಒಂದು ಚತುಶ್ಚಕ್ರ ವಾಹನದಿಂದ ೮ ಡ್ರೋನ್ ಮತ್ತು ೮ ಕ್ಯಾಮೆರಾಗಳನ್ನು ವಶ ಪಡಿಸಿಕೊಂಡಿದ್ದಾರೆ. ದಿಗ್ಬಂಧನದ ಸಮಯದಲ್ಲಿ ಈ ಡ್ರೋನ್ ಪತ್ತೆಯಾಗಿತ್ತು. ಈ ಗಡಿಯಲ್ಲಿಂದ ೩ ಜನರನ್ನು ಬಂಧಿಸಲಾಗಿದೆ. ವಿಕ್ಕಿ ಕುಮಾರ, ರಾಹುಲ ಕುಮಾರ ಮತ್ತು ಕೃಷ್ಣಾನಂದ ಕುಮಾರ ಎಂಬ ಹೆಸರಿನ ಇವರೆಲ್ಲರು ಬಿಹಾರದ ಸೀತಾಮಢಿ ಹಾಗೂ ಪೂರ್ವ ಚಂಪರಣ ಜಿಲ್ಲೆಯವರಾಗಿದ್ದಾರೆ. ಅವರ ಮೇಲೆ ಕಳ್ಳತನದ ಅಪರಾಧವನ್ನು ದಾಖಲಿಸಲಾಗಿದೆ. ಕೆಲವು ದಿನಗಳ ಹಿಂದೆ ನೇಪಾಳದ ಗಡಿಯಲ್ಲೇ ಎರಡುವರೆ ಕೋಟಿ ರೂಪಾಯಿಯ ಚರಸ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ಶೇಖ ಈ ಕಳ್ಳಸಾಗಣಿಕೆದಾರನನ್ನು ಬಂಧಿಸಲಾಗಿತ್ತು. ಭಾರತ-ನೇಪಾಳ ಗಡಿ ಎಲ್ಲರಿಗಾಗಿ ತೆರೆದಿರುವುದರಿಂದ ಈ ಗಡಿಯಿಂದಾಗುವ ಕಳ್ಳಸಾಗಣಿಕೆಯನ್ನು ತಡೆಯಲು ಕಷ್ಟವಾಗಿದೆ ಎಂದು ಭದ್ರತಾಪಡೆಗಳ ಅಭಿಪ್ರಾಯವಾಗಿದೆ.