ಜಂಕ್ ಫುಡ್‍ನಿಂದ ಆರೋಗ್ಯದ ಮೇಲಾಗುವ ಪರಿಣಾಮದ ಬಗ್ಗೆ ಟ್ವಿಟರ್ ನಲ್ಲಿ ಆಗಿದ್ದ #NoJunkFood_StayHealthy ಟ್ರೆಂಡ್ ಮೂರನೇ ಸ್ಥಾನದಲ್ಲಿ !

ಮುಂಬಯಿ – ಇತ್ತೀಚೆಗೆ ‘ಫೈನಾನ್ಶಿಯಲ್ ಟೈಮ್ಸ್’ ಪ್ರಕಟಿಸಲಾದ ವಾರ್ತೆಯಲ್ಲಿ ಜಗತ್ತಿನಾದ್ಯಂತ ಆಹಾರಗಳನ್ನು ತಯಾರಿಸುವ ಸಂಸ್ಥೆ ‘ನೆಸ್ಲೆ’ಯು, ‘ತನ್ನ ಶೇ. ೬೦ ರಷ್ಟು ಆಹಾರವು ಜಂಕ್ ಫುಡ್ ಈ ಶ್ರೇಣಿಯಲ್ಲಿ ಬರುತ್ತದೆ ಮತ್ತು ಅದು ಆರೋಗ್ಯಕ್ಕೆ ಹಾನಿಕರ’ ಎಂದು ಹೇಳಿದೆ. ಇಂದು ಜಂಕ್ ಫುಡ್ ಜನಪ್ರಿಯ ಆಹಾರವಾಗಿದೆ. ಅನೇಕ ವಿದೇಶಿ ಸಂಸ್ಥೆಗಳು ಜಂಕ್ ಫುಡ್‍ಅನ್ನು ಮಾರಾಟ ಮಾಡುತ್ತಿದ್ದು ಅದನ್ನು ತಿಂದು ಭಾರತಿಯರ ಆರೋಗ್ಯದ ಮೇಲೆ ಪರಿಣಾಮವಾಗುತ್ತಿದೆ. ಅದೇರೀತಿ ಈ ಸಂಸ್ಥೆಗಳು ಭಾರತೀಯರ ಸಾವಿರಾರು ಕೋಟಿ ಹಣವನ್ನು ವಿದೇಶಕ್ಕೆ ಕೊಂಡೊಯ್ಯುತ್ತಿವೆ. ಇದರ ವಿರುದ್ಧ ರಾಷ್ಟ್ರಪ್ರೇಮಿಗಳು ಮಾಡಿದ #NoJunkFood_StayHealthy ಈ ಹ್ಯಾಶ್‍ಟ್ಯಾಗ್ ಟ್ರೆಂಡ್ ಮೂರನೇ ಸ್ಥಾನದಲ್ಲಿತ್ತು. ಇದರಲ್ಲಿ ೩೫ ಸಾವಿರಕ್ಕೂ ಹೆಚ್ಚು ಜನರು ಟ್ವೀಟ್ಸ್ ಮಾಡಿದರು. ಟ್ವೀಟ್ಸ್ ಮಾಡುವವರು ವಿದೇಶಿ ಸಂಸ್ಥೆಗಳ ಜಂಕ್ ಫುಡ್ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಭಾರತೀಯ ಆಹಾರವನ್ನು ಸೇವಿಸಿರಿ’ ಎಂದು ಕರೆ ನೀಡಿದರು.