ಅನುಕಂಪದ ತತ್ತ್ವದ ಆಧಾರದ ಮೇಲೆ ನೌಕರಿ ನೀಡಲು ಸಂಬಂಧಪಟ್ಟ ವ್ಯಕ್ತಿ ಅಪ್ರಾಪ್ತನಾಗಿದ್ದರೆ ಆತ ದೊಡ್ಡವನಾಗುವ ತನಕ ಕಾಯುವ ಅವಶ್ಯಕತೆ ಇಲ್ಲ !

ಅಲಾಹಾಬಾದ ಉಚ್ಚ ನ್ಯಾಯಾಲಯದ ಲಖನೌ ಖಂಡಪೀಠದ ತೀರ್ಪು !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಸರಕಾರಿ ನೌಕರರು ನಿವೃತ್ತಿಯ ಮೊದಲು ತೀರಿಕೊಂಡರೆ ಅನುಕಂಪ ತತ್ತ್ವದ ಆಧಾರದ ಮೇಲೆ ಕುಟುಂಬದ ವ್ಯಕ್ತಿಯನ್ನು ಕೆಲಸಕ್ಕಾಗಿ ನೇಮಿಸುವಾಗ ಆತ ಒಂದು ವೇಳೆ ಅಪ್ರಾಪ್ತನಾಗಿದ್ದರೆ, ಆತ ಶಿಕ್ಷಣ ಪಡೆಯುತ್ತಿದ್ದರೆ, ಆತ ದೊಡ್ಡವನಾಗುವ ತನಕ ಕಾಯುವ ಅವಶ್ಯಕತೆ ಇಲ್ಲ. ನೌಕರರು ತೀರಿಕೊಂಡಾಗ ಅವರ ಕುಟುಂಬವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಮತ್ತು ಅದೇ ಅನುಕಂಪದ ಏಕೈಕ ಆಧಾರವಾಗಿದೆ, ಎಂದು ಅಲಾಹಾಬಾದ ಉಚ್ಚ ನ್ಯಾಯಾಲಯದ ಲಖನೌ ಖಂಡಪೀಠವು ಒಂದು ಅರ್ಜಿಯ ಆಲಿಕೆಯನ್ನು ನಡೆಸುತ್ತಿರುವಾಗ ಈ ತೀರ್ಪನ್ನು ನೀಡಿದೆ.