‘ಮೆರಿಟಾಯಿಮ್ ಕಮಾಂಡ್’ ಮತ್ತು ‘ಏಯರ್ ಡಿಫೆನ್ಸ್ ಕಮಾಂಡ್’ ಸ್ಥಾಪಿಸಲಾಗುವುದು!

ಡ್ರೋನ್ ಆಕ್ರಮಣದ ಬಳಿಕ ಸೈನ್ಯದ ನಿರ್ಣಯ!

ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್

ನವದೆಹಲಿ – ನಾವು ‘ಮೆರಿಟಾಯಿಮ್ ಕಮಾಂಡ್’ ಮತ್ತು ‘ಏಯರ್ ಡಿಫೆನ್ಸ್ ಕಮಾಂಡ್’ ಸ್ಥಾಪಿಸುತ್ತಿರುವುದಾಗಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಇವರು ‘ಇಂಡಿಯಾ ಟುಡೆ’ ಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ. ಜಮ್ಮುವಿನಲ್ಲಿ ಭಯೋತ್ಪಾದಕರು ಡ್ರೋನ್ ಮಾಧ್ಯಮದಿಂದ ಸೈನ್ಯದಳ ಮತ್ತು ವಾಯುದಳ ನೆಲೆಯ ಮೇಲೆ ಆಕ್ರಮಣ ನಡೆಸಲು ಪ್ರಯತ್ನಿಸಿರುವುದರ ಹಿನ್ನೆಲೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಂಡಿರುವುದಾಗಿ ರಾವತ್ ತಿಳಿಸಿದರು.

೧. ಜನರಲ್ ರಾವತ್ ಇವರು ಮಾತನಾಡುತ್ತಾ, ವಾಯುದಳದ ನೆಲೆಯ ಸಂರಕ್ಷಣೆಯನ್ನು ಮಾಡುವುದು ಏಯರ್ ಡಿಫೆನ್ಸ್ ಕಮಾಂಡ್ ಜವಾಬ್ದಾರಿಯಾಗಿರುತ್ತದೆ. ಈ ಕಮಾಂಡ್ ಯುದ್ಧ ವಿಮಾನಗಳು, ಹೆಲಿಕಾಪ್ಟರ್ ಮತ್ತು ಡ್ರೋನ್‍ಗಳ ಕಡೆಗೆ ಗಮನ ಕೇಂದ್ರೀಕರಿಸಲಿದೆ. ೧೫ ಅಗಸ್ಟನಿಂದ ಏಯರ್ ಡಿಫೆನ್ಸ್ ಕಮಾಂಡ್ ಕಾರ್ಯನಿರ್ವಹಿಸಲಿದೆ. ಇದರ ಮುಂದಾಳತ್ವವು ವಾಯುದಳದ ಥ್ರೀ ಸ್ಟಾರ್ ಅಧಿಕಾರಿಗಳ ಬಳಿ ಇರಲಿದೆ. ಎಂದು ಹೇಳಿದರು.

೨. ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಅಪಾಯವನ್ನು ಗಮನಿಸಿ, ಮೆರಿಟಾಯಿಮ್ ಕಮಾಂಡ್ ಸ್ಥಾಪಿಸಲಾಗುತ್ತಿದೆ. ಈ ಕಮಾಂಡ ಭಾರತೀಯ ಮಹಾಸಾಗರ ಕ್ಷೇತ್ರದ ರಕ್ಷಣಾ ವ್ಯವಸ್ಥೆಯ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲಿದೆ. ಸಧ್ಯಕ್ಕೆ ಸೈನ್ಯ ನೆಲೆ, ನೌಕಾ ನೆಲೆ ಮತ್ತು ಇನ್ನಿತರೆ ಯಂತ್ರಗಳ ರಕ್ಷಣೆಯನ್ನು ಮಾಡಲಿದೆ. ಇದರೊಂದಿಗೆ ನಮಗೆ ಮೀನುಗಾರರು ಸಹಾಯ ಮಾಡುತ್ತಾರೆ. ಇವರೆಲ್ಲರ ಸಮನ್ವಯವನ್ನು ಮೆರಿಟಾಯಿಮ್ ಕಮಾಂಡ್ ಮಾಡಲಿದೆ.

ವೆಸ್ಟ ಮತ್ತು ನಾರ್ಥ ಫ್ರಂಟ ಸ್ಥಾಪನೆ ಮಾಡಲಿದ್ದೇವೆ!

ಜನರಲ್ ರಾವತ್ ಗಡಿಯಲ್ಲಿ ‘ವೆಸ್ಟ್ ಫ್ರಂಟ’ ಮತ್ತು ‘ನಾರ್ಥ ಫ್ರಂಟ’ ಸ್ಥಾಪನೆ ಮಾಡಲಿರುವುದಾಗಿಯೂ ಮಾಹಿತಿಯನ್ನು ನೀಡಿದರು.