ದರಭಂಗಾ ರೈಲು ನಿಲ್ದಾಣದಲ್ಲಿ ಆಗಿದ್ದ ಬಾಂಬ್ ಸ್ಪೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಷ್ಕರ-ಎ-ತೊಯ್ಬಾದ ಇಬ್ಬರು ಭಯೋತ್ಪಾದಕರ ಬಂಧನ

ಇಂತಹವರ ಮೇಲೆ ಶೀಘ್ರ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿ ಅವರಿಗೆ ಗಲ್ಲು ಶಿಕ್ಷೆಯಾಗುವಂತೆ ಸರಕಾರವು ಪ್ರಯತ್ನಿಸಬೇಕು !

ನವ ದೆಹಲಿ – ಬಿಹಾರದ ದರಭಂಗಾ ರೈಲು ನಿಲ್ದಾಣದಲ್ಲಿ ಜೂನ್ ೧೭ ರಂದು ಪಾರ್ಸಲ್ ಬಾಂಬ್ ಸ್ಪೋಟಗೊಳಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು ಲಷ್ಕರ-ಎ-ತೊಯ್ಬಾದ ಇಮ್ರಾನ್ ಮಲ್ಲಿಕ್ ಮತ್ತು ಮಹಮದ್ ನಾಸೀರ್ ಈ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದೆ. ಇವರಿಬ್ಬರು ಪಾಕ್‍ನೊಂದಿಗೆ ಸಂಪರ್ಕ ಹೊಂದಿದ್ದು ಅಲ್ಲಿನ ಮುಖ್ಯಸ್ಥರ ಆದೇಶದ ಮೇರೆಗೆ ಅವರು ಇಲ್ಲಿ ಕುಕೃತ್ಯಗಳನ್ನು ಮಾಡುತ್ತಿದ್ದರು. ಇವರಲ್ಲಿ ನಾಸೀರ್ ೨೦೧೨ ರಲ್ಲಿ ಪಾಕ್‍ಗೆ ಹೋಗಿ ಬಂದಿದ್ದ. ಅಲ್ಲಿ ಆತನು ‘ಕೆಮಿಕಲ್ ಬಾಂಬ್’ ತಯಾರಿಸುವುದನ್ನು ಕಲಿತಿದ್ದನು. ನಾಸೀರ್ ಮತ್ತು ಇಮ್ರಾನ್ ಇವರು ತೆಲಂಗಾಣಾದಲ್ಲಿಯ ಸಿಕಂದರಾಬಾದ್‍ನಿಂದ ದರಭಂಗಾದಲ್ಲಿ ಹೋಗುವ ರೈಲು ಗಾಡಿಯಲ್ಲಿ ಈ ಪಾರ್ಸಲ್ ಬಾಂಬ್ ಇಟ್ಟಿದ್ದರು. ದೇಶದ ವಿವಿಧ ಸ್ಥಳಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಮಾಡಲು ಪ್ರಯತ್ನಿಸುತ್ತಿದ್ದರು.