೫ ಲಕ್ಷ ರೂಪಾಯಿಗಳ ಲಂಚವನ್ನು ಪಡೆಯುತ್ತಿದ್ದ ಕರ್ಣಾವತಿ(ಗುಜರಾತ)ಯ ಈಡಿಯ ೨ ಅಧಿಕಾರಿಗಳ ಬಂಧನ

ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಾಪಿಸಲಾದ ಈಡಿಯ ಅಧಿಕಾರಿಗಳೇ ಭ್ರಷ್ಟರಾಗಿದ್ದಾರೆ, ಇದರಿಂದ ಎಲ್ಲಾ ತನಿಖಾ ಸಂಸ್ಥೆಗಳು ಭ್ರಷ್ಟಾಚಾರದಿಂದ ಕೂಡಿದೆ, ಎಂಬುದು ಗಮನಕ್ಕೆ ಬರುತ್ತದೆ ! ಈ ಸ್ಥಿತಿಯನ್ನು ಕೇವಲ ಹಿಂದೂ ರಾಷ್ಟ್ರದಲ್ಲೇ ಬದಲಾಯಿಸಬಹುದು !

ಕರ್ಣಾವತಿ(ಗುಜರಾತ) – ಇಲ್ಲಿಯ ಕೇಂದ್ರೀಯ ತನಿಖಾ ದಳದ ಲಂಚ ತಡೆ ಇಲಾಖೆಯ ಜಾರಿ ನಿರ್ದೇಶನಾಲಯ (ಈಡಿ)ದ ೨ ಅಧಿಕಾರಿಗಳನ್ನು ೫ ಲಕ್ಷ ರೂಪಾಯಿ ಲಂಚ ಪಡೆಯುತ್ತಿರುವಾಗ ಬಂಧಿಸಲಾಗಿದೆ. ಇಲ್ಲಿಯ ಈಡಿಯ ಕಾರ್ಯಾಲಯದಲ್ಲಿ ಉಪ ಸಂಚಾಲಕ ಪುರನ ಕಾಮ ಸಿಂಗ್ ಮತ್ತು ಸಹಾಯಕ ಸಂಚಾಲಕ ಭುವನೇಶ ಕುಮಾರ ಇವರನ್ನು ಓರ್ವ ವ್ಯಕ್ತಿಯಿಂದ ಲಂಚ ಪಡೆಯುತ್ತಿರುವಾಗ ಹಿಡಿಯಲಾಯಿತು. ಸಿಂಗ್ ಮತ್ತು ಕುಮಾರ ಇವರು ೭೫ ಲಕ್ಷದ ಲಂಚವನ್ನು ಕೇಳಿದ್ದರು. ನಂತರ ವ್ಯವಹಾರವನ್ನು ೫ ಲಕ್ಷಕ್ಕೆ ಕುದುರಿಸಲಾಗಿತ್ತು.