ಜೂಜಾಟವಾಗಿರುವ ‘ರಮಿ ಗಣೇಶ ಪ್ರೊ’ ಆಪ್ ಅನ್ನು ತೆಗೆದು ಹಾಕಿದ ಗೂಗಲ್ ಪ್ಲೇ ಸ್ಟೋರ್ !

ಜೂಜಾಟವಾಗಿರುವ ‘ರಮಿ ಗಣೇಶ ಪ್ರೋ’ ಈ ‘ಆಪ್’ಅನ್ನು ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂಗಳು ವಿರೋಧಿಸಿದ ನಂತರ ‘ಗೂಗಲ್ ಪ್ಲೇ ಸ್ಟೋರ್’ ನಿಂದ ತೆಗೆದುಹಾಕಲಾಗಿದೆ. ಹಿಂದೂಗಳ ದೇವರಾದ ಶ್ರೀ ಗಣೇಶನ ಹೆಸರಿಟ್ಟಿದ್ದರಿಂದ ಈ ’ಆಪ್’ಗೆ ವಿರೋಧಿಸಲಾಗಿತ್ತು.

ಸ್ವಾಮಿ ಕೊರಗಜ್ಜ ದೇವರ ವಿಡಂಬನಾತ್ಮಕ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿರುವುದರಿಂದ ಭಕ್ತರಲ್ಲಿ ಆಕ್ರೋಶ !

ಸ್ವಾಮಿ ಕೊರಗಜ್ಜ ದೇವರನ್ನು ಭಗವಾನ ಶಿವನ ಅವತಾರವೆಂದು ತಿಳಿಯುತ್ತಾರೆ. ಕೆಲವು ಕಿಡಿಗೇಡಿಗಳು ಸ್ವಾಮಿ ಕೊರಗಜ್ಜ ದೇವರ ಛಾಯಾಚಿತ್ರವನ್ನು ಗಣಕಯಂತ್ರದಲ್ಲಿ ತಿರುಚಿ (ಎಡಿಟ್) ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದಾರೆ.

ಮೇಡಕ್ (ತೆಲಂಗಾಣ) ನಲ್ಲಿ ಬಿಜೆಪಿ ನಾಯಕನನ್ನು ಚತುಶ್ಚಕ್ರ ವಾಹನದ ಡಿಕ್ಕಿಯಲ್ಲಿ ಕೂಡಿಟ್ಟು ಜೀವಂತ ಸುಟ್ಟರು !

ಇಲ್ಲಿನ ಬಿಜೆಪಿಯ ಮಾಜಿ ಜಿಲ್ಲಾ ಉಪಾಧ್ಯಕ್ಷ ವಿ. ಶ್ರೀನಿವಾಸ್ ಪ್ರಸಾದ್ (ವಯಸ್ಸು ೪೫) ಅವರನ್ನು ದುಷ್ಕರ್ಮಿಗಳು ಚತುಶ್ಚಕ್ರ ವಾಹನದ ಡಿಕ್ಕಿಯಲ್ಲಿ ಬಂದ್ ಮಾಡಿ ಜೀವಂತವಾಗಿ ಸುಟ್ಟಿದ್ದಾರೆ. ಪೊಲೀಸರು ಈ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.

೫ ಕ್ಕಿಂತಲೂ ಹೆಚ್ಚು ಮಕ್ಕಳಿರುವ ಕೇರಳದಲ್ಲಿನ ಕ್ರೈಸ್ತರಿಗೆ ಕ್ಯಾಥೋಲಿಕ್ ಚರ್ಚ್ ಆರ್ಥಿಕ ಸಹಾಯ ನೀಡಲಿದೆ !

ಕೇರಳ ಕ್ಯಾಥೋಲಿಕ್ ಬಿಶಪ್ಸ್ ಕೌನ್ಸಿಲ್ (ಕೆ.ಸಿ.ಬಿ.ಸಿ.) ಈ ಸಂಘಟನೆಯು ಕೇರಳದಲ್ಲಿನ ಕ್ರೈಸ್ತರ ಕ್ಷೀಣಿಸುತ್ತಿರುವ ಜನನದರದ ಬಗ್ಗೆ ಚಿಂತೆ ವ್ಯಕ್ತಪಡಿಸಿದೆ; ಆದರೆ ಮತ್ತೊಂದೆಡೆಯಲ್ಲಿ ಕೇರಳ ಕ್ಯಾಥೋಲಿಕ್ ಚರ್ಚ್‌ನಿಂದ ಕಲ್ಯಾಣಕಾರಿ ಯೋಜನೆಯನ್ನು ಘೋಷಣೆ ಮಾಡಿದೆ.

ಸ್ವಾತಂತ್ರ್ಯದ ೭೪ ವರ್ಷಗಳ ನಂತರ ಪ್ರಥಮ ಬಾರಿಗೆ ಮಾಕಪನ ಮುಖ್ಯ ಕಛೇರಿಯಲ್ಲಿ ಸ್ವಾತಂತ್ರ್ಯದಿನದಂದು ರಾಷ್ಟ್ರಧ್ವಜವನ್ನು ಹಾರಿಸಲಾಗುವುದು. 

ಸ್ವಾತಂತ್ರ್ಯದ ೭೪ ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ಮುಖ್ಯ ಕಛೇರಿ ಮತ್ತು ವಿವಿಧ ಕಾರ್ಯಾಲಯಗಳಲ್ಲಿ ಬರುವ ೧೫ ಆಗಸ್ಟ್ ಗೆ ಅಂದರೆ ಸ್ವಾತಂತ್ರ್ಯೋತ್ಸವ ದಿನದಂದು ರಾಷ್ಟ್ರಧ್ವಜ ಹಾರಿಸಲಾಗುವುದು.

ಬಂಗಾಲದಲ್ಲಿ ಬಿಜೆಪಿ ಕಾರ್ಯಕರ್ತನ ಪತ್ನಿಯ ಮೇಲೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆಂದು ಆರೋಪ

ಇಲ್ಲಿಯ ಬಿಜೆಪಿಯ ಓರ್ವ ಕಾರ್ಯಕರ್ತನು ತನ್ನ ೩೪ ವರ್ಷದ ಮೂಕ ಪತ್ನಿಯ ಮೇಲೆ ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾನೆ.

ಅಮೃತಸರ (ಪಂಜಾಬ್)ದ ಗ್ರಾಮಕ್ಕೆ ಪಾಕಿಸ್ತಾನದಿಂದ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಕಳುಹಿಸಿದೆ !

ಪಂಜಾಬಿನ ಅಮೃತಸರ ನಗರದ ಬಳಿ ಇರುವ ಒಂದು ಗ್ರಾಮಕ್ಕೆ ಪಾಕಿಸ್ತಾನದಿಂದ ಡ್ರೋನ್‌ಗಳ (ವಾಯು ಸಂಚಾರ ಮಾಡುವ ಯಂತ್ರ) ಮಾಧ್ಯಮದಿಂದ ಭಾರಿ ಪ್ರಮಾಣದಲ್ಲಿ ಶಸ್ತ್ರಗಳನ್ನು ಕಳಿಸಲಾಗುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಇದರಲ್ಲಿ ಹ್ಯಾಂಡ್ ಗ್ರೆನೇಡ್, ೧೦೦ ಗಿಂತಲೂ ಹೆಚ್ಚಿನ ಮದ್ದುಗುಂಡುಗಳು ಮತ್ತು ಟಿಫಿನ್ ಬಾಂಬ್ (ಊಟದ ಡಬ್ಬಿಯಲ್ಲಿ ಇಡಲಾದ ಬಾಂಬ್) ಇವೆ.

ಗಾಜಿಯಾಬಾದ್ (ಉತ್ತರ ಪ್ರದೇಶ) ದ ಪ್ರಸಿದ್ಧ ಶ್ರೀ ಡಾಸನಾ ದೇವಿ ದೇವಸ್ಥಾನಕ್ಕೆ ನುಗ್ಗಿ ಸಾಧು ಮೇಲೆ ಮಾರಣಾಂತಿಕ ಹಲ್ಲೆ

ಸ್ಥಳೀಯ ಪ್ರಸಿದ್ಧ ಶ್ರೀ ಡಾಸನಾ ದೇವಿಯ ದೇವಸ್ಥಾನದಲ್ಲಿ ಬಿಹಾರದ ಸಾಧು, ಅದೇ ರೀತಿ ದೇವಸ್ಥಾನದ ಮಹಂತ ಯತಿ ನರಸಿಂಹಾನಂದ ಸರಸ್ವತಿ ಇವರ ಸಹಕಾರಿ ನರೇಶ್ ಆನಂದ ಸರಸ್ವತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.

ಮಹಂತ್ ಶ್ರೀ ಕಿಶೋರ ಪುರಿ ಮಹಾರಾಜರ ದೇಹತ್ಯಾಗದ ನಂತರ ಮೆಹಂದಿಪುರ ಬಾಲಾಜಿ ದೇವಸ್ಥಾನವನ್ನು ಸರಕಾರಿಕಣಗೊಳಿಸುವ ಸಿದ್ಧತೆಯಲ್ಲಿರುವ ರಾಜಸ್ಥಾನದ ಕಾಂಗ್ರೆಸ್ ಸರಕಾರ !

ಇಲ್ಲಿನ ಪ್ರಸಿದ್ಧ ಮೆಹಂದೀಪುರ ಬಾಲಾಜಿ ದೇವಸ್ಥಾನದ ಮಹಾಂತರಾದ ಶ್ರೀ ಕಿಶೋರ್ ಪುರಿ ಮಹಾರಾಜರು ದೇಹತ್ಯಾಗ ಮಾಡಿದ ನಂತರ, ಈ ದೇವಸ್ಥಾನದ ಸರಕಾರಿಕರಣ ಮಾಡುವ ತಯಾರಿ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.

ಕೊಡಗಿನಲ್ಲಿರುವ ‘ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ’ಕ್ಕೆ ‘ಫೀಲ್ಡ್ ಮಾರ್ಷಲ್ ಕಾರಿಯಪ್ಪ’ ಹೆಸರಿಡುವಂತೆ ಬೇಡಿಕೆ

ಸ್ಥಳಿಯರು ಕರ್ನಾಟಕದ ಮುಖ್ಯಮಂತ್ರಿ ಮತ್ತು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆಯುವ ಮೂಲಕ ‘ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ’ದ ಹೆಸರು ಬದಲಾಯಿಸಿ ‘ಫೀಲ್ಡ್ ಮಾರ್ಷಲ್ ಕಾರಿಯಪ್ಪ ರಾಷ್ಟ್ರೀಯ ಉದ್ಯಾನವನ’ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿದ್ದಾರೆ.