ಅಮೃತಸರ (ಪಂಜಾಬ್)ದ ಗ್ರಾಮಕ್ಕೆ ಪಾಕಿಸ್ತಾನದಿಂದ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಕಳುಹಿಸಿದೆ !

ಹ್ಯಾಂಡ್ ಗ್ರೆನೇಡ್, ೧೦೦ ಗಿಂತಲೂ ಹೆಚ್ಚಿನ ಮದ್ದುಗುಂಡುಗಳು ಮತ್ತು ‘ಟಿಫಿನ್ ಬಾಂಬ್’ ಪತ್ತೆ !

  • ಪಾಕಿಸ್ತಾನದ ಡ್ರೋನ್‌ಗಳು ಭಾರತೀಯ ಗಡಿಯಲ್ಲಿ ಹೇಗೆ ನುಗ್ಗುತ್ತವೆ ? -ಸಂಪಾದಕರು
  • ಪಾಕಿಸ್ತಾನವು ಕಳೆದ ಕೆಲವು ವಾರಗಳಿಂದ ಡ್ರೋನ್‌ಗಳ ಸಹಾಯದಿಂದ ಕಾರ್ಯಾಚರಣೆ ಮಾಡುತ್ತಿದೆ. ಅದಕ್ಕೆ ಅಷ್ಟೇ ಪರಿಣಾಮಕಾರಿಯಾಗಿ ಪ್ರತ್ಯುತ್ತರ ನೀಡುವುದು ಅವಶ್ಯಕವಾಗಿದೆ! – ಸಂಪಾದಕರು

ಚಂದೀಗಢ – ಪಂಜಾಬಿನ ಅಮೃತಸರ ನಗರದ ಬಳಿ ಇರುವ ಒಂದು ಗ್ರಾಮಕ್ಕೆ ಪಾಕಿಸ್ತಾನದಿಂದ ಡ್ರೋನ್‌ಗಳ (ವಾಯು ಸಂಚಾರ ಮಾಡುವ ಯಂತ್ರ) ಮಾಧ್ಯಮದಿಂದ ಭಾರಿ ಪ್ರಮಾಣದಲ್ಲಿ ಶಸ್ತ್ರಗಳನ್ನು ಕಳಿಸಲಾಗುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಇದರಲ್ಲಿ ಹ್ಯಾಂಡ್ ಗ್ರೆನೇಡ್, ೧೦೦ ಗಿಂತಲೂ ಹೆಚ್ಚಿನ ಮದ್ದುಗುಂಡುಗಳು ಮತ್ತು ಟಿಫಿನ್ ಬಾಂಬ್ (ಊಟದ ಡಬ್ಬಿಯಲ್ಲಿ ಇಡಲಾದ ಬಾಂಬ್) ಇವೆ.

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಕ್ತಪಾತ ನಡೆಸಲು ಈ ಶಸ್ತ್ರ ಸಂಗ್ರಹವನ್ನು ಕಳಿಸಲಾಗಿದೆ ಎಂಬ ಸಂಶಯವನ್ನು ವ್ಯಕ್ತಪಡಿಸಲಾಗುತ್ತಿದೆ. ಗ್ರಾಮದವರ ಜಾಗರೂಕತೆಯಿಂದಾಗಿ ಈ ಡ್ರೋನ್‌ಗಳ ಬಗ್ಗೆ ಮಾಹಿತಿ ದೊರೆಯಿತು. ಈ ಡ್ರೋನ್ ಗೆ ೭ ಚೀಲಗಳನ್ನು ಕಟ್ಟಲಾಗಿತ್ತು. ಅವುಗಳನ್ನು ಆಗಸ್ಟ್ ೭ರ ರಾತ್ರಿ ಬೀಳಿಸಲಾಗಿತ್ತು. ಗ್ರಾಮದವರಿಗೆ ಇದರ ಶಬ್ದ ಕೇಳಿದಾಗ ಅವರು ಈ ಬಗ್ಗೆ ಹುಡುಕಿದಾಗ ಅವರಿಗೆ ಚೀಲಗಳು ಕಂಡುಬಂದವು. ಇವುಗಳಲ್ಲಿ ಶಸ್ತ್ರ ಸಂಗ್ರಹ ಇರುವುದು ಕಂಡುಬಂದಾಗ ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಅನಂತರ ಪೊಲೀಸರು ಈ ಶಸ್ತ್ರ ಸಂಗ್ರಹವನ್ನು ವಶಪಡಿಸಿಕೊಂಡರು. ಈ ಶಸ್ತ್ರಾಸ್ತ್ರಗಳನ್ನು ಯಾರಿಗಾಗಿ ಕಳಿಸಲಾಗಿದೆ ಎಂಬುದನ್ನು ಪೊಲೀಸರು ಹಾಗೂ ಗುಪ್ತಚರ ವಿಭಾಗವು ಶೋಧ ಕಾರ್ಯ ನಡೆಸುತ್ತಿದೆ.