ಸ್ವಾತಂತ್ರ್ಯದ ೭೪ ವರ್ಷಗಳ ನಂತರ ಪ್ರಥಮ ಬಾರಿಗೆ ಮಾಕಪನ ಮುಖ್ಯ ಕಛೇರಿಯಲ್ಲಿ ಸ್ವಾತಂತ್ರ್ಯದಿನದಂದು ರಾಷ್ಟ್ರಧ್ವಜವನ್ನು ಹಾರಿಸಲಾಗುವುದು. 

  • ಕಳೆದ ೭೪ ವರ್ಷಗಳಲ್ಲಿ ಮಾಕಪ ಅವರು ರಾಷ್ಟ್ರಧ್ವಜ ಏಕೆ ಹಾರಿಸಲಿಲ್ಲ, ಇದನ್ನು ಜನರಿಗೆ ಹೇಳಿ ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು – ಸಂಪಾದಕ
  • ಮಾಕಪ ಅವರು ಎಲ್ಲೆಡೆ ಸೋಲನ್ನು ಅನುಭವಿಸಿದ್ದಾರೆ ಎಂಬುದು ಗಮನಕ್ಕೆ ಬಂದಮೇಲೆ ಮತ್ತು ಭಾರತಿಯರಲ್ಲಿ ಹೆಚ್ಚೆಚ್ಚು ರಾಷ್ಟ್ರಪ್ರೇಮ ಜಾಗೃತ ಆಗುತ್ತಿರುವುದರಿಂದಲೇ ‘ತಾವೂ ರಾಷ್ಟ್ರಪ್ರೇಮಿಗಳು’, ಎಂದು ಬಿಂಬಿಸಲು ಈ ನಿರ್ಣಯವನ್ನು ತೆಗೆದುಕೊಂಡಿದ್ದಾರೆಂದು ಎಂದು ಗಮನಕ್ಕೆ ಬರುತ್ತದೆ – ಸಂಪಾದಕ
  • ರಾಷ್ಷ್ರಕ್ಕೆ ಕುತ್ತು ತರುವ ಚಟುವಟಿಕೆಗಳಲ್ಲಿ ತೊಡಗಿರುವ ರಾಜಕೀಯ ಪಕ್ಷದವರು ಎಂದಾದರೂ ಜನರ ಹಿತ ಸಾಧಿಸಬಹುದೇ ? ಆದ್ದರಿಂದಲೇ ಮಾಕಪ ಅಳಿವಿನಂಚಿನಲ್ಲಿ ಇದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕ

ಕೊಲಕಾತಾ (ಬಂಗಾಲ) : ಸ್ವಾತಂತ್ರ್ಯದ ೭೪ ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ಮುಖ್ಯ ಕಛೇರಿ ಮತ್ತು ವಿವಿಧ ಕಾರ್ಯಾಲಯಗಳಲ್ಲಿ ಬರುವ ೧೫ ಆಗಸ್ಟ್ ಗೆ ಅಂದರೆ ಸ್ವಾತಂತ್ರ್ಯೋತ್ಸವ ದಿನದಂದು ರಾಷ್ಟ್ರಧ್ವಜ ಹಾರಿಸಲಾಗುವುದು. ಪಕ್ಷದಿಂದ ಈ ರೀತಿಯ ನಿರ್ಣಯ ಹೊರಡಿಸಲಾಗಿದೆ. ಮಾಕಪ್ ನಾಯಕರು ಮತ್ತು ಸಂಸದ ಸುಜಾನ್ ಚಕ್ರವರ್ತಿ ಅವರು ಈ ವಿಷಯದ ಬಗ್ಗೆ ಪಕ್ಷದ ನೇತೃತ್ವದ ಕಡೆಗೆ ಪ್ರಸ್ತಾವನೆನ್ನು ಕಳುಹಿಸಿದ್ದರು. ಈ ಪ್ರಸ್ತಾವನೆಗೆ ಒಪ್ಪಿಗೆ ಕೊಡಲಾಗಿದೆ.

ಮುಂದಿನ ವರ್ಷ ೭೫ ನೇ ಸ್ವಾತಂತ್ರ್ಯ ದಿನದ ನಿಮಿತ್ತ ಪಕ್ಷದಿಂದ ವರ್ಷವಿಡಿ ವಿವಿಧ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುವುದು.