ಸ್ವಾಮಿ ಕೊರಗಜ್ಜ ದೇವರ ವಿಡಂಬನಾತ್ಮಕ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿರುವುದರಿಂದ ಭಕ್ತರಲ್ಲಿ ಆಕ್ರೋಶ !

ಸಾಮಾಜಿಕ ಮಾಧ್ಯಮಗಳಲ್ಲಿ ಪದೇ ಪದೇ ಆಗುವ ಹಿಂದೂ ದೇವತೆಗಳ ಅವಮಾನವನ್ನು ತಡೆಗಟ್ಟಲು ಕೇಂದ್ರ ಸರಕಾರ ಕಠಿಣ ಕಾನೂನುನನ್ನು ನಿರ್ಮಿಸಬೇಕು, ಎಂಬುವುದು ಹಿಂದೂಗಳ ಅಪೇಕ್ಷೆಯಾಗಿದೆ ! – ಸಂಪಾದಕ

ಮಂಗಳೂರು – ಸ್ವಾಮಿ ಕೊರಗಜ್ಜ ದೇವರನ್ನು ಭಗವಾನ ಶಿವನ ಅವತಾರವೆಂದು ತಿಳಿಯುತ್ತಾರೆ. ಕೆಲವು ಕಿಡಿಗೇಡಿಗಳು ಸ್ವಾಮಿ ಕೊರಗಜ್ಜ ದೇವರ ಛಾಯಾಚಿತ್ರವನ್ನು ಗಣಕಯಂತ್ರದಲ್ಲಿ ತಿರುಚಿ (ಎಡಿಟ್) ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದಾರೆ. ಆದ್ದರಿಂದ ಭಕ್ತರು ಆಕ್ರೋಶಗೊಂಡಿದ್ದಾರೆ. ಈ ಬಗ್ಗೆ ‘ಹಿಂದೂ ಜಾಗರಣ ವೇದಿಕೆ’ ಸಂಘಟನೆಯು ಪೊಲೀಸರಲ್ಲಿ ದೂರನ್ನು ದಾಖಲಿಸಿ ‘ಆರೋಪಿಯ ಮೇಲೆ ಕ್ರಮವನ್ನು ಕೈಗೊಳ್ಳಬೇಕು’ ಎಂದು ಒತ್ತಾಯಿಸಿದೆ.