೫ ಕ್ಕಿಂತಲೂ ಹೆಚ್ಚು ಮಕ್ಕಳಿರುವ ಕೇರಳದಲ್ಲಿನ ಕ್ರೈಸ್ತರಿಗೆ ಕ್ಯಾಥೋಲಿಕ್ ಚರ್ಚ್ ಆರ್ಥಿಕ ಸಹಾಯ ನೀಡಲಿದೆ !

ಕ್ರೈಸ್ತರ ಧಾರ್ಮಿಕ ಸಂಘಟನೆಯ ಧರ್ಮ ಬಂಧುತ್ವ ತಿಳಿಯಿರಿ !

ಸಾಂದರ್ಭಿಕ ಚಿತ್ರ

ತಿರುವನಂತಪುರಂ (ಕೇರಳ) – ಕೇರಳ ಕ್ಯಾಥೋಲಿಕ್ ಬಿಶಪ್ಸ್ ಕೌನ್ಸಿಲ್ (ಕೆ.ಸಿ.ಬಿ.ಸಿ.) ಈ ಸಂಘಟನೆಯು ಕೇರಳದಲ್ಲಿನ ಕ್ರೈಸ್ತರ ಕ್ಷೀಣಿಸುತ್ತಿರುವ ಜನನದರದ ಬಗ್ಗೆ ಚಿಂತೆ ವ್ಯಕ್ತಪಡಿಸಿದೆ; ಆದರೆ ಮತ್ತೊಂದೆಡೆಯಲ್ಲಿ ಕೇರಳ ಕ್ಯಾಥೋಲಿಕ್ ಚರ್ಚ್‌ನಿಂದ ಕಲ್ಯಾಣಕಾರಿ ಯೋಜನೆಯನ್ನು ಘೋಷಣೆ ಮಾಡಿದೆ. ಯಾವ ಕ್ರೈಸ್ತರ ಕುಟುಂಬದಲ್ಲಿ ೫ ಕ್ಕಿಂತ ಹೆಚ್ಚು ಮಕ್ಕಳಿದ್ದಾರೆ, ಅಂತಹವರಿಗೆ ಆರ್ಥಿಕ ಸಹಾಯ ನೀಡಲಾಗುವುದು, ಇದರ ಅಂತರ್ಗತ ೨೦೦೦ ನೇ ಇಸವಿಯ ನಂತರ ವಿವಾಹವಾಗಿರುವ ಮತ್ತು ೫ ಮಕ್ಕಳಿರುವವರಿಗೆ ತಿಂಗಳಿಗೆ ಒಂದುವರೆ ಸಾವಿರ ರೂಪಾಯಿ ನೀಡಲಿದೆ.

ಕೆ.ಸಿ.ಬಿ.ಸಿ.ಯು ಒಂದು ಸುತ್ತೋಲೆಯನ್ನು ಹೊರಡಿಸಿದೆ. ಅದರಲ್ಲಿ, ೧೯೫೦ ನೇ ಇಸವಿಯಲ್ಲಿ ಕೇರಳದಲ್ಲಿ ಕ್ರೈಸ್ತರ ಜನಸಂಖ್ಯೆ ಶೇ. ೨೪.೬ ರಷ್ಟು ಇತ್ತು; ಆದರೆ ಈಗ ಅದು ಶೇ. ೧೭.೨ ರಷ್ಟು ಆಗಿದೆ. ಕ್ರೈಸ್ತ ಧರ್ಮವು ೧.೮ ರಷ್ಟು ಜನನದರವುಳ್ಳ ಧರ್ಮವಾಗಿದೆ.