ಜೂಜಾಟವಾಗಿರುವ ‘ರಮಿ ಗಣೇಶ ಪ್ರೊ’ ಆಪ್ ಅನ್ನು ತೆಗೆದು ಹಾಕಿದ ಗೂಗಲ್ ಪ್ಲೇ ಸ್ಟೋರ್ !

ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂಗಳ ವಿರೋಧದ ಪರಿಣಾಮ !

ಹಿಂದೂಗಳು ಮತ್ತು ಅವರ ಸಂಘಟನೆಗಳು ಸಂಘಟಿತರಾಗಿ ದೇವತೆಗಳ ಅವಮಾನವನ್ನು ವಿರೋಧಿಸಿದರೆ, ಅವರಿಗೆ ಈಶ್ವರನ ಕೃಪೆಯಿಂದ ಜಯ ಸಿಗುತ್ತದೆ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ !

ಮೇಲಿನ ಚಿತ್ರ ಪ್ರಕಟಿಸುವುದರ ಹಿಂದಿನ ಉದ್ದೇಶ ಯಾರ ಭಾವನೆಗಳಿಗೆ ನೋವನುಂಟು ಮಾಡುವುದಾಗಿರದೆ ನಿಜವಾದ ಸ್ಥಿತಿ ತಿಳಿಸುವ ಉದ್ದೇಶವಾಗಿದೆ 

ಮುಂಬಯಿ : ಜೂಜಾಟವಾಗಿರುವ ‘ರಮಿ ಗಣೇಶ ಪ್ರೋ’ ಈ ‘ಆಪ್’ಅನ್ನು ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂಗಳು ವಿರೋಧಿಸಿದ ನಂತರ ‘ಗೂಗಲ್ ಪ್ಲೇ ಸ್ಟೋರ್’ ನಿಂದ ತೆಗೆದುಹಾಕಲಾಗಿದೆ. ಹಿಂದೂಗಳ ದೇವರಾದ ಶ್ರೀ ಗಣೇಶನ ಹೆಸರಿಟ್ಟಿದ್ದರಿಂದ ಈ ’ಆಪ್’ಗೆ ವಿರೋಧಿಸಲಾಗಿತ್ತು. ಈ ಬಗ್ಗೆ ಹಿಂದೂಗಳು ಹಿಂದೂ ಜನಜಾಗೃತಿ ಸಮಿತಿಗೆ ಮಾಹಿತಿ ನೀಡಿದಾಗ, ಸಮಿತಿಯು ಕಾನೂನು ಮಾರ್ಗದಲ್ಲಿ ಅದನ್ನು ವಿರೋಧಿಸಿತ್ತು.

ಅದೇರೀತಿ ಟ್ವೀಟ್ ಮಾಡಿ ಗೂಗಲ್‌ಗೆ ಈ ಆಪ್ ಅನ್ನು ತೆಗೆಯುವಂತೆ ಒತ್ತಾಯಿಸಿತ್ತು. ಹಿಂದುತ್ವನಿಷ್ಠರು ಈ ಆಪ್‌ನ ವಿರುದ್ಧ ಟ್ವಿಟರ್‌ನಲ್ಲಿ #BanRummyGaneshProApp ಹೆಸರಿನಲ್ಲಿ ಟ್ರೆಂಡ್ ಕೂಡಾ ಮಾಡಿದ್ದರು. ನಂತರ ಈ ಆಪ್ ಅನ್ನು ತೆಗೆದಿರುವುದು ಕಂಡುಬಂದಿದೆ.