ರಾತ್ರಿ ರೈಲಿನಲ್ಲಿ ಪ್ರಯಾಣಿಸುವಾಗ ಮೊಬೈಲ ಫೋನಿನಲ್ಲಿ ಜೋರಾಗಿ ಹಾಡು ಕೇಳುವುದು ಅಥವಾ ಮಾತನಾಡುವುದು ಅಪರಾಧ

ರೈಲ್ವೇಯ ಹೊಸ ನಿಯಮಗಳ ಪ್ರಕಾರ ರಾತ್ರಿ ಪ್ರಯಾಣಿಸುವಾಗ ಯಾವುದೇ ಪ್ರಯಾಣಿಕರು ಮೊಬೈಲ್ ಫೋನಿನಲ್ಲಿ ಜೋರಾಗಿ ಮಾತನಾಡುವಂತಿಲ್ಲ, ಜೋರಾಗಿ ಹಾಡು ಕೇಳುವಂತಿಲ್ಲ. ಇತರೆ ಪ್ರಯಾಣಿಕರಿಂದ ಅಂತಹ ದೂರು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಗೋಮುತ್ರ ಚಿಮುಕಿಸಿದರೆ ಪ್ರೇತ, ವಾಸ್ತುದೋಷ ನಿವಾರಣೆ! – ಉತ್ತರ ಪ್ರದೇಶ ಸಚಿವ ಧರಂಪಾಲ ಸಿಂಗ

ಹಸುಗಳಿಂದಾಗಿ ನಾವು ಹಾಲು, ಮೊಸರು, ತುಪ್ಪ, ಸೆಗಣಿ ಮತ್ತು ಗೋಮುತ್ರದಂತಹ ೫ ಪದಾರ್ಥಗಳನ್ನು ಪಡೆಯುತ್ತೇವೆ. ಸೆಗಣಿಯಲ್ಲಿ ಲಕ್ಷ್ಮಿ ಮತ್ತು ಗೋಮುತ್ರದಲ್ಲಿ ಗಂಗೆ ನೆಲೆಸಿದ್ದಾರೆ. ಗೋಮುತ್ರ ಸಿಂಪಡಣೆ ಮಾಡುವುದರಿಂದ ರಾಕ್ಷಸ ಅಥವಾ ವಾಸ್ತುದೋಷಗಳಂತಹ ಸಮಸ್ಯೆ ನಿವಾರಣೆಯಾಗುತ್ತದೆ

ದೆಹಲಿಯ ವಿಕಾಸಪುರಿಯ ಹಿಂದೂ ಸಂಘಟನೆಗಳಿಂದ ಮೆರವಣಿಗೆ

ದೆಹಲಿಯ ಜಹಾಂಗೀರಪುರಿಯಲ್ಲಿ ಹನುಮಂತ ಜಯಂತಿಯಂದು ನಡೆದ ಮೆರವಣಿಗೆಯ ಮೇಲೆ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಮತಾಂಧರಿಂದ ದಾಳಿ ನಡೆದಿತ್ತು. ಇದಾದ ನಂತರ ಏಪ್ರಿಲ ೧೭ ರಂದು ದೆಹಲಿಯ ವಿಕಾಸನಗರದಲ್ಲಿ ಹಿಂದೂ ಸಂಘಟನೆಗಳಿಂದ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.

ಪತ್ನಿ ಗರ್ಭಧರಿಸಲು ಕೈದಿಗೆ ೧೫ ದಿನಗಳ ಪೆರೋಲ್ ಮಂಜೂರು

ಜೋಧಪುರ ಉಚ್ಚ ನ್ಯಾಯಾಲಯವು ಋಗ್ವೇದದಂತಹ ಹಿಂದೂ ಧರ್ಮಗ್ರಂಥ ಸಹಿತ ಜ್ಯೂ, ಕ್ರೈಸ್ತ ಹಾಗೂ ಇಸ್ಲಾಂ ಪಂಥಗಳ ಸಿದ್ಧಾಂತಗಳ ಆಧಾರವನ್ನು ನೀಡುತ್ತಾ ಜೀವಾವಧಿ ಶೀಕ್ಷೆಯನ್ನು ಅನುಭವಿಸುತ್ತಿರುವ ೩೪ ವರ್ಷದ ಕೈದಿ ನಂದಲಾಲನನ್ನು ಆತನ ಪತ್ನಿ ರೇಖಾ ಗರ್ಭಿಣಿಯಾಗಬೇಕು ಎಂಬ ಕಾರಣಕ್ಕೆ ೧೫ ದಿನಗಳ ಕಾಲ ಪೆರೋಲ್ ಮಂಜೂರು ಮಾಡಿದೆ.

ಗುಜರಾತಿನಲ್ಲಿ ಶ್ರೀರಾಮ ನವಮಿ ಮೆರವಣಿಗೆ ಮೇಲೆ ದಾಳಿಗೆ ಸಂಚು ವಿದೇಶದಲ್ಲಿ ನಡೆದಿರುವುದು ಬಹಿರಂಗ !

ಮೌಲ್ವಿ ಮುಸ್ತಕಿಂ, ಆತನ ಇಬ್ಬರು ಸಹಚರರಾದ ಮತೀನ್ ಮತ್ತು ಮೊಹ್ಸಿನ್ ಜೊತೆಗೆ ರಜಾಕ್ ಅಯೂಬ್, ಹುಸೇನ್ ದಿವಾನ್ ಸಂಚಿನಲ್ಲಿ ಭಾಗಿಯಾಗಿದ್ದಾರೆ !

ಮೊರಬಿ (ಗುಜರಾತ) ನಲ್ಲಿ ೧೦೮ ಅಡಿ ಎತ್ತರದ ಶ್ರೀ ಹನುಮಾನ ಮುರ್ತಿಯನ್ನು ಅನಾವರಣಗೊಳಿಸಿದ ಪ್ರಧಾನಿ ಮೋದಿ

ಇಲ್ಲಿ ಹನುಮಾನ ಜಯಂತಿಯ ದಿನದಂದು ಶ್ರೀ ಹನುಮಾನನ ೧೦೮ ಅಡಿ ಎತ್ತರದ ಮೂರ್ತಿಯನ್ನು ಪ್ರಧಾನಿ ಮೋದಿಯವರ ಹಸ್ತದಿಂದ ಆನ್‌ಲೈನ್ ಮೂಲಕ ಅನಾವರಣ ಮಾಡಲಾಯಿತು. ಪ್ರಧಾನಿ ಕಾರ್ಯಾಲಯ ನೀಡಿರುವ ಮಾಹಿತಿ ಪ್ರಕಾರ ಹನುಮಾನ ದೇವರಿಗೆ ಸಂಬಂಧಿಸಿದ ಚಾರ್ಧಾಮ ಯೋಜನೆಯಡಿ ದೇಶದ ನಾಲ್ಕೂ ದಿಕ್ಕುಗಳಲ್ಲಿ ಹನುಮಾನನ ಮೂರ್ತಿಗಳನ್ನು ಸ್ಥಾಪಿಸಲಾಗುವುದು.

೪ ರಾಜ್ಯಗಳ ೪ ವಿಧಾನಸಭೆ ಮತ್ತು ೧ ಲೋಕಸಭೆ ಉಪಚುನಾವಣೆಯಲ್ಲಿ ಭಾಜಪ ವಿರೋಧಿಗಳಿಗೆ ಯಶಸ್ಸು

ಬಿಹಾರ, ಬಂಗಾಳ, ಛತ್ತಿಸಗಢ ಮತ್ತು ಮಹಾರಾಷ್ಟ್ರದಲ್ಲಿ ನಡೆದ ೪ ವಿಧಾನಸಭಾ ಕ್ಷೇತ್ರಗಳು ಮತ್ತು ೧ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭಾಜಪಾವು ಯಾವುದೇ ಸ್ಥಾನವನ್ನು ಗೆದ್ದಿಲ್ಲ. ಮಹಾರಾಷ್ಟ್ರದ ಉತ್ತರ ಕೋಲ್ಲಾಪುರದಲ್ಲಿ ಕಾಂಗ್ರೆಸ ಅಭ್ಯರ್ಥಿ ಜಯಶ್ರೀ ಜಾಧವ, ಬಿಹಾರದ ಬೋಚಹಾ ಕ್ಷೇತ್ರದಿಂದ ರಾಷ್ಟ್ರೀಯ ಜನತಾದಳದ ಅಭ್ಯರ್ಥಿ ಮತ್ತು ಛತ್ತೀಸಗಢದಿಂದ ಕಾಂಗ್ರೆಸ ಆಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಭೋಪಾಲ್‌ನಲ್ಲಿ ಮುಸ್ಲಿಂ ಬಹುಸಂಖ್ಯಾತ ಪ್ರದೇಶದಿಂದ ಹೋಗುವ ಹನುಮ ಜಯಂತಿಯ ಮೆರವಣಿಗೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ !

ಇಲ್ಲಿಯ ಖೇಡಾಪತಿ ಹನುಮಾನ್ ಮಂದಿರದಿಂದ ಹಳೆ ಭೋಪಾಲ್‌ವರೆಗಿನ ರಸ್ತೆಯಲ್ಲಿ ಹನುಮ ಜಯಂತಿಯಂದು ಮೆರವಣಿಗೆ ನಡೆಸಬೇಕೆಂಬ ಬೇಡಿಕೆಯನ್ನು ಭದ್ರತಾ ಕಾರಣಗಳಿಗಾಗಿ ಪೊಲೀಸರು ತಿರಸ್ಕರಿಸಿದ್ದಾರೆ.

ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಭಾಜಪ ಬೆಂಬಲಿಗ ಪಕ್ಷೇತರ ಸರಪಂಚನ ಹತ್ಯೆ

ಬಾರಾಮುಲ್ಲಾದ ಮಂಜುರ ಅಹಮದ ಬಾಂಗರು, ಭಾಜಪ ಬೆಂಬಲಿಗ ಪಕ್ಷೇತರ ಸರಪಂಚನನ್ನು ಏಪ್ರಿಲ ೧೫ರಂದು ಸಂಜೆ ಜಿಹಾದಿ ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ. ಬಂಗಾರು ಮನೆಯಿಂದ ಹೊರಬರುವುದನ್ನೇ ಕಾಯುತ್ತಿದ್ದ ಉಗ್ರರು ಅವರು ಹೊರ ಬರುತ್ತಿದ್ದಂತೆ ಗುಂಡಿನ ದಾಳಿ ನಡೆಸಿದ್ದಾರೆ.

ಫತೇಹಪುರ (ಉತ್ತರ ಪ್ರದೇಶ)ದ ಚರ್ಚ್‌ನಲ್ಲಿ ಪ್ರಾರ್ಥನಾ ಸಭೆಯ ಹೆಸರಿನಲ್ಲಿ ಹಿಂದೂಗಳನ್ನು ಮತಾಂತರಿಸುವ ಷಡ್ಯಂತ್ರವನ್ನು ಹಿಂದೂಪರ ಸಂಘಟನೆಗಳು ವಿಫಲಗೊಳಿಸಿದವು !

ಇಲ್ಲಿನ ಹರಿಹರಗಂಜ್ ಮೊಹಲ್ಲಾದ ಚುನಾವಾಲಿ ಗಲ್ಲಿಯಲ್ಲಿರುವ ಚರ್ಚ್‌ನಲ್ಲಿ ಪ್ರಾರ್ಥನೆಯ ಹೆಸರಿನಲ್ಲಿ ಬಡ ಹಿಂದೂಗಳನ್ನು ಆಸೆ ತೋರಿಸಿ ಅವರನ್ನು ಮತಾಂತರಿಸಲು ಪ್ರಯತ್ನಿಸುತ್ತಿದ್ದ ಮಾಹಿತಿ ಸಿಕ್ಕಿದನಂತರ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತಲುಪಿದರು.