೪ ರಾಜ್ಯಗಳ ೪ ವಿಧಾನಸಭೆ ಮತ್ತು ೧ ಲೋಕಸಭೆ ಉಪಚುನಾವಣೆಯಲ್ಲಿ ಭಾಜಪ ವಿರೋಧಿಗಳಿಗೆ ಯಶಸ್ಸು

ನವ ದೆಹಲಿ – ಬಿಹಾರ, ಬಂಗಾಳ, ಛತ್ತಿಸಗಢ ಮತ್ತು ಮಹಾರಾಷ್ಟ್ರದಲ್ಲಿ ನಡೆದ ೪ ವಿಧಾನಸಭಾ ಕ್ಷೇತ್ರಗಳು ಮತ್ತು ೧ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭಾಜಪಾವು ಯಾವುದೇ ಸ್ಥಾನವನ್ನು ಗೆದ್ದಿಲ್ಲ.

ಮಹಾರಾಷ್ಟ್ರದ ಉತ್ತರ ಕೋಲ್ಲಾಪುರದಲ್ಲಿ ಕಾಂಗ್ರೆಸ ಅಭ್ಯರ್ಥಿ ಜಯಶ್ರೀ ಜಾಧವ, ಬಿಹಾರದ ಬೋಚಹಾ ಕ್ಷೇತ್ರದಿಂದ ರಾಷ್ಟ್ರೀಯ ಜನತಾದಳದ ಅಭ್ಯರ್ಥಿ ಮತ್ತು ಛತ್ತೀಸಗಢದಿಂದ ಕಾಂಗ್ರೆಸ ಆಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಬಂಗಾಳದ ಅಸನ್ಸೋಲ ಲೋಕಸಭಾ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಮತ್ತು ಬಾಲಿಗಂಜ ವಿಧಾನಸಭಾ ಕ್ಷೇತ್ರದಿಂದ ತೃಣಮೂಲದ ಬಾಬುಲ ಸುಪ್ರಿಯೋ ಗೆಲುವು ಸಾಧಿಸಿದ್ದಾರೆ.