ಪತ್ನಿ ಗರ್ಭಧರಿಸಲು ಕೈದಿಗೆ ೧೫ ದಿನಗಳ ಪೆರೋಲ್ ಮಂಜೂರು

ಜೋಧಪುರ ಉಚ್ಚ ನ್ಯಾಯಾಲಯದ ತೀರ್ಪು

ಸಾಂಧರ್ಭಿಕ ಚಿತ್ರ

ಜೋಧಪುರ (ರಾಜಸ್ಥಾನ) – ಜೋಧಪುರ ಉಚ್ಚ ನ್ಯಾಯಾಲಯವು ಋಗ್ವೇದದಂತಹ ಹಿಂದೂ ಧರ್ಮಗ್ರಂಥ ಸಹಿತ ಜ್ಯೂ, ಕ್ರೈಸ್ತ ಹಾಗೂ ಇಸ್ಲಾಂ ಪಂಥಗಳ ಸಿದ್ಧಾಂತಗಳ ಆಧಾರವನ್ನು ನೀಡುತ್ತಾ ಜೀವಾವಧಿ ಶೀಕ್ಷೆಯನ್ನು ಅನುಭವಿಸುತ್ತಿರುವ ೩೪ ವರ್ಷದ ಕೈದಿ ನಂದಲಾಲನನ್ನು ಆತನ ಪತ್ನಿ ರೇಖಾ ಗರ್ಭಿಣಿಯಾಗಬೇಕು ಎಂಬ ಕಾರಣಕ್ಕೆ ೧೫ ದಿನಗಳ ಕಾಲ ಪೆರೋಲ್ ಮಂಜೂರು ಮಾಡಿದೆ.

ನ್ಯಾಯಾಲಯವು, ಜೈಲು ಶಿಕ್ಷೆಯು ಕೈದಿಯ ಪತ್ನಿಯ ಲೈಂಗಿಕ ಮತ್ತು ಭಾವನಾತ್ಮಕ ಅಗತ್ಯಗಳ ಮೇಲೆ ಪರಿಣಾಮ ಬೀರಿದೆ. ೧೬ ಸಂಸ್ಕಾರಗಳ ಪೈಕಿ ಮಗುವನ್ನು ಹಡೆಯುವುದು ಮಹಿಳೆಯ ಮೊದಲ ಹಕ್ಕಾಗಿದೆ. ವಂಶವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಸಂತಾನ ಇರುವುದು, ಧಾರ್ಮಿಕ ತತ್ವಶಾಸ್ತ್ರ, ಭಾರತೀಯ ಸಂಸ್ಕೃತಿ ಮತ್ತು ನ್ಯಾಯಾಲಯದ ವಿವಿಧ ನಿರ್ಧಾರಗಳ ಮೂಲಕ ಇದನ್ನು ಹೇಳಲಾಗಿದೆ. ಸಂತಾನದ ಹಕ್ಕನ್ನು ವೈವಾಹಿಕ ಸಹವಾಸದ ಮೂಲಕ ಚಲಾಯಿಸಬಹುದು. ಇದು ಅಪರಾಧಿಯನ್ನು ಸಾಮಾನ್ಯ ವ್ಯಕ್ತಿಯನ್ನಾಗಿ ಮಾಡುವ ಪರಿಣಾಮವನ್ನು ಹೊಂದಿದೆ ಮತ್ತು ಬಂಧಿತನ ನಡವಳಿಕೆಯನ್ನು ಬದಲಾಯಿಸಲು ಸಹಾಯ ಮಾಡುತ್ತದೆ. ಅಪರಾಧಿ ಜೈಲಿನಿಂದ ಬಿಡುಗಡೆಗೊಂಡ ನಂತರ, ಅವನಿಗೆ ಶಾಂತಿಯುತವಾಗಿ ಸಮಾಜದ ಮುಖ್ಯವಾಹಿನಿಗೆ ಮರುಪ್ರವೇಶಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳುವುದು ಪೆರೋಲ್‌ನ ಉದ್ದೇಶವಾಗಿದೆ. ಯಾವುದೇ ಅಪರಾಧ ಮಾಡದಿದ್ದರೂ, ಯಾವುದೇ ಶಿಕ್ಷೆಗೆ ಗುರಿಯಾಗದಿದ್ದರೂ ಕೈದಿಯ ಹೆಂಡತಿ ತನ್ನ ಸಂತಾನದ ಹಕ್ಕಿನಿಂದ ವಂಚಿತಳಾಗಿದ್ದಾಳೆ. ಹೀಗಾಗಿ, ‘ಶಿಕ್ಷೆಗೊಳಗಾದ ಕೈದಿ ತನ್ನ ಹೆಂಡತಿಯೊಂದಿಗೆ ವೈವಾಹಿಕ ಸಂಬಂಧಗಳನ್ನು ಹೊಂದುವುದನ್ನು’ ನಿರಾಕರಿಸುವುದು, ವಿಶೇಷವಾಗಿ ಸಂತಾನವೃದ್ಧಿ ಉದ್ದೇಶಕ್ಕಾಗಿ, ಅವನ ಹೆಂಡತಿಯ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೇಳಿದೆ.