ರಾತ್ರಿ ರೈಲಿನಲ್ಲಿ ಪ್ರಯಾಣಿಸುವಾಗ ಮೊಬೈಲ ಫೋನಿನಲ್ಲಿ ಜೋರಾಗಿ ಹಾಡು ಕೇಳುವುದು ಅಥವಾ ಮಾತನಾಡುವುದು ಅಪರಾಧ

ಸಾಂಧರ್ಭಿಕ ಚಿತ್ರ

ಹೊಸ ದೆಹಲಿ – ರೈಲ್ವೇಯ ಹೊಸ ನಿಯಮಗಳ ಪ್ರಕಾರ ರಾತ್ರಿ ಪ್ರಯಾಣಿಸುವಾಗ ಯಾವುದೇ ಪ್ರಯಾಣಿಕರು ಮೊಬೈಲ್ ಫೋನಿನಲ್ಲಿ ಜೋರಾಗಿ ಮಾತನಾಡುವಂತಿಲ್ಲ, ಜೋರಾಗಿ ಹಾಡು ಕೇಳುವಂತಿಲ್ಲ. ಇತರೆ ಪ್ರಯಾಣಿಕರಿಂದ ಅಂತಹ ದೂರು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಗಲಾಟೆ, ಗಟ್ಟಿಯಾಗಿ ಮಾತನಾಡುವಂತಹ ದೂರು ಬಂದರೆ ರೈಲ್ವೆ ನೌಕರರು ಘಟನಾಸ್ಥಳಕ್ಕೆ ಹೋಗಿ ಸಮಸ್ಯೆ ಬಗೆಹರಿಸಬೇಕಾಗುತ್ತದೆ. ಈ ಸಂಬಂಧ ರೈಲ್ವೆ ಮಂಡಳಿಯು ಎಲ್ಲ ಇಲಾಖೆಗಳ ಪ್ರಧಾನ ವ್ಯವಸ್ಥಾಪಕರಿಗೆ ಆದೇಶ ಹೊರಡಿಸಿದ್ದು ನಿಯಮಗಳನ್ನು ಜಾರಿಗೆ ತರುವಂತೆ ಸೂಚಿಸಿದೆ.