೧೬ ಷರತ್ತುಗಳನ್ನು ವಿಧಿಸಿ ಇತರೆಡೆ ಮೆರವಣಿಗೆಗೆ ಅನುಮತಿ !
|
ಭೋಪಾಲ್ (ಮಧ್ಯಪ್ರದೇಶ) – ಇಲ್ಲಿಯ ಖೇಡಾಪತಿ ಹನುಮಾನ್ ಮಂದಿರದಿಂದ ಹಳೆ ಭೋಪಾಲ್‌ವರೆಗಿನ ರಸ್ತೆಯಲ್ಲಿ ಹನುಮ ಜಯಂತಿಯಂದು ಮೆರವಣಿಗೆ ನಡೆಸಬೇಕೆಂಬ ಬೇಡಿಕೆಯನ್ನು ಭದ್ರತಾ ಕಾರಣಗಳಿಗಾಗಿ ಪೊಲೀಸರು ತಿರಸ್ಕರಿಸಿದ್ದಾರೆ. ಪೊಲೀಸರು, ಈ ಮೆರವಣಿಗೆಯನ್ನು ನಗರದ ಇತರ ಭಾಗಗಳಲ್ಲಿಯೂ ಸಹ ನಡೆಸಬಹುದು; ಆದರೆ ಈ ಪ್ರದೇಶದಲ್ಲಿ ಅದಕ್ಕೆ ಅವಕಾಶ ನೀಡುವುದಿಲ್ಲ.’ ಎಂದು ಹೇಳಿದಾಗ ಬೇರೆ ಮಾರ್ಗದಿಂದ ಈ ಮೆರವಣಿಗೆಯನ್ನು ನಡೆಸುವುದು ನಿರ್ಧರಿಸಲಾಯಿತು; ಆದರೆ ಆ ಸಮಯದಲ್ಲೂ ಆಡಳಿತವು ೧೬ ಷರತ್ತುಗಳೊಂದಿಗೆ ಅವಕಾಶ ನೀಡಿತ್ತು.
Madhya Pradesh: After Muslim clerics object, Police cancel permission for Hanuman Jayanti procession in old city of Bhopal https://t.co/94PTC24HgQ
— OpIndia.com (@OpIndia_com) April 16, 2022
‘ಈ ಪ್ರದೇಶದಿಂದ ಧಾರ್ಮಿಕ ಮೆರವಣಿಗೆಗಳನ್ನು ನಡೆಸುವುದು ಅಪಾಯಕಾರಿಯಾಗಬಹುದು’, ಎಂದು ಹೇಳಿದ್ದರಿಂದ ಆಡಳಿತವರ್ಗದಿಂದ ಈ ನಿರ್ಧಾರ ಕೂಗೊಳ್ಳಲಾಯಿತು ಎಂದು ಹೇಳಲಾಗುತ್ತಿದೆ. ರಾಜ್ಯದ ಖರಗೋಣೆಯಲ್ಲಿ ಶ್ರೀರಾಮನವಮಿಯಂದು ನಡೆದ ಹಿಂಸಾಚಾರದ ನಂತರ, ಆಡಳಿತವು ಹನುಮ ಜಯಂತಿಯಂದು ಮೆರವಣಿಗೆ ನಡೆಸುವಾಗ ೧೬ ಷರತ್ತುಗಳನ್ನು ಹಾಕಿತು. ಇದರಲ್ಲಿ ಮೆರವಣಿಗೆಗಳಲ್ಲಿ ಯಾವುದೇ ಆಕ್ಷೇಪಾರ್ಹ ಘೋಷಣೆಗಳನ್ನು ಮಾಡಬಾರದು, ಯಾವುದೇ ಆಕ್ಷೇಪಾರ್ಹ ಪೋಸ್ಟರ್‌ಗಳನ್ನು ಹಾಕಬಾರದು, ‘ಡಿಜೆ’ (ದೊಡ್ಡ ಸಂಗೀತ ವಾದ್ಯದಲ್ಲಿ) ಯಾವ ಹಾಡುಗಳನ್ನು ನುಡಿಸಲಾಗುತ್ತದೆ ?, ಅದರ ಪಟ್ಟಿಯನ್ನು ನೀಡುವುದು, ತ್ರಿಶೂಲ ಮತ್ತು ಗಧೆಯನ್ನು ಹೊರುತುಪಡಿಸಿ ಇತರ ಶಸ್ತ್ರಗಳನ್ನು ಬಳಸಬಾರದು, ಬಿಡಿ, ಸಿಗರೇಟ ಇತ್ಯಾದಿ ಮಾದಕ ವಸ್ತುಗಳನ್ನು ಬಳಸಬಾರದು; ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಆಯೋಜಕರೇ ಹೊಣೆ ಎಂದು ಹೇಳಲಾಗಿದೆ.