ಫತೇಹಪುರ (ಉತ್ತರ ಪ್ರದೇಶ)ದ ಚರ್ಚ್‌ನಲ್ಲಿ ಪ್ರಾರ್ಥನಾ ಸಭೆಯ ಹೆಸರಿನಲ್ಲಿ ಹಿಂದೂಗಳನ್ನು ಮತಾಂತರಿಸುವ ಷಡ್ಯಂತ್ರವನ್ನು ಹಿಂದೂಪರ ಸಂಘಟನೆಗಳು ವಿಫಲಗೊಳಿಸಿದವು !

ಸರಕಾರ ಇಂತಹ ಚರ್ಚ್‌ಗೆ ಬೀಗ ಜಡಿದು ವಶಪಡಿಸಿಕೊಂಡು ಸಂಬಂಧಪಟ್ಟವರಿಗೆ ಕಠಿಣ ಶಿಕ್ಷೆಯಾಗಲು ಪ್ರಯತ್ನಿಸಬೇಕು !

ಹಿಂದೂಗಳಿಗೆ ಜಾತ್ಯತೀತತೆದ ಉಪದೇಶ ನೀಡಿರುವುದರಿಂದ, ಅವರು ಇತರ ಧರ್ಮಗಳ ಧಾರ್ಮಿಕ ಸ್ಥಳಗಳಿಗೆ ಹೋಗುತ್ತಾರೆ; ಆದರೆ ಅನ್ಯಧರ್ಮೀಯರು ಎಂದಿಗೂ ಹಿಂದೂಗಳ ಧಾರ್ಮಿಕ ಸ್ಥಳಗಳಿಗೆ ಹೋಗುವುದಿಲ್ಲ ಎಂಬುದು ಹಿಂದೂಗಳಿಗೆ ಯಾವಾಗ ತಿಳಿಯುತ್ತದೆ ?

ಫತೇಹಪುರ್ (ಉತ್ತರ ಪ್ರದೇಶ) – ಇಲ್ಲಿನ ಹರಿಹರಗಂಜ್ ಮೊಹಲ್ಲಾದ ಚುನಾವಾಲಿ ಗಲ್ಲಿಯಲ್ಲಿರುವ ಚರ್ಚ್‌ನಲ್ಲಿ ಪ್ರಾರ್ಥನೆಯ ಹೆಸರಿನಲ್ಲಿ ಬಡ ಹಿಂದೂಗಳನ್ನು ಆಸೆ ತೋರಿಸಿ ಅವರನ್ನು ಮತಾಂತರಿಸಲು ಪ್ರಯತ್ನಿಸುತ್ತಿದ್ದ ಮಾಹಿತಿ ಸಿಕ್ಕಿದನಂತರ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತಲುಪಿದರು. ಅವರು ಚರ್ಚ್ ಪ್ರವೇಶದ್ವಾರಕ್ಕೆ ಬೀಗ ಜಡಿದರು.

ಚರ್ಚ್‌ನ ಪಾದ್ರಿಗೆ ಪ್ರಾರ್ಥನಾ ಸಭೆಯ ಬಗ್ಗೆ ಕೇಳಿದಾಗ, ಸಭೆಯಲ್ಲಿ ಹಾಜರಿದ್ದ ೭೦ ಜನರಲ್ಲಿ ೫೦ ಜನರು ಹಿಂದೂಗಳು ಎಂದು ಒಪ್ಪಿಕೊಂಡರು. ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಚರ್ಚ್‌ನಲ್ಲಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಹೊರಗೆ ಹಾಕಿ ಅವರ ಮಾಹಿತಿಯನ್ನು ಪಡೆದರು ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೨೬ ಜನರನ್ನು ಬಂಧಿಸಲಾಗಿದೆ.