ಬಿಹಾರದಲ್ಲಿ ಮದ್ಯ ನಿಷೇಧವಿರುವಾಗ ಮದ್ಯವು ಸಹಜವಾಗಿ ಲಭ್ಯವಾಗುತ್ತಿದೆ ! – ಕೇಂದ್ರ ಸಚಿವ ಪಶುಪತಿ ಪಾರಸರವರ ದಾವೆ

ರಾಜ್ಯದೊಳಗೆ ಮದ್ಯದ ಕಳ್ಳಸಾಗಾಣಿಕೆಯಾಗುತ್ತದೆ ಹಾಗೂ ಅದರಿಂದ ಮದ್ಯದ ದೊಡ್ಡ ದಾಸ್ತಾನನ್ನು ನಿಯತವಾಗಿ ಜಪ್ತಿ ಮಾಡಲಾಗುತ್ತದೆ. ರಾಜ್ಯದಲ್ಲಿ ಮದ್ಯ ಮಾರಾಟವು ರಾಜಾರೋಷವಾಗಿ ನಡೆಯುತ್ತಿದೆ ಮತ್ತು ಈ ಸತ್ಯವನ್ನು ಯಾರೂ ಕೂಡ ನಿರಾಕರಿಸಲು ಸಾಧ್ಯವಿಲ್ಲ

ನಗರಗಳಲ್ಲಿ ಪ್ರತಿ ಕುಟುಂಬಕ್ಕೆ ಒಂದು ಹಸು ಅಥವಾ ಎಮ್ಮೆಯನ್ನು ಮಾತ್ರ ಸಾಕಲು ಅವಕಾಶ

ರಾಜಸ್ಥಾನದ ಕಾಂಗ್ರೆಸ್ ಸರಕಾರವು ಪಶುಸಂಗೋಪನೆಗಾಗಿ ಹೊಸ ಕಾನೂನನ್ನು ಜಾರಿಗೆ ತಂದಿದೆ. ಅದರಂತೆ ನಗರ ಪ್ರದೇಶಗಳಲ್ಲಿ ಒಂದು ಕುಟುಂಬಕ್ಕೆ ಕೇವಲ ಒಂದು ಹಸು ಅಥವಾ ಎಮ್ಮೆ ಸಾಕಲು ಅವಕಾಶವಿದೆ. ಅಲ್ಲದೆ ಇದಕ್ಕಾಗಿ ಸರಕಾರಕ್ಕೆ ವಾರ್ಷಿಕ ೧೦೦೦ ರೂಪಾಯಿ ಶುಲ್ಕ ಪಾವತಿಸಿ ವಾರ್ಷಿಕ ಪರವಾನಗಿ ಪಡೆಯಬೇಕು.

ಚಾರಧಾಮ ಯಾತ್ರೆಯಲ್ಲಿ ಸಹಭಾಗಿಯಾಗುವ ಪ್ರತಿಯೊಬ್ಬರ ತಪಾಸಣೆಯಾಗಲಿದೆ !

ರಾಜ್ಯದ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮಿಯವರು ಚಾರಧಾಮದ ಯಾತ್ರೆಯನ್ನು ಕೈಗೊಳ್ಳುವ ಪ್ರತಿಯೊಬ್ಬ ಯಾತ್ರಿಕರ ತಪಾಸಣೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ‘ಈ ಯಾತ್ರೆಗಾಗಿ ಬರುವ ಪ್ರತಿಯೊಬ್ಬರ ಮೇಲೆ ತೀವೃ ನಿಗಾ ಇಡಲಾಗುವುದು’ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿಯವರ ಪ್ರಶ್ನೆಗಳು

ಯಾವುದೇ ಕಾಲದಲ್ಲಿ ಬದಲಾವಣೆ ಒಮ್ಮುಖವಾಗಿರಲು ಸಾಧ್ಯವಿಲ್ಲ. ನಮ್ಮ ಗುರುಗಳು ಮುಸ್ಲಿಮರನ್ನು ಮಠಕ್ಕೆ ಕರೆತಂದು ಸ್ವಾಗತಿಸಿದರು; ಆದರೆ ಯಾವುದೇ ಮಸೀದಿಯಲ್ಲಿ ಮಠಾಧೀಶರನ್ನು ಶ್ರೀ ಸತ್ಯನಾರಾಯಣ ಪೂಜೆ ಅಥವಾ ಹಿಂದೂ ಹಬ್ಬ ಆಚರಿಸಲು ಅಹ್ವಾನಿಸಿದ ಉದಾಹರಣೆ ಇಲ್ಲ.

ಬಂಗಾಳ : ಮರದಲ್ಲಿ ನೇತಾಡುವ ಸ್ಥಿತಿಯಲ್ಲಿ ಕಂಡುಬಂತು ಬಿಜೆಪಿ ಕಾರ್ಯಕರ್ತನ ಮೃತದೇಹ!

ಇಲ್ಲಿ ಬಿಜೆಪಿಯ ಕಾರ್ಯಕರ್ತನೊಬ್ಬನ ಮೃತದೇಹ ಮರದಲ್ಲಿ ನೇತು ಹಾಕಿದ ಸ್ಥಿತಿಯಲ್ಲಿ ಕಂಡುಬಂದಿದೆ. ಈ ಕಾರ್ಯಕರ್ತನ ಹತ್ಯೆ ಮಾಡಲಾಗಿದ್ದು ಇದರ ಹಿಂದೆ ತೃಣಮೂಲ ಕಾಂಗ್ರೆಸನವರ ಕೈವಾಡವಿದೆ ಎಂದು ಆರೋಪ ಮಾಡಲಾಗಿದೆ.

ವರ್ದ್ಯಂತ್ಯೂತ್ಸವದ ನಿಮಿತ್ತ ಬಂದಂತಹ ಗೌರವಾನ್ವಿತರು ‘ಸನಾತನ ಪ್ರಭಾತ’ ಮತ್ತು ‘ಸನಾತನ ಆಶ್ರಮ’ದ ಕುರಿತು ವ್ಯಕ್ತಪಡಿಸಿದ ಭಾವುಕ ವಿಚಾರ !

ನಾಗರಿಕರು ವದಂತಿಗಳಿಗೆ ಕಿವಿಗೊಡದೆ ಸನಾತನ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮದ ಕಾರ್ಯವನ್ನು ಅರಿತುಕೊಳ್ಳಬೇಕು ! – ಶ್ರೀ ಗುರುದಾಸ ಪ್ರಭು, ಪತ್ರಕರ್ತರು, ಫೋಂಡಾ

ಯಾರಿಗೆ ‘ದ ಕಶ್ಮೀರ ಫೈಲ್ಸ’ ಭೂತಕಾಲವೆಂದು ಅನಿಸುತ್ತದೆಯೋ, ಅವರು ದೆಹಲಿಯಲ್ಲಾದ ಗಲಭೆಯನ್ನು ನೋಡಲಿ !

ಹನುಮಾನ ಜಯಂತಿಯ ಮೆರವಣಿಗೆಯ ಮೇಲೆ ಮಸೀದಿಯಿಂದ ಕಲ್ಲುತೂರಾಟ ನಡೆಸಲಾಗಿತ್ತು ಹಾಗೂ ಮತಾಂಧರು ಬಂದೂಕು ಮತ್ತು ಖಡ್ಗ ಹಿಡಿದುಕೊಂಡು ಹಿಂದೂಗಳ ಮೇಲೆ ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿದ್ದರು.

ಪರಾತ್ಪರ ಗುರು ಡಾ. ಆಠವಲೆಯವರ ‘ತೇಜಸ್ವೀ ವಿಚಾರ’ವನ್ನು ‘ಸನಾತನ ಪ್ರಭಾತ’ದಲ್ಲಿ ಓದಿ ನನಗೆ ‘ದಿನನಿತ್ಯದ ಜೀವನದಲ್ಲಿ ಹೇಗೆ ವರ್ತಿಸಬೇಕು’ ಎಂಬುವುದರ ಮಾರ್ಗದರ್ಶನ ಸಿಗುತ್ತದೆ ! – ಸೌ. ಸರಸ್ವತಿ ಶಂಖವಾಳಕರ, (ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ ಪರ್ರೀಕರ ಇವರ ಸಹೋದರಿ)

‘ದೈನಿಕ ‘ಸನಾತನ ಪ್ರಭಾತ’ ಇದು ನನಗೆ ಎಲ್ಲಕ್ಕಿಂತ ನೆಚ್ಚಿನ ದೈನಿಕವಾಗಿದೆ ಮತ್ತು ನಾನು ಪ್ರತಿದಿನ ಅದನ್ನು ಓದುತ್ತೇನೆ. ದೈನಿಕದ ಮೊದಲನೇ ಪುಟದಲ್ಲಿನ ಗುರುವರ್ಯರ (ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ) ‘ತೇಜಸ್ವೀ ವಿಚಾರ’ ಈ ಮಾಲಿಕೆಯನ್ನು ನಾನು ಮೊದಲು ಓದುತ್ತೇನೆ.

ಆಜಾದ ಮೈದಾನ ಗಲಭೆ ಕಾರಣವಾದ ರಝಾ ಅಕಾಡೆಮಿಯ ‘ಇಫ್ತಾರ ಕೂಟ’ ದಲ್ಲಿ ಮುಂಬಯಿ ಪೊಲೀಸ ಕಮಿಶನರ ಸಂಜಯ ಪಾಂಡೆ ಉಪಸ್ಥಿತಿ!

ರಝಾ ಅಕಾಡೆಮಿ ನಿರಂತರವಾಗಿ ದೇಶವಿರೋಧಿ ನಿಲುವು ತಳೆದಿದೆ. ಒಂದುಕಡೆ, ರಾಜ್ಯ ಗೃಹ ಸಚಿವ ದಿಲೀಪ ವಲ್ಸೆ ಪಾಟೀಲ ಅವರು ಶಾಸಕಾಂಗದಲ್ಲಿ ರಜಾ ಅಕಾಡೆಮಿಯನ್ನು ನಿಷೇಧಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಹೇಳುತ್ತಾರೆ; ಆದರೆ ಮತ್ತೊಂದೆಡೆ ರಝಾ ಅಕಡೆಮಿಯ ‘ಇಫ್ತಾರ ಕೂಟ’ ದಲ್ಲಿ ಅವರ ಅಧಿಕಾರಿಗಳು ಹಾಜರಾಗಿರುತ್ತಾರೆ.