ಮೊರಬಿ (ಗುಜರಾತ) ನಲ್ಲಿ ೧೦೮ ಅಡಿ ಎತ್ತರದ ಶ್ರೀ ಹನುಮಾನ ಮುರ್ತಿಯನ್ನು ಅನಾವರಣಗೊಳಿಸಿದ ಪ್ರಧಾನಿ ಮೋದಿ

ದೇಶದ ನಾಲ್ಕೂ ದಿಕ್ಕುಗಳಲ್ಲಿ ಹನುಮಾನನ ಮೂರ್ತಿಗಳನ್ನು ಸ್ಥಾಪಿಸಲಾಗುವುದು !

ಮೊರಬಿ (ಗುಜರಾತ) – ಇಲ್ಲಿ ಹನುಮಾನ ಜಯಂತಿಯ ದಿನದಂದು ಶ್ರೀ ಹನುಮಾನನ ೧೦೮ ಅಡಿ ಎತ್ತರದ ಮೂರ್ತಿಯನ್ನು ಪ್ರಧಾನಿ ಮೋದಿಯವರ ಹಸ್ತದಿಂದ ಆನ್‌ಲೈನ್ ಮೂಲಕ ಅನಾವರಣ ಮಾಡಲಾಯಿತು. ಪ್ರಧಾನಿ ಕಾರ್ಯಾಲಯ ನೀಡಿರುವ ಮಾಹಿತಿ ಪ್ರಕಾರ ಹನುಮಾನ ದೇವರಿಗೆ ಸಂಬಂಧಿಸಿದ ಚಾರ್ಧಾಮ ಯೋಜನೆಯಡಿ ದೇಶದ ನಾಲ್ಕೂ ದಿಕ್ಕುಗಳಲ್ಲಿ ಹನುಮಾನನ ಮೂರ್ತಿಗಳನ್ನು ಸ್ಥಾಪಿಸಲಾಗುವುದು. ಇದರ ಪ್ರಕಾರ ಶ್ರೀ ಹನುಮಾನನ ಇದು ಎರಡನೇ ಮೂರ್ತಿಯಾಗಿದೆ. ಇದು ಪಶ್ಚಿಮ ದಿಕ್ಕಿನಲ್ಲಿದೆ.

ಮೊರಬಿಯಲ್ಲಿಯ ಬಾಪು ಕೇಶವಾನಂದ ಆಶ್ರಮದಲ್ಲಿ ಈ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಯಿತು. ಈ ಸರಣಿಯ ಮೊದಲನೇ ಮೂರ್ತಿಯು ಉತ್ತರದಲ್ಲಿಯ ಶಿಮ್ಲಾದಲ್ಲಿ ೨೦೧೦ ರಲ್ಲಿ ಸ್ಥಾಪಿಸಲಾಯಿತು. ಮೂರನೇ ಮೂರ್ತಿಯ ಕಾಮಗಾರಿ ಪ್ರಗತಿಯಲ್ಲಿದೆ. ಮೂರನೇ ಮೂರ್ತಿಯನ್ನು ದಕ್ಷಿಣದ ರಾಮೇಶ್ವರಂನಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದರು.