ದೆಹಲಿಯ ವಿಕಾಸಪುರಿಯ ಹಿಂದೂ ಸಂಘಟನೆಗಳಿಂದ ಮೆರವಣಿಗೆ

  • ಕತ್ತಿ ಮತ್ತು ಕೋಲುಗಳೊಂದಿಗೆ ಭಾಗವಹಿಸಿದ ಹಿಂದೂಗಳು

  • ಜಹಾಂಗಿರಪುರಿಯಂತಹ ದಾಳಿ ಮರುಕಳಿಸಿದರೆ ಆತ್ಮರಕ್ಷಣೆಗಾಗಿ ಕತ್ತಿಯನ್ನು ಹಿಡಿದಿರುವುದಾಗಿ ಹಿಂದೂಗಳ ಪ್ರತಿಪಾದನೆ

ಹೊಸದೆಹಲಿ – ದೆಹಲಿಯ ಜಹಾಂಗೀರಪುರಿಯಲ್ಲಿ ಹನುಮಂತ ಜಯಂತಿಯಂದು ನಡೆದ ಮೆರವಣಿಗೆಯ ಮೇಲೆ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಮತಾಂಧರಿಂದ ದಾಳಿ ನಡೆದಿತ್ತು. ಇದಾದ ನಂತರ ಏಪ್ರಿಲ ೧೭ ರಂದು ದೆಹಲಿಯ ವಿಕಾಸನಗರದಲ್ಲಿ ಹಿಂದೂ ಸಂಘಟನೆಗಳಿಂದ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಆ ಸಮಯದಲ್ಲಿ ಅನೇಕ ಹಿಂದೂಗಳು ಕತ್ತಿ ಮತ್ತು ಕೋಲುಗಳೊಂದಿಗೆ ಅದರಲ್ಲಿ ಭಾಗವಹಿಸಿದ್ದು ಕಂಡುಬಂದಿತು. ಈ ಕುರಿತು ಕೆಲ ಹಿಂದೂಗಳನ್ನು ಪತ್ರಕರ್ತರು ಕೇಳಿದಾಗ ‘ಜಹಾಂಗಿರಪುರಿಯಲ್ಲಿ ಮೆರವಣಿಗೆ ಮೇಲೆ ನಡೆದ ದಾಳಿಯಿಂದಾಗಿ ನಮ್ಮ ರಕ್ಷಣೆಗಾಗಿ ನಾವೇ ಕತ್ತಿ ಹಿಡಿದುಕೊಂಡು ಹೋಗುತ್ತಿದ್ದೇವೆ’ ಎಂದರು.