ಮೀರತ (ಉತ್ತರ ಪ್ರದೇಶ) – ಹಸುಗಳಿಂದಾಗಿ ನಾವು ಹಾಲು, ಮೊಸರು, ತುಪ್ಪ, ಸೆಗಣಿ ಮತ್ತು ಗೋಮುತ್ರದಂತಹ ೫ ಪದಾರ್ಥಗಳನ್ನು ಪಡೆಯುತ್ತೇವೆ. ಸೆಗಣಿಯಲ್ಲಿ ಲಕ್ಷ್ಮಿ ಮತ್ತು ಗೋಮುತ್ರದಲ್ಲಿ ಗಂಗೆ ನೆಲೆಸಿದ್ದಾರೆ. ಗೋಮುತ್ರ ಸಿಂಪಡಣೆ ಮಾಡುವುದರಿಂದ ರಾಕ್ಷಸ ಅಥವಾ ವಾಸ್ತುದೋಷಗಳಂತಹ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಉತ್ತರ ಪ್ರದೇಶದ ಪಶುಸಂಗೋಪನ ಮತ್ತು ಹೈನುಗಾರಿಕಾ ಅಭಿವೃದ್ಧಿ ಸಚಿವ ಧರಂಪಾಲ ಸಿಂಗ ಹೇಳಿದ್ದಾರೆ. ಇಲ್ಲಿ ನಡೆದ ಪತ್ರಿಕಾಗೊಷ್ಠಿಯಲ್ಲಿ ಅವರು ಮಾತನಾಡಿದರು.
पशुधन मंत्री धर्मपाल सिंह बोले- ‘गौमूत्र में होता है गंगाजल दूर होती हैं बाधाएं, गोबर में होती हैं लक्ष्मी’@tiwariavinash की रिपोर्ट #DharmpalSingh #BJP #UttarPradeshhttps://t.co/YmgrnzC7T4
— ABP Ganga (@AbpGanga) April 15, 2022
ರಾಜ್ಯಾದ್ಯಂತ ರಸ್ತೆಗಳಲ್ಲಿ ಸಂಚರಿಸುವ ಪ್ರಾಣಿಗಳಿಗಾಗಿ ವಿಶೇಷ ಅಭಿಯಾನವನ್ನು ಜಾರಿಗೊಳಿಸಲಾಗುತ್ತಿದೆ ಎಂದು ಧರಂಪಾಲ ಸಿಂಗ ಹೇಳಿದರು. ಇದಕ್ಕಾಗಿ ಪ್ರತಿ ಗ್ರಾಮಗಳಲ್ಲಿ ಮೇವು ಬ್ಯಾಂಕ ಸ್ಥಾಪಿಸಲು ಯೋಜಿಸಲಾಗಿದೆ. ಹಸುವಿನ ಸೆಗಣಿ ಮಾರಿ ಸಿಎನಜಿ ಇಂಧನ ಉತ್ಪಾದಿಸಲು ಯೋಜಿಸಲಾಗಿದೆ. ಇದರಿಂದ ಹಣವೂ ಸಿಗಲಿದೆ. ಹಾಲು ಕೊಡುವ ಹಸುಗಳನ್ನು ಸಾಕಲಾಗುತ್ತದೆ; ಆದರೆ ಈ ಯೋಜನೆಯಿಂದಾಗಿ ಹಾಲು ಕೊಡದ ಹಸುಗಳನ್ನೂ ಕೂಡಾ ಸಾಕಲಾಗುವುದು.