ಓಜಸ್ವಿ ಭಾಷಣಗಳಿಂದ ಯುವಕರಲ್ಲಿ ರಾಷ್ಟ್ರ ಮತ್ತು ಧರ್ಮಕಾರ್ಯದ ಚಿರ ಪ್ರೇರಣೆ ಜಾಗೃತಗೊಳಿಸುವ ರಾಷ್ಟ್ರನಿಷ್ಠ ನಟ ಶರದ್ ಪೋಕ್ಷೆ !

ಮರಾಠಿ ಚಲನಚಿತ್ರ, ಧಾರವಾಹಿಗಳಲ್ಲಿ ಉತ್ಕೃಷ್ಟವಾಗಿ ಅಭಿನಯಿಸಿ ಪ್ರಸಿದ್ಧಿ ಪಡೆದಿದ್ದರೂ ಆ ಚಿತ್ರಣದಲ್ಲಿ ಸಿಲುಕದೆ ಹಿಂದೂ ಧರ್ಮ, ರಾಷ್ಟ್ರ ಮತ್ತು ಸಮಾಜಕ್ಕಾಗಿ ನಿರಂತರ ಕಾರ್ಯನಿರತರಾಗಿರುವ ನಟ ಎಂದರೆ ಶ್ರೀ. ಶರದ್ ಪೋಕ್ಷೆ ! ಓರ್ವ ಯಶಸ್ವಿ ನಟರಾಗಿದ್ದರೂ ಕೂಡ ಪ್ರಖರ ರಾಷ್ಟ್ರವಾದಿ ಮತ್ತು ಹಿಂದುತ್ವದ ಜೊತೆಗೆ ರಾಜಿ ಮಾಡಿಕೊಳ್ಳದೆ ಇರುವ ಅಪರೂಪದ ವ್ಯಕ್ತಿತ್ವ ಅವರದಾಗಿದೆ. ದಾಳಿಗಳು, ಬೆದರಿಕೆಗಳು, ಕಾನೂನು ರೀತಿ ಕ್ರಮ ಇಂತಹ ಯಾವುದೇ ಒತ್ತಡಕ್ಕೆ ಹೆದರದೆ ಶ್ರೀ. ಶರದ್ ಪೋಕ್ಷೆ ಅವರು ರಾಷ್ಟ್ರ ಮತ್ತು ಧರ್ಮ ಜಾಗೃತಿಯ ಕಾರ್ಯವನ್ನು ನಿರಂತರವಾಗಿ ಮುಂದುವರೆಸಿದ್ದಾರೆ. ಅವರ ಪ್ರಖರ, ರಾಷ್ಟ್ರನಿಷ್ಠೆ ಮತ್ತು ನೇರ ವಿಚಾರಗಳಿಂದ ಬೃಹತ್ ಯುವ ವರ್ಗ ಅವರ ಜೊತೆ ನಿಂತಿದೆ. ಯುವಕರಲ್ಲಿ ರಾಷ್ಟ್ರ ಮತ್ತು ಧರ್ಮ ಕಾರ್ಯದಲ್ಲಿ ಆಸಕ್ತಿ ಮೂಡಿಸಿ ಅವರನ್ನು ಕಾರ್ಯಪ್ರವೃತ್ತಗೊಳಿಸುವ ಈ ಹಿಂದುತ್ವದ ಯೋಧನ ವೈಹಿಷ್ಟ್ಯವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.


ವಿಶೇಷ ಮಾಲಿಕೆ


ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು (ಸೈನಿಕರು) ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೆದಾರ’ರಂತೆಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಗೂ ಅವರ ಹಿಂದೂ ಧರ್ಮ ರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರ’ ಈ ಲೇಖನಮಾಲೆಯ ಮೂಲಕ ಉಳಿದವರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು

೧. ಜನನ ಮತ್ತು ಶಿಕ್ಷಣ

ಶರದ್ ಪೋಕ್ಷೆ ಅವರು ಮೀರಜ್ ನಲ್ಲಿ ಜನಿಸಿದರು. ಅವರು ಅಲ್ಲಿ ಆರನೆಯ ತರಗತಿಯವರೆಗೆ ಶಿಕ್ಷಣ ಪಡೆದರು. ಅದರ ನಂತರ ಅವರ ಕುಟುಂಬ ಮುಂಬಯಿಗೆ ಸ್ಥಳಾಂತರವಾಯಿತು. ಅಲ್ಲಿ ಅವರು ಭಾಯಿದರದಲ್ಲಿ ಅಭಿನವ ವಿದ್ಯಾ ಮಂದಿರ ಶಾಲೆಯಲ್ಲಿ ಶಿಕ್ಷಣ ಪೂರ್ಣಗೊಳಿಸಿದರು.೧೨ನೆಯ ತರಗತಿಯ ನಂತರ ಅವರು ೩ ವರ್ಷ ‘ ಡಿಪ್ಲೋಮಾ’ ಕಲಿತರು ನಂತರ ಮಹಾರಾಷ್ಟ್ರದ ‘ಬೆಸ್ಟ್’ ಬಸ್ ಸೇವೆಯಲ್ಲಿ ನೌಕರಿ ಮಾಡಿದರು.

೨. ಅಭಿನಯ ಪ್ರವಾಸ

ಅವರು ಉಚ್ಚ ಮಾಧ್ಯಮಿಕ ಶಿಕ್ಷಣದ ನಂತರ ಮುಂಬಯಿಯಲ್ಲಿನ ನಾಟಕ ಶಾಲೆಯಲ್ಲಿ ಪ್ರವೇಶ ಪಡೆದರು. ಅಲ್ಲಿ ಅವರು ಅಭಿನಯದ ಶಿಕ್ಷಣ ಪಡೆದರು. ಅವರ ಅಭಿನಯ ಮೆಚ್ಚುಗೆಗೆ ಪಾತ್ರವಾಯಿತು, ಹಾಗೂ ಅವರಿಗೆ ಮರಾಠಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು. ಅವರು ಅನೇಕ ಮರಾಠಿ ಚಲನಚಿತ್ರಗಳಲ್ಲಿ ಮತ್ತು ನಾಟಕಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರು ‘ನಾಥುರಾಮ ಗೋಡ್ಸೆ’ ಅವರ ಪಾತ್ರದಲ್ಲಿ ಅಭಿನಯಿಸಿದ್ದು ಆ ಪಾತ್ರ ಅವರಿಗೆ ಬಹಳಷ್ಟು ಹೆಸರನ್ನು ತಂದು ಕೊಟ್ಟಿತು; ಆದರೆ ಆ ಪಾತ್ರದಿಂದ ಅವರಿಗೆ ಅನೇಕ ಟೀಕೆ-ಟಿಪ್ಪಣಿಗಳನ್ನು ಕೂಡ ಎದುರಿಸಬೇಕಾಯಿತು. ಶರದ್ ಅವರು ದೂರದರ್ಶನದಲ್ಲಿ ಮತ್ತು ಚಲನಚಿತ್ರದಲ್ಲಿ ೧೦೦ ಕ್ಕಿಂತಲೂ ಹೆಚ್ಚಿನ ಪಾತ್ರಗಳನ್ನು ನಿರ್ವಹಿಸಿದ್ದಾರೆ.


ಕ್ಯಾನ್ಸರ್ ವನ್ನು ಧೈರ್ಯದಿಂದ ಎದುರಿಸಿ ಸಮಾಜದ ಮನೋಬಲ ಹೆಚ್ಚಿಸುವ ವ್ಯಕ್ತಿತ್ವ !

ಮಾರ್ಗದರ್ಶನ ಮಾಡುತ್ತಿರುವಾಗ ಶ್ರೀ. ಶರದ ಪೊಕ್ಷೆ


ಶ್ರೀ. ಶರದ್ ಪೋಕ್ಷೆ ಅವರಿಗೆ ೨೦೧೯ ರಲ್ಲಿ ಕ್ಯಾನ್ಸರ್ ರೋಗ ಕಾಡಿತು. ಕ್ಯಾನ್ಸರ್ ಎನ್ನುತಲೆ, ಮನುಷ್ಯ ಬದುಕುವ ಆಸೆಯನ್ನೇ ಬಿಟ್ಟು ಬಿಡುತ್ತಾನೆ; ಆದರೆ ಕ್ಯಾನ್ಸರ್ ಬಂದಿದೆ ಎಂಬುದು ತಿಳಿದ ನಂತರ ೧೦ – ೧೧ ತಿಂಗಳಲ್ಲಿ ಶ್ರೀ. ಶರದ್ ಪೋಕ್ಷೆ ಅವರು ಈ ಗಂಭೀರ ರೋಗವನ್ನು ಎದುರಿಸಲು ಹೋರಾಡಿದರು ಮತ್ತು ಅದರಿಂದ ಅವರು ಆರೋಗ್ಯವಾಗಿ ಹೊರ ಬಂದರು. ರೋಗದೊಂದಿಗೆ ಹೋರಾಡುವಾಗ ಅವರು ತಮ್ಮಲ್ಲಿನ ಹೋರಾಟದ ವೃತ್ತಿ, ಸಕಾರಾತ್ಮಕತೆಯನ್ನು ಹೆಚ್ಚಿಸಿದರು; ಆದರೆ ಅದೆಲ್ಲದಕ್ಕಿಂತ ಮುಖ್ಯವಾಗಿ ಸಮಾಜಕ್ಕೆ ಒಂದು ಪ್ರೇರಣೆ ನೀಡಿದರು. ಕಷ್ಟದಿಂದ ಕಲಿಯುವ ಅನೇಕರು ನಮಗೆ ಸಮಾಜದಲ್ಲಿ ಸಿಗುತ್ತಾರೆ; ಆದರೆ ಅದೇ ಕಷ್ಟಗಳನ್ನು ಎದುರಿಸಿ ಸಮಾಜಕ್ಕೆ ಮಾರ್ಗದರ್ಶನ ನೀಡುವ ಮತ್ತು ಅದರಿಂದ ಕೂಡ ರಾಷ್ಟ್ರ ಕಾರ್ಯಕ್ಕಾಗಿ ಸಮಾಜವನ್ನು ಪ್ರೇರೇಪಿಸುವ ವ್ಯಕ್ತಿತ್ವ ಎಂದರೆ ಶ್ರೀ. ಶರದ್ ಪೋಕ್ಷೆ. ‘ಹೋರಾಟ ಯಾವುದೇ ಆಗಿರಲಿ, ಅದು ಮೊದಲು ಮಾನಸಿಕ ಸ್ತರದಲ್ಲಿ ಹೋರಾಡಬೇಕಾಗುತ್ತದೆ. ಯಾವ ದೇಶದಲ್ಲಿ ಹಿಮಾಲಯದಷ್ಟು ಉತ್ತುಂಗ ವ್ಯಕ್ತಿತ್ವ ರೂಪಗೊಂಡಿದೆಯೋ ಆ ದೇಶದ ನಾಗರೀಕರು ಎಂದಿಗೂ ಹೆದರಬಾರದು. ದೇಶದಲ್ಲಿನ ರಾಷ್ಟ್ರ ಪುರುಷರು, ಸಂತರು ಅವರ ಇತಿಹಾಸ ನಮ್ಮ ಯುವ ಪೀಳಿಗೆಗೆ ಕಲಿಲಿಲ್ಲ. ನಮ್ಮ ಈ ಶಿಕ್ಷಣ ಪದ್ಧತಿಯೇ ತಪ್ಪಾಗಿದೆ’ ಎಂದು ಶ್ರೀ. ಶರದ್ ಪೋಕ್ಷೆ ಹೇಳುತ್ತಾರೆ.

೩. ದೇಶ-ವಿದೇಶದಲ್ಲಿ ವ್ಯಾಖ್ಯಾನದ ಮೂಲಕ ಹಿಂದುತ್ವದ ಪ್ರಸಾರ !

ಹಿಂದುತ್ವ, ಸ್ವಾತಂತ್ರ್ಯ ವೀರ ಸಾವರ್ಕರ್, ಅಜೇಯ ಬಾಜಿರಾವ ಪೇಷವೆ; ಭಾರತ ನಿನ್ನೆ-ಇಂದು-ನಾಳೆ ; ಶ್ರೀರಾಮ, ಛತ್ರಪತಿ ಶಿವಾಜಿ ಮಹಾರಾಜ್ ಇಂತಹ ವಿಷಯಗಳಲ್ಲಿ ೨೦೦೦ ಇಸ್ವಿಯಿಂದ ದೇಶ-ವಿದೇಶಗಳಲ್ಲಿ ಅನೇಕ ವ್ಯಾಖ್ಯಾನಗಳನ್ನು ನೀಡಿ ಅಲ್ಲಿನ ನಾಗರೀಕರಲ್ಲಿ ಹಿಂದುತ್ವ, ರಾಷ್ಟ್ರ ನಿಷ್ಠೆಯನ್ನು ಅವರು ಜಾಗೃತಗೊಳಿಸಿದ್ದಾರೆ. ಅವರ ವ್ಯಾಖ್ಯಾನದಿಂದ ದೇಶದಲ್ಲಿನ ಲಕ್ಷಾಂತರ ಯುವಕರಿಗೆ ರಾಷ್ಟ್ರ ಪುರುಷರ ಶೌರ್ಯಗಾಥೆ ತಲುಪಿದೆ. ದೇಶಕ್ಕಾಗಿ ಏನಾದರೂ ಸೇವೆ ಮಾಡುವ ಭಾವನೆ ನಿರ್ಮಾಣವಾಗಿದೆ.


ದೇಶದಲ್ಲಿನ ಲಕ್ಷಾಂತರ ಯುವಕರವರೆಗೆ ನೈಜ ಇತಿಹಾಸ ತಲುಪಿಸುವುದಕ್ಕಾಗಿ ಜೀವದ ಹಂಗು ತೊರೆದು ಕಾರ್ಯ ಮಾಡುವ ಶ್ರೀ. ಶರದ್ ಪೋಕ್ಷೆ !

‘ಮೀ ನಾಥುರಾಮ ಗೋಡ್ಸೆ ಬೋಲತೋಯ ‘ ಎಂಬ ನಾಟಕದಲ್ಲಿ ಅಭಿನಯ ಮಾಡುವಾಗ ಎಡದಿಂದ ಶ್ರೀ. ಶರದ್ ಪೋಕ್ಷೆ

೧. ಬೆದರಿಕೆಗೆ ಹೆದರದೆ ಗಾಂಧೀಜಿಯವರ ನಿಜವಾದ ಸ್ವರೂಪ ಬೆಳಕಿಗೆ ತರುವ ನಾಟಕದ ೧ ಸಾವಿರದ ೨೦೦ ಪ್ರದರ್ಶನ ನಡೆಸಿದರು !

ಮೋಹನದಾಸ ಗಾಂಧಿ ಅವರ ಹಿಂದೂ ಸಮಾಜದ ಬಗ್ಗೆ ಇದ್ದಂತಹ ದ್ವಿಮುಖತನ ಹಾಗೂ ನಾಥುರಾಮ ಅವರ ಪ್ರಖರ ರಾಷ್ಟ್ರವಾದ ಸಮಾಜದವರೆಗೆ ತಲುಪಿಸುವುದಕ್ಕಾಗಿ ‘ಮೀ ನಾಥುರಾಮ ಗೋಡ್ಸೆ ಬೋಲತೋಯ ‘ ಎಂಬ ನಾಟಕವನ್ನು ಪ್ರಸ್ತುತಪಡಿಸಿದರು. ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ನಂಬುವ ಗಾಂಧಿವಾದಿಗಳು ಈ ನಾಟಕ ಹಿಂಸೆಯ ಮಾರ್ಗದಿಂದ ನಿಲ್ಲಿಸುವ ಪ್ರಯತ್ನ ಮಾಡಿದರು. ಇದೇ ಗಾಂಧಿಯ ಟೊಳ್ಳು ಅಹಿಂಸಾವಾದದ ಸೋಲಾಗಿತ್ತು. ಬಸ್ಸುಗಳಿಗೆ ಬೆಂಕಿ ಹಾಕುವುದು, ನಾಟಕದ ಕಲಾವಿದರಿಗೆ ವೇದಿಕೆಯ ಮೇಲೆ ಹೊಡೆಯಲು ಹೋಗುವುದು, ಜಾತಿ ಹೆಸರು ಹೇಳಿ ಕೆಟ್ಟದಾದ ಬೈಗುಳ ಬಯ್ಯುವುದು, ಪತ್ನಿಗೆ ಫೋನ್ ಮಾಡಿ ಕೊಲ್ಲುವ ಬೆದರಿಕೆ ನೀಡುವುದು ಮುಂತಾದ ಹಿಂಸಾತ್ಮಕ ಕೃತ್ಯಗಳಿಗೆ ಹೆದರದೆ ಶ್ರೀ. ಶರದ್ ಪೋಕ್ಷೆ ಅವರ ಸಹಯೋಗಿಗಳೊಂದಿಗೆ ೨೫ ವರ್ಷಗಳಲ್ಲಿ ‘ ಮೀ ನಾಥುರಾಮ ಗೋಡ್ಸೆ ಬೋಲತೋಯ ‘ ನಾಟಕದ ೧ ಸಾವಿರದ ೨೦೦ ಬಾರಿ ಪ್ರದರ್ಶನ ಮಾಡಿದರು. ಈ ನಾಟಕಕ್ಕೆ ವಿರೋಧ ಆದ ಕಾರಣ ಕಾನೂನಿನ ಹೋರಾಟ ನಡೆಸಬೇಕಾಯಿತು. ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯ ಇವುಗಳ ತೀರ್ಪು ನಾಟಕದ ಪರವಾಗಿ ಬಂದಿತು. ಅದರ ನಂತರವೂ ಕೂಡ ನಾಟಕದ ಬಸ್ಸುಗಳನ್ನು ಸುಡುವುದು, ಬೆದರಿಕೆಗಳು ಇಂತಹ ವಿರೋಧಗಳನ್ನು ಲೆಕ್ಕಿಸದೆ ನಾಟಕಗಳ ಪ್ರಯೋಗ ಮುಂದುವರಿಸಿದ್ದರು. ಮಹಾರಾಷ್ಟ್ರದಲ್ಲಿ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ಸಿನ ಸರಕಾರವಿರುವಾಗ ‘ ಮೀ ನಾಥುರಾಮ ಗೋಡ್ಸೆ ಬೋಲತೊಯ ‘ ನಾಟಕ ನಡೆಯಬಾರದೆಂದು ಬಹಳಷ್ಟು ಒತ್ತಡವಿದ್ದರೂ ಕೂಡ ಶ್ರೀ. ಶರದ್ ಪೋಕ್ಷೆ ಅವರು ಧೈರ್ಯದಿಂದ ಈ ನಾಟಕದ ಪ್ರದರ್ಶನ ರಾಜ್ಯಾದ್ಯಂತ ಪ್ರಸ್ತುತಪಡಿಸಿದರು.

ನಾಥುರಾಮ ಗೋಡ್ಸೆ ಅವರ ಪ್ರಖರ ಮತ್ತು ತೇಜಸ್ವಿ ವಿಚಾರವನ್ನು ಪ್ರಸ್ತುತಪಡಿಸುವ ವ್ಯಕ್ತಿತ್ವವು ಕೂಡ ಅವರಂತೆಯೇ ಪ್ರಖರವಾಗಿ ರಾಷ್ಟ್ರದ ಬಗ್ಗೆ ನಿಷ್ಠೆ ಹೊಂದಿರುವುದು ಆವಶ್ಯಕವಾಗಿತ್ತು. ಆ ಪ್ರಖರತೆಯನ್ನು ಶ್ರೀ. ಶರದ್ ಪೋಕ್ಷೆ ಅವರು ತಮ್ಮ ನಾಟಕದಿಂದ ವ್ಯಕ್ತಪಡಿಸಿದರು. ಈ ಮೂಲಕ ದೇಶದ ಲಕ್ಷಾಂತರ ಯುವಕರವರೆಗೆ ನಮ್ಮ ನಿಜವಾದ ಇತಿಹಾಸದ ಪರಿಚಯವಾಯಿತು; ಹಾಗೂ ಆ ಯುವಕರು ರಾಷ್ಟ್ರ ಕಾರ್ಯಕ್ಕಾಗಿ ಕೂಡ ಪ್ರೇರೇಪಿತರಾದರು. ಕಲೆ ಮತ್ತು ಪ್ರಖರ ರಾಷ್ಟ್ರಪ್ರೇಮ ಶ್ರೀ. ಶರದ್ ಪೋಕ್ಷೆ ಅವರಲ್ಲಿರುವ ಒಂದು ಅಪರೂಪದ ಸಂಗಮವಾಗಿದ್ದು ಎಲ್ಲಾ ಕಲಾವಿದರಿಗೆ ಆದರ್ಶವಾಗಿದೆ.

೨. ಮಾಧ್ಯಮಗಳ ಮೂಲಕ ರಾಷ್ಟ್ರ ಮತ್ತು ಧರ್ಮದ ಪ್ರಸಾರ !

ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಣಾಮಕಾರಿಯಾಗಿ ರಾಷ್ಟ್ರ ಮತ್ತು ಧರ್ಮ ಕಾರ್ಯದ ಪ್ರಸಾರ ಮಾಡುವುದಕ್ಕಾಗಿ ಶ್ರೀ. ಶರದ್ ಪೋಕ್ಷೆ ಅವರು ತಂತ್ರಜ್ಞಾನ ಮತ್ತು ಅದರಲ್ಲಿನ ಸೂಕ್ಷ್ಮತೆಯನ್ನು ಕಲಿತಿದ್ದಾರೆ. ಅವರು ‘ ರಾಷ್ಟ್ರಾಯ ಸ್ವಾಹ ‘ ಎಂಬ ಒಂದು ‘ಯುಟ್ಯೂಬ್ ಚಾನೆಲ್ ‘ ಆರಂಭಿಸಿ ಹಿಂದೂ ಧರ್ಮದ ಮೇಲಿನ ಅನೇಕ ಆಘಾತಗಳ, ಅಪಪ್ರಚಾರಗಳಿಗೆ ಖಾರವಾಗಿ ಪ್ರತ್ಯುತ್ತರ ನೀಡಿದ್ದಾರೆ. ಈ ಚಾನಲ್ ನ ಮಾಧ್ಯಮದಿಂದ ಇಂದು ಧರ್ಮ ಮತ್ತು ರಾಷ್ಟ್ರವಾದದ ಪರಿಣಾಮಕಾರಿ ಪ್ರಚಾರವನ್ನು ಅವರು ಮಾಡುತ್ತಿದ್ದಾರೆ.

೩. ಆರ್ಥಿಕವಾಗಿ ದುರ್ಬಲಗೊಂಡ ಸಮಾಜಕ್ಕೆ ಸಹಾಯ !

ಹಿಂದುತ್ವದ ಪ್ರಸಾರ ಮಾಡುವ ಜೊತೆಗೆ ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲಗೊಂಡ ಜನರಿಗೆ ಶ್ರೀ. ಶರದ್ ಪೋಕ್ಷೆ ಅವರು ಆಗಾಗ ಸಹಾಯ ಮಾಡಿದ್ದಾರೆ. ಚಲನಚಿತ್ರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಅವರು ಹಿಂದುತ್ವದ ಪ್ರಸಾರ ಕಾರ್ಯಕ್ರಮಕ್ಕಾಗಿ ಸಮಯವನ್ನು ನೀಡುತ್ತಾ ಅಲ್ಲದೇ ಸಮಾಜ ಕಾರ್ಯದಲ್ಲಿಯೂ ಕೂಡ ಕೃತಿಶೀಲರಾಗಿದ್ದಾರೆ. ಅನೇಕ ಬಡ ಹಿಂದುಗಳಿಗೆ ಆರ್ಥಿಕ ಮತ್ತು ವೈದ್ಯಕೀಯ ಸಹಾಯ ನೀಡಿ ಸಮಾಜ ಕಾರ್ಯದಲ್ಲಿ ಕೂಡ ತೊಡಗಿದ್ದಾರೆ. ಕ್ಯಾನ್ಸರ್ ಪೀಡಿತ ರೋಗಿಗಳಲ್ಲಿ ಆತ್ಮವಿಶ್ವಾಸವನ್ನು ನಿರ್ಮಿಸುವ ಸಲುವಾಗಿ ಅವರು ಮಾರ್ಗದರ್ಶನ ಮಾಡುತ್ತಿದ್ದು ಅನೇಕ ರೋಗಿಗಳಿಗೆ ಇದರಿಂದ ಲಾಭವಾಗಿದೆ.