ದೇಶದ ನಾಗರಿಕರ ಮುಂದೆ ಸತ್ಯ ಮಂಡಿಸಲು ಇತಿಹಾಸ ಪುಸ್ತಕದ ಪುನರ್‌ ಲೇಖನ ಅಗತ್ಯ !

ಹಿಂದೂ ವಿಧಿಜ್ಞ ಪರಿಷತ್ತಿನಿಂದ ಎನ್‌.ಸಿ.ಇ.ಆರ್‌.ಟಿ.ಗೆ ಪತ್ರಮುಖೇನ ಆಗ್ರಹ !

ಕಳೆದ ಹತ್ತುವರೆ ವರ್ಷಗಳಿಂದ ಕೇಂದ್ರದಲ್ಲಿ ಹಿಂದುತ್ವನಿಷ್ಠ ಭಾಜಪದ ಅಧಿಕಾರ ಇರುವಾಗ ‘ರಾಷ್ಟ್ರೀಯ ಶಿಕ್ಷಣ ನೀತಿ’ ರೂಪಿಸುವ ಮಹತ್ವದ ನಿರ್ಣಯ ತೆಗೆದುಕೊಂಡಿದೆ; ಆದರೆ ಇನ್ನು ಮುಂದೆ ಸಾಗಿ ಆಕ್ರಮಣಕಾರಿಗಳ ಹಾಡಿಹೊಗಳುವ ಇತಿಹಾಸ ಅಳಿಸಿ ಹಿಂದೂರಾಜರ ಶೌರ್ಯದ ಪಾಠಗಳು ಯುವ ಪೀಳಿಗೆಗೆ ನೀಡುವುದು ಆವಶ್ಯಕವಾಗಿದೆ. ಹಿಂದೂ ವಿಧಿಜ್ಞ ಪರಿಷತ್ತಿನಿಂದ ಸಲ್ಲಿಸಲಾದ ಬೇಡಿಕೆಗಾಗಿ ಅವರ ಅಭಿನಂದನೆ ! ಹಿಂದೂ ಸಮಾಜವು ಈ ಬೇಡಿಕೆಗೆ ವ್ಯಾಪಕ ಬೆಂಬಲ ನೀಡುವುದು ಅವಶ್ಯಕವಾಗಿದೆ !

ಠಾಣೆ – ಅತ್ಯಾಚಾರಿ ಇಸ್ಲಾಮಿ ಆಕ್ರಮಣಕಾರರನ್ನು ‘ಒಳ್ಳೆಯ ಮತ್ತು ಸಕ್ಷಮ’ ರಾಜರೆಂದು ಚಿತ್ರಿಸಿರುವ ಮತ್ತು ದೇಶದಲ್ಲಿನ ಮೂಲ ಜನರಿಗೆ (ಹಿಂದೂಗಳಲ್ಲಿ) ‘ಎರಡನೆಯ ನಾಗರಿಕ’ ಎಂದು ಭಾವನೆ ನಿರ್ಮಾಣ ಮಾಡುವ ಇತಿಹಾಸದ ಏಕಪಕ್ಷಿಯ ಚಿತ್ರಣ ತಕ್ಷಣ ಬದಲಾಯಿಸಬೇಕು. ಜೊತೆಗೆ ದೇಶದಲ್ಲಿನ ನಾಗರಿಕರ ಮುಂದೆ ಸತ್ಯ ಮಂಡಿಸುವುದಕ್ಕಾಗಿ ಇತಿಹಾಸದ ಪುಸ್ತಕದ ಪುನರ್‌ ಲೇಖನ ಮಾಡಬೇಕು, ಎಂದು ಹಿಂದೂ ವಿಧಿಜ್ಞ ಪರಿಷತ್ತು ಮಹತ್ವಪೂರ್ಣ ಬೇಡಿಕೆಯನ್ನು ಸಲ್ಲಿಸಿದೆ.

೧. ಹಿಂದೂ ವಿಧಿಜ್ಞ ಪರಿಷತ್ತಿನ ಕೆಲವು ಸದಸ್ಯರು ‘ಎನ್‌.ಸಿ.ಇ.ಆರ್‌.ಟಿ.’ಯ ಜಾಲತಾಣದಲ್ಲಿ ಪ್ರಕಾಶಿತಗೊಂಡಿರುವ ಇತಿಹಾಸದ ಕೆಲವು ಪಠ್ಯಪುಸ್ತಕಗಳನ್ನು ಅಧ್ಯಯನ ಮಾಡಿದಾಗ ಅದರಲ್ಲಿ ಭಾರತೀಯ ನಾಗರಿಕರ ದೃಷ್ಟಿಕೋನದಿಂದ ಇತಿಹಾಸ ಇಲ್ಲದಿರುವುದು ಗಮನಕ್ಕೆ ಬಂದಿದೆ. ಇದರಲ್ಲಿ ಇಸ್ಲಾಮಿ ಆಕ್ರಮಣಕಾರರು ನಡೆಸಿರುವ ಅಮಾನವೀಯ ಪೌಶಾಚಿಕ ಪ್ರವೃತ್ತಿಯ ದೌರ್ಜನ್ಯವನ್ನು ಮರೆಮಾಚುವ ಒಂದು ವಿಫಲ ಪ್ರಯತ್ನ ಮಾಡಲಾಗಿದೆ. ಅವರನ್ನು ಈ ಪ್ರಾಂತದ ಸಕ್ಷಮ ಸರಕಾರ ಮತ್ತು ಆಡಳಿತಗಾರರೆಂದು ಚಿತ್ರಿಸಲಾಗಿದೆ.

೨. ಮಹತ್ವದ ವಿಷಯವೆಂದರೆ ಇತಿಹಾಸದ ಪುಸ್ತಕದಲ್ಲಿ ಈ ಇಸ್ಲಾಮಿ ಒರಟು ಆಡಳಿತಗಾರರು ಹಿಂದೂಸ್ಥಾನದಲ್ಲಿನ ಸ್ಥಳೀಯರ ಮೇಲೆ ಹೇರಿದ ಧಾರ್ಮಿಕ ಮತಾಂಧತೆಯ ಉಲ್ಲೇಖ ಎಲ್ಲಿಯೂ ಇಲ್ಲ. ಅಧಿಕಾರಕ್ಕಾಗಿ ಇಸ್ಲಾಮಿ ಆಡಳಿತಗಾರರು ತಮ್ಮ ತಂದೆಯ ಹತ್ಯೆ ಮಾಡುವುದು ಅಥವಾ ಅವರನ್ನು ಜೈಲಿನಲ್ಲಿ ಕೂಡಿ ಹಾಕುವುದು, ಸ್ವಂತ ಸಹೋದರನ ಬರ್ಬರ ಹತ್ಯೆ ಮಾಡುವುದು ಮತ್ತು ಬಲವಂತವಾಗಿ ತನ್ನನ್ನು ಸಾಮ್ರಾಟ ಎಂದು ನೇಮಿಸಿದ ಬಗ್ಗೆಯೂ ಯಾವುದೇ ಉಲ್ಲೇಖ ಈ ಪುಸ್ತಕಗಳಲ್ಲಿ ಇಲ್ಲ.

೩. ಈ ಪಠ್ಯಪುಸ್ತಕದಲ್ಲಿ ಇತಿಹಾಸದಲ್ಲಿನ ತಪ್ಪಾದ ವರ್ಣನೆಯ ಕೆಲವು ಉದಾಹರಣೆಗಳು ಕೆಳಗಿನಂತಿವೆ : ಆ. ಏಳನೆಯ ತರಗತಿಯ ಇತಿಹಾಸದ ಪಠ್ಯ ಪುಸ್ತಕದಲ್ಲಿ ‘ಸಂರಕ್ಷಿತ ಜನರು’ ಈ ಸುಳ್ಳು ಕಥೆ ವರ್ಣಿಸಿದ್ದಾರೆ. ಇದೇ ಪಠ್ಯಪುಸ್ತಕದಲ್ಲಿ ಚಂಗೇಜ ಖಾನ್‌ ಮತ್ತು ತೈಮೂರ ಇವರನ್ನು ‘ಶ್ರೇಷ್ಠರು’ ಎಂದು ಸಂಬೋಧಿಸಿದ್ದಾರೆ. ‘ಮೊಘಲರು ಈ ಇಬ್ಬರು ಮಹಾನ ರಾಜವಂಶದ ವಂಶಸ್ಥರಾಗಿದ್ದಾರೆ’ ಎಂದೂ ತಿಳಿಸಲಾಗಿದೆ

೪. ಈ ಪುಸ್ತಕದಲ್ಲಿನ ಎಂಟನೇ ಅಧ್ಯಾಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಯೋಗ್ಯ ಚಿತ್ರಣ ಮಾಡಲಾಗಿದೆ. ಈ ಅಧ್ಯಾಯ ಛತ್ರಪತಿ ಶಿವಾಜಿ ಮಹಾರಾಜರ ಸಂದರ್ಭ ನೀಡುತ್ತದೆ; ಆದರೆ ಈ ಅಧ್ಯಾಯದಲ್ಲಿ ಮೊಘಲರ ದೌರ್ಜನ್ಯದ ಬಗ್ಗೆ ಅಥವಾ ಸ್ವದೇಶಿ ಜನರ ಮೇಲೆ ಹೇರಿದÀ ಇಸ್ಲಾಮಿ ವಿಕೃತಿಗಳ ಉಲ್ಲೇಖವಿಲ್ಲ.

೫ ಇತಿಹಾಸದ ಬಗ್ಗೆ ಇರುವ ಈ ಸುಳ್ಳು ಮಾಹಿತಿ ಬದಲಾಯಿಸುವುದಕ್ಕಾಗಿ ‘ಎನ್‌.ಸಿ.ಇ.ಆರ್‌.ಟಿ.ಯಿಂದ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಹಿಂದೂ ವಿಧಿಜ್ಞ ಪರಿಷತ್ತಿನಿಂದ ಆಗ್ರಹಿಸಲಾಗಿದೆ.