ಇಬ್ಬರು ಹಿಂದೂ ರಾಜರು ಅಕ್ಬರ್ ಮತ್ತು ಔರಂಗಜೇಬರನ್ನು ಸಾಯುವಂತೆ ಮಾಡಿದರು!
ನೋಯ್ಡಾ (ಉತ್ತರ ಪ್ರದೇಶ) – ಮಹಾರಾಣಾ ಪ್ರತಾಪ್ ನಿಜವಾದ ನಾಯಕ, ಅವರು ಅಕ್ಬರ್‌ನನ್ನು ಮಂಡಿಯೂರುವಂತೆ ಮಾಡಿದರು. ಛತ್ರಪತಿ ಶಿವಾಜಿ ಮಹಾರಾಜರೇ ನಿಜವಾದ ನಾಯಕರು. ಅವರು ಔರಂಗಜೇಬನಿಗೆ ನೋವಿನ ಮರಣದಂಡನೆ ವಿಧಿಸುವಂತೆ ಮಾಡಿದರು. ಛತ್ರಪತಿ ಶಿವಾಜಿ ಮಹಾರಾಜರು ಮಾತ್ರ ನಾಯಕರಾಗಬಲ್ಲರು, ಔರಂಗಜೇಬ ಎಂದಿಗೂ ಅಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಲ್ಲಿ ನೇರವಾಗಿ ಹೇಳಿದರು. ಮಹಾರಾಣಾ ಪ್ರತಾಪ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲು ಅವರು ಇಲ್ಲಿಗೆ ಬಂದಿದ್ದರು. ಸಮಾಜವಾದಿ ಪಕ್ಷದ ನಾಯಕ ಅಬು ಆಜ್ಮಿಯವರ ಹೆಸರನ್ನು ಉಲ್ಲೇಖಿಸದೆ ಯೋಗಿ ಆದಿತ್ಯನಾಥ್ ಅವರು, ರಾಷ್ಟ್ರೀಯ ನಾಯಕರನ್ನು ಗೌರವಿಸಲು ಸಾಧ್ಯವಾಗದವರು ಕೆಲವು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾತು ಮುಂದುವರೆಸಿ,
1. ಯಾರು ಸನಾತನ ಧರ್ಮ, ಭಾರತ ಮತ್ತು ಅದರ ಸಂಸ್ಕೃತಿಯನ್ನು ನಾಶಮಾಡಲು ಪ್ರಯತ್ನಿಸಿದರೋ, ಯಾರು ನಮ್ಮ ಸಂಪ್ರದಾಯಗಳನ್ನು ತುಳಿಯಲು ಸಂಚು ರೂಪಿಸಿದರೋ ಅವರು ಎಂದಿಗೂ ಭಾರತದ ರಾಷ್ಟ್ರೀಯ ನಾಯಕರಾಗಲು ಸಾಧ್ಯವಿಲ್ಲ.
2. ಯಾರು ರಾಷ್ಟ್ರ ಮತ್ತು ಧರ್ಮಕ್ಕಾಗಿ ಏನನ್ನಾದರೂ ತ್ಯಾಗ ಮಾಡಿದರೋ ನಾವು ಅವರಿಗೆ ರಾಷ್ಟ್ರೀಯ ನಾಯಕರು ಎಂದು ಪರಿಗಣಿಸುತ್ತೇವೆ. ಅದಕ್ಕಾಗಿಯೇ ಮಹಾರಾಣಾ ಪ್ರತಾಪ್, ಛತ್ರಪತಿ ಶಿವಾಜಿ ಮಹಾರಾಜ ಮತ್ತು ಗುರು ಗೋವಿಂದ್ ಸಿಂಗ್ ಅವರ ಕೊಡುಗೆ ಅವಿಸ್ಮರಣೀಯವಾಗಿದೆ.
3. ಯಾರು ಭಾರತೀಯ ಇತಿಹಾಸ ಮತ್ತು ಸಂಪ್ರದಾಯಗಳ ಬಗ್ಗೆ ತಿಳಿದಿಲ್ಲ, ಯಾರಿಗೆ ಭಾರತದ ಸಂಸ್ಕೃತಿಯೂ ಅರ್ಥವಾಗುವುದಿಲ್ಲ. ಅಂತಹ ಜನರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅವರು ಇಂದಿಗೂ ಬಾವಿಯ ಕಪ್ಪೆಯಂತೆ ಜೀವನ ನಡೆಸುತ್ತಿದ್ದಾರೆ.
4. ಮಹಾಕುಂಭ ಮೇಳವನ್ನು ಎಲ್ಲರೂ ನೆನಪಿಸಿಕೊಳ್ಳಿ. ಧರ್ಮದ್ರೋಹಿಗಳು ಮಹಾಕುಂಭ ಮೇಳದ ಬಗ್ಗೆ ನಕಾರಾತ್ಮಕ ಪ್ರಚಾರ ಮಾಡಿದಾಗ, ಅಷ್ಟೇ ಸಂಖ್ಯೆಯ ಜನರು ಮಹಾಕುಂಭ ಮೇಳಕ್ಕೆ ಬರುತ್ತಿದ್ದರು ಮತ್ತು ಅದನ್ನು ಕಡೆಗಣಿಸುತ್ತಿದ್ದರು. ಇಲ್ಲಿ ಕೊಳಕು ಇದೆ ಎಂದು ಯಾರಾದರೂ ಹೇಳಿದರೆ, ಸಾಮಾನ್ಯ ಮನುಷ್ಯ ಮತ್ತು ಸನಾತನ ಧರ್ಮದ ಅನುಯಾಯಿಗಳು ಅವರಿಗೆ ಉತ್ತರಿಸುತ್ತಾರೆ, ‘ಹರಿಯುವ ನೀರು ಮತ್ತು ತಿರುಗುವ ಯೋಗಿಗಳು ಎಂದಿಗೂ ಕೊಳಕಾಗುವುದಿಲ್ಲ. ಎಂದಿಗೂ ಅಪವಿತ್ರವಾಗುವುದಿಲ್ಲ.’
5. ನಾನು ತ್ರಿವೇಣಿ ಮಹಾಸಂಗಮವನ್ನು ಪವಿತ್ರ ಭಾವನೆಯಿಂದ ನೋಡುತ್ತೇನೆ ಮತ್ತು ಅದೇ ಪವಿತ್ರ ಭಾವನೆಯಿಂದ 66 ಕೋಟಿ 30 ಲಕ್ಷ ಭಕ್ತರು ಪ್ರಯಾಗರಾಜ್‌ಗೆ ಆಗಮಿಸಿ ಶ್ರದ್ಧೆಯ ಅನುಭೂತಿ ಪಡೆದರು, ಎಂದು ನಾನು ಭಾವಿಸುತ್ತೇನೆ.
ಸಂಪಾದಕೀಯ ನಿಲುವುಎಷ್ಟು ಹಿಂದೂ ನಾಯಕರು ಈ ಸತ್ಯವನ್ನು ಬಹಿರಂಗವಾಗಿ ಹೇಳಲು ಧೈರ್ಯ ತೋರಿಸುತ್ತಾರೆ? |